ಕೂಡಿಗೆ, ಏ. ೧೩: ಸೈನಿಕ ಶಾಲೆ ಕೂಡಿಗೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಅಂತರನಿಲಯ ಸಾಂಸ್ಕೃತಿಕ ಸ್ಪರ್ಧೆಯು ನಡೆಯಿತು.
ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನದ ಪ್ರತೀಕವಾಗಿದ್ದ ಈ ಸ್ಪರ್ಧೆಯು ಇದರೊಂದಿಗೆ ವಿವಿಧ ಕಲೆ, ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು. ಪ್ರಸ್ತುತ ಸ್ಪರ್ಧೆಯಲ್ಲಿ ಶಾಲೆಯ ಮೆನನ್, ಕಾರ್ಯಪ್ಪ, ಕಠಾರಿ ಹಾಗೂ ಸುಬ್ರತೋ ನಿಲಯಗಳು ಭಾಗವಹಿಸಿದ್ದವು.
ಸಮೂಹ ಗೀತೆಗಳು, ಸಮೂಹ ನೃತ್ಯಗಳು, ಸಮೂಹ ಜಾನಪದ ನೃತ್ಯಗಳು ಮತ್ತು ಪರಮವೀರ ಚಕ್ರ ಪುರಸ್ಕೃತರ ಶೌರ್ಯದ ಕಥೆಗಳ ಆಧಾರಿತ ಕಿರುನಾಟಕಗಳ ಮೂಲಕ ಆಕರ್ಷಕ ಪ್ರದರ್ಶನಗಳನ್ನು ನೀಡಿದರು. ಪ್ರತಿ ನಿಲಯವು ಶಕ್ತಿ, ಭಾವನೆ ಮತ್ತು ದೇಶಪ್ರೇಮ ತುಂಬಿದ ಕಲಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಪ್ರೇಕ್ಷಕರ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದವು.
ಪ್ರಸ್ತುತ ಸ್ಪರ್ಧೆಯಲ್ಲಿ ಮೆನನ್ ನಿಲಯವು ಎಲ್ಲ ವಿಭಾಗಗಳಲ್ಲಿ ಅಮೋಘವಾದ ಪ್ರದರ್ಶನ ನೀಡಿ ಚಾಂಪಿಯನ್ ನಿಲಯವಾಗಿ ಹೊರಹೊಮ್ಮಿತು. ಇದರೊಂದಿಗೆ ಶಾಲೆಯ ಕೆಡೆಟ್ ಗಿತೇಶ್ ಅತ್ಯುತ್ತಮ ನಟ ಪ್ರಶಸ್ತಿಗೆ, ಕೆಡೆಟ್ ಎನ್‌ಆರ್‌ಇ ಮನು ಅತ್ಯುತ್ತಮ ನಟಿ ಪ್ರಶಸ್ತಿಗೆ ಹಾಗೂ ಕೆಡೆಟ್ ಸಂಪ್ರೀತ್ ಮತ್ತು ಕೆಡೆಟ್ ಸುಹಾನಿ ಅತ್ಯುತ್ತಮ ನಿರೂಪಕ ಪ್ರಶಸ್ತಿಗೆ ಭಾಜನರಾದರೆ, ಮೆನನ್ ನಿಲಯವು ಅತ್ಯುತ್ತಮ ಸಂಪನ್ಮೂಲ ಬಳಕೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮುಖ್ಯ ಅತಿಥಿಯಾಗಿ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಹಾಜರಿದ್ದು, ಸ್ಪರ್ಧಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶಾಲೆಯಲ್ಲಿರುವ ಸಂಪತ್ತುಗಳನ್ನು ಸೃಜನಶೀಲವಾಗಿ ಉಪಯೋಗಿಸಿ ಇನ್ನಷ್ಟು ಸಾಧನೆ ಗಳನ್ನು ಮಾಡುವಂತೆ ಎಲ್ಲಾ ಸ್ಪರ್ಧಿ ಗಳಿಗೆ ಕರೆ ನೀಡಿದರು. ಇವರೊಂದಿಗೆ ಶಾಲೆಯ ಉಪ ಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಕೀಯ ಅಧಿಕಾರಿ ಡಾ. ಚಿನ್ಮಯಿ ಹಾಗೂ ಹಿರಿಯ ಶಿಕ್ಷಕ ವಿಭಿನ್‌ಕುಮಾರ್ ಹಾಜರಿದ್ದರು. ಶಾಲೆಯ ಎಲ್ಲಾ ಶೈಕ್ಷಣಿಕ ಹಾಗೂ ಆಡಳಿತ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಕಾವೇರಿಯಮ್ಮ ಮತ್ತು ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ ಶಿಕ್ಷಕಿ ಶ್ರುತಿ ವಿಬಿನ್ ಕುಮಾರ್ ಹಾಜರಿದ್ದರು.
ಹಿರಿಯ ತೀರ್ಪುಗಾರರಾಗಿ ದಿವ್ಯಾ ಸಿಂಗ್ ತಮ್ಮ ಭಾಷಣದಲ್ಲಿ ಸ್ಪರ್ಧಾಳುಗಳಲ್ಲಿದ್ದ ಸೃಜನಶೀಲತೆ ಮತ್ತು ಉತ್ಸಾಹವನ್ನು ಪ್ರಶಂಸಿಸಿ, ಪ್ರತಿಯೊಂದು ವಿಭಾಗದ ಪ್ರದರ್ಶನ ದಲ್ಲೂ ಕಂಡುಬAದ ವಿದ್ಯಾರ್ಥಿಗಳ ಶ್ರಮ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು. ಶಾಲೆಯು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಪ್ರದಾನ ಮಾಡುವುದ ರೊಂದಿಗೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವಿಫುಲವಾದ ಅವಕಾಶಗಳನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ, ದೈಹಿಕ ಶಿಕ್ಷಕರು, ಸಮಾನ್ಯ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.