ಚಿತ್ರ-ವರದಿ, ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಏ.೧೪: ಇಲ್ಲಿಗೆ ಸಮೀಪ ಅರ್ವತೋಕ್ಲುವಿನಲ್ಲಿರುವ ಅತ್ಲಾನ್ ಟರ್ಫ್ ಮೈದಾನದಲ್ಲಿ ಮುಕ್ಕಾಟಿರ (ಬೇತ್ರಿ) ಕುಟುಂಬದಿAದ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾಟದಲ್ಲಿ ಮುಕ್ಕಾಟಿರ (ದೇವಣಗೇರಿ) ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಕಳ್ಳಿಚಂಡ ಕುಟುಂಬ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ರೋಮಾAಚಕಾರಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಳ್ಳಿಚಂಡ ತಂಡದ ಮೇಲೆ ಆರಂಭದಿAದಲೂ ಹಿಡಿತ ಸಾಧಿಸಿದ್ದ ಮುಕ್ಕಾಟಿರ (ದೇವಣಗೇರಿ) ತಂಡವು ಮೊದಲ ಅರ್ಧದಲ್ಲಿ ೧-೦ ಗೋಲುಗಳ ಅಂತರ ಕಾಯ್ದುಕೊಂಡ ಮುಕ್ಕಾಟಿರ ದೇವಣಗೇರಿ ತಂಡವು ದ್ವಿತಿಯಾರ್ಧದಲ್ಲಿ ತನ್ನ ಗೋಲಿನ ಅಂತರವನ್ನು ೩-೦ ಹೆಚ್ಚಿಸಿಕೊಳ್ಳುವ ಮೂಲಕ ಪ್ರತಿಷ್ಠಿತ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ನಾಗಿ ಹೊರಹೊಮ್ಮಿತ್ತು. ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಫುಟ್ಬಾಲ್ ಪಂದ್ಯಾವಳಿಯನ್ನು ಆನಂದಿಸಿದರು.
ಕಳೆದ ೫ ದಿನಗಳಿಂದ ನಾಕೌಟ್ ಮಾದರಿಯಲ್ಲಿ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯು ನಡೆಯಿತು. ವಿವಿಧ ಭಾಗದಿಂದ ೭೩ ತಂಡಗಳು ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುವ ಮೂಲಕ ಸುತ್ತಮುತ್ತಲಿನ ಫುಟ್ಬಾಲ್ ಪ್ರಿಯರಿಗೆ ರಸದೌತಣ ನೀಡಿದವು. ಸಂಜೆಯ ವೇಳೆ ಟರ್ಫ್ ಮೈದಾನದಲ್ಲಿ ಹೊನಲು ಬೆಳಕಿನ ನಡುವೆ ಪಂದ್ಯಾಟಗಳು ಉತ್ತಮವಾಗಿ ನಡೆದ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕ್ರಿಡಾಭಿಮಾನಿಗಳು ಆಗಮಿಸಿದ್ದರು. ಕೊಡವ ಕೌಟುಂಬಿಕ ಪಂದ್ಯಾವಳಿಯ ಅಧ್ಯಕ್ಷ ಮುಕ್ಕಾಟಿರ ಮಧು ದೇವಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅಂತಿಮ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕ್ರೀಡೆಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ. ಇವುಗಳನ್ನು ಯುವ ಸಮುದಾಯ ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮುಕ್ಕಾಟೀರ (ಬೇತ್ರಿ) ಕುಟುಂಬವು ಆಯೋಜಿಸಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ. ದ.ಕೊಡಗಿನಲ್ಲಿ ಯಾವುದೇ ಕ್ರೀಡೆ ನಡೆದರೂ ಈ ಭಾಗದ ಸಾವಿರಾರು ಕ್ರೀಡಾಭಿಮಾನಿಗಳು ಆಗಮಿಸಿ ಪಂದ್ಯಾವಳಿಯನ್ನು ಯಶಸ್ವಿ ಗೊಳಿಸುತ್ತಾರೆ. ಟರ್ಫ್ ಮೈದಾನಕ್ಕೆ ಒಲವು ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನದಲ್ಲಿ ದಕ್ಷಿಣ ಕೊಡಗಿನಲ್ಲಿ ಉತ್ತಮ ಗುಣಮಟ್ಟದ ಟರ್ಫ್ ಮೈದಾನವನ್ನು ನಿರ್ಮಾಣ ಮಾಡುವ ಮೂಲಕ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ, ದಾನಿಗಳಾದ ಮಾಚೆಟ್ಟಿರ ಜನಿತ್ ಅಯ್ಯಪ್ಪ ಮಾತನಾಡಿ ಕೊಡಗಿನಲ್ಲಿ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಯುವ ಸಮುದಾಯ ವಿವಿಧ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವಾಗಿದೆ. ಮೊದಲ ಬಾರಿಗೆ ಮುಕ್ಕಾಟಿರ (ಬೇತ್ರಿ) ಕುಟುಂಬವು ಟರ್ಫ್ ಮೈದಾನದಲ್ಲಿ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಸಾಕಷ್ಟು ಯುವಕರಿಗೆ ಉತ್ತಮ ವೇದಿಕೆ ನಿರ್ಮಿಸಿದೆ. ಯುವಕರು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬ್ಯಾಡ್ಮಿಂಟನ್ ರಾಷ್ಟಿçÃಯ ಆಟಗಾರ್ತಿ ಪೊನ್ನಚೆಟ್ಟಿರ ಅಶ್ವಿನಿ ಪೊನ್ನಪ್ಪ, ಮುಕ್ಕಾಟಿರ ಕುಟುಂಬದ ನಿರ್ದೇಶಕರಾದ ಉತ್ತಮ್ ಬೋಪಣ್ಣ, ಪದಾಧಿಕಾರಿಗಳಾದ ಮುಕ್ಕಾಟಿರ ದೃಶ್ಯ ಬೋಪಣ್ಣ, ದಿವಿನ್ ತಿಮ್ಮಯ್ಯ, ರವಿ ಚಿಯಣ್ಣ, ಕ್ರೀಡಾ ಸಂಚಾಲಕರಾದ ಸತ್ಯ ಪೆಮ್ಮಯ್ಯ, ಮಣವಟ್ಟಿರ ಮಧು ಬೋಪಣ್ಣ, ಕೊಡವ ಹಾಕಿ ಆಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಮುದ್ದಂಡ ಹಾಕಿ ಪಂದ್ಯಾವಳಿ ಅಧ್ಯಕ್ಷ ಮುದ್ದಂಡ ರಿಶಿತ್ ಸುಬ್ಬಯ್ಯ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮುಕ್ಕಾಟಿರ ಸತ್ಯ ಪೆಮ್ಮಯ್ಯ ಸ್ವಾಗತಿಸಿ, ಕುಟುಂಬ ಪರಿಚಯವನ್ನು ಮುಕ್ಕಾಟಿರ ಸೌಮ್ಯ ಕಾಳಪ್ಪ ನಿರ್ವಹಿಸಿದರು. ಮೂಕಚಂಡ ಬೊಳ್ಳಮ್ಮ ಹಾಗೂ ಅಜ್ಜೆಟ್ಟಿರ ವಿಕ್ರಂ ಬೋಪಣ್ಣ ನಿರೂಪಿಸಿ, ರವಿ ಚೀಯಣ್ಣ ವಂದಿಸಿದರು. ಮುಕ್ಕಾಟಿರ ಕುಟುಂಬದ ಹಿರಿಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕಗಳನ್ನು ವಿತರಿಸ ಲಾಯಿತು. ಕಾರ್ಯಕ್ರಮದ ಅಂಗವಾಗಿ ವಾಲಗತ್ತಾಟ್ ಸೇರಿದಂತೆ ಇನ್ನಿತರ ಕಾರ್ಯಕ್ರಮ ಜರುಗಿತು.
ಪಂದ್ಯಾವಳಿಯ ಯಶಸ್ಸಿನಲ್ಲಿ ಪಂದ್ಯಾವಳಿಯ ನಿರ್ದೇಶಕ ಮುಕ್ಕಾಟಿರ ಬೋಪಣ್ಣ, ಕುಟುಂಬದ ಕ್ರೀಡಾ ಸಂಘದ ಕಾರ್ಯದರ್ಶಿ ಪೊನ್ನಣ್ಣ, ಸಂಚಾಲಕ ಉತ್ತಪ್ಪ, ಕುಟುಂಬದ ಅಧ್ಯಕ್ಷ ಮಧು ದೇವಯ್ಯ ಸೇರಿದಂತೆ ಇತತರು ಸಹಕರಿಸಿದರು.