ಪ್ರತಿಯೊಂದು ಹಬ್ಬ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನೊಳಗೊAಡಿದೆ. ಅದರಲ್ಲಿ ವಿಷು ಹಬ್ಬವೂ ಒಂದು.
ಕ್ಯಾಲೆAಡರ್ ಪ್ರಕಾರ ಜನವರಿ ಒಂದು ಹೊಸ ವರುಷವಾದರೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದವರು ವಿಷು ಹಬ್ಬವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ.
ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಮತ್ತು ಸೌರಮಾನಕ್ಕೆ ವಿಷು ಎಂದು ಆಯಾಯ ರಾಜ್ಯಗಳಲ್ಲಿ ಆಚರಿಸುತ್ತಾರೆ. ಹೆಸರು ಬೇರೆ - ಬೇರೆ ಆದರೂ ನಂಬಿಕೆ ಒಂದೇ.
ಸೌರಮಾನ ವಿಷು ಸಂಪದ್ಬರಿತ ವರ್ಷವಾಗಿ ಪದಾರ್ಪಣೆ ಮಾಡುವುದು ಎಂಬ ವಾಡಿಕೆಯಿದೆ. ಮನೆಯಲ್ಲಿ ಬೆಳೆಸಿದ ಅಕ್ಕಿ, ತರಕಾರಿ, ಧವಸ, ಧಾನ್ಯಗಳನ್ನು ದೇವರ ಕೋಣೆಯಲ್ಲಿಡುತ್ತಾರೆ. ಇದಕ್ಕೆ ‘ವಿಷುಕಣಿ’ ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದು ವಿಷುಕಣಿ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ. ಕಿರಿಯರು - ಹಿರಿಯರ ಕಾಲುಮುಟ್ಟಿ ನಮಸ್ಕರಿಸುವಾಗ ಕೈಯಲ್ಲಿ ಹಣವನ್ನು ನೀಡುವ ಸಂಪ್ರದಾಯ ಇದೆ. ಇದನ್ನು ಮಲಯಾಳಂನಲ್ಲಿ ‘ಕೈನೀಟಂ’ ಎಂದು ಕರೆಯುತ್ತಾರೆ.
ವಿಷು ಹಬ್ಬವನ್ನು ತರವಾಡು ಮನೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಮನೆಗಳಲ್ಲೂ ಆಚರಿಸುತ್ತಾರೆ. ಹಬ್ಬ-ಹರಿದಿನಗಳು ಕುಟುಂಬವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮಹತ್ವ ಪಾತ್ರ ವಹಿಸುತ್ತದೆ.
ನಮ್ಮ ಸಂಸ್ಕೃತಿ, ನಮ್ಮ ಆಚಾರ-ವಿಚಾರಗಳನ್ನು ನಿಷ್ಟೆಯಿಂದ ಕಾಪಾಡಿಕೊಳ್ಳುವುದು ಎಲ್ಲರ ಹೊಣೆ. ಸಂಪದ್ಭರಿತವಾದ ಹೊಸ ವರುಷಕ್ಕೆ ಶುಭಾಶಯಗಳು.
- ಮೋಹಿನಿ ದಯಾನಂದ ರೈ, ಪಾಲಿಬೆಟ್ಟ.