ಗೋಣಿಕೊಪ್ಪಲು. ಏ. ೧೩: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ೩೨ ವಲಯಗಳ ಹಾಗೂ ೫ ಹುಲಿ ಸಂರಕ್ಷಿತ ಪ್ರದೇಶ ಒಳಗೊಂಡಿರುವ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಕರ್ನಾಟಕ ರಾಜ್ಯ ವಿವಿಧ ಇಲಾಖೆಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯP್ಷÀ ಎ.ಎಂ. ನಾಗರಾಜ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಕೇತ್ ಪೂವಯ್ಯ ಅವರನ್ನು ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ೨೦೧೭ ರಲ್ಲಿ ಹಿರಿಯ ಅಧಿಕಾರಿ ಓರ್ವ ಮಾಡಿದ ಪ್ರಮಾದದಿಂದ ಅರಣ್ಯ ಇಲಾಖೆಯ ದಿನಗೂಲಿ ನೌಕರರಿಗೆ ಸಮಸ್ಯೆ ಎದುರಾಗಿದೆ. ಅಧಿಕಾರಿ ತೆಗೆದುಕೊಂಡ ಅವೈಜ್ಞಾನಿಕ ನಿರ್ಧಾರ ನೌಕರರಿಗೆ ಮಾರಕವಾಗಿ ಪರಿಣಮಿಸಿದೆ. ಸಾವಿರಾರು ದಿನಗೂಲಿ ನೌಕರರು ಹಗಲಿರುಳು ಪ್ರಕೃತಿ ಹಾಗೂ ವನ್ಯಜೀವಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಪರಿಹಾರ ಲಭಿಸುತ್ತಿಲ್ಲ ಇದೀಗ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ನೌಕರರ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕ ಪೊನ್ನಣ್ಣನವರು ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯದ ಕುರಿತು ಚರ್ಚೆ ನಡೆಸಿ ಆ ಮೂಲಕ ನ್ಯಾಯ ಒದಗಿಸುವ ವಿಶ್ವಾಸವಿದೆ ಎಂದರು.
ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷÀ ಎಸ್.ಎಸ್. ಹರೀಶ್ ನೂತನ ರಾಜ್ಯ ಅಧ್ಯಕ್ಷರು ನೇಮಕಗೊಂಡಿರುವುದು ನಮಗೆ ಆಶಾದಾಯಕ ಬೆಳವಣಿಗೆ ಆಗಿದೆ. ಮುಂದೆ ಸಮಸ್ಯೆಗೆ ಪರಿಹಾರ ಲಭಿಸುವ ಆಶಾಭಾವನೆ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯ ವಿವಿಧ ಇಲಾಖೆಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷÀ ಎ.ಎಂ. ನಾಗರಾಜ್ ಅವರನ್ನು ರಾಜ್ಯದ ಗೌರವ ಅಧ್ಯಕ್ಷರಾಗಿ ಆಯ್ಕೆಮಾಡಲಾಯಿತು.
ರಾಜ್ಯದ ಹುಲಿ ಸಂರಕ್ಷಿತ ಹಾಗೂ ವನ್ಯಜೀವಿ ವಲಯಗಳಾದ ಭದ್ರಕಾಳಿ ಹುಲಿ ಸಂರಕ್ಷಿತ, ವಿಜಯ ನಗರ, ಕಾರ್ಕಳ, ಶಿವಮೊಗ್ಗ, ಚಿಕ್ಕಮಗಳೂರು, ಕುದುರೆಮುಖ, ಸಾಲಿಗ್ರಾಮ ಸೇರಿದಂತೆ ಇನ್ನಿತರ ಅರಣ್ಯ ವಲಯದ ಪದಾಧಿಕಾರಿಗಳು ಸೇರಿದಂತೆ ಸಮಾಜ ಸೇವಕ ವಿ. ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಲೇಖಕಿ ಬಿ.ಕೆ. ಪ್ರಿಯದರ್ಶಿನಿ ಬರೆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನÀಡೆದು ಬಂದ ಹಾದಿಯ ಬಗ್ಗೆ ಬರೆದ ಪುಸ್ತಕವನ್ನು ಸಂಕೇತ್ ಪೂವಯ್ಯ ಅವರಿಗೆ ನೀಡಿದರು.