ಕಣಿವೆ, ಏ. ೧೪: ಕುಶಾಲನಗರ ತಾಲೂಕು ತೊರೆನೂರು ಗ್ರಾಪಂ ವ್ಯಾಪ್ತಿಯಲ್ಲಿನ ಅಳುವಾರ ಗ್ರಾಮದ ಗ್ರಾಮದೇವತೆ ಅಳುವಾರದಮ್ಮ ದೇವರ ಎರಡು ದಿನಗಳ ಅವಧಿಯ ವಾರ್ಷಿಕ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಗುರುವಾರ ಚೈತ್ರ ಮಾಸ ಉತ್ತರ ಪಾದ ಶುಭ ನಕ್ಷತ್ರದ ಮುಂಜಾನೆ ೪ ಗಂಟೆಗೆ ದೇವಾಲಯದಲ್ಲಿ ವಿವಿಧ ಹೋಮ ಹಾಗೂ ಧಾರ್ಮಿಕ ವಿಧಿಗಳು ಜರುಗಿದವು. ಹಬ್ಬದ ಅಂಗವಾಗಿ ಗ್ರಾಮದ ಬಹುತೇಕ ಮನೆಗಳು ತಳಿರು ತೋರಣ ಹಾಗೂ ಅಲಂಕೃತ ವಿದ್ಯುತ್ ದೀಪಗಳೊಂದಿಗೆ ಅಲಂಕರಿಸ ಲಾಗಿತ್ತು. ಅಳುವಾರದ ಸುತ್ತಮುತ್ತಲಿನ ಅಳಿಲು ಗುಪ್ಪೆ, ಬಸರಿಗುಪ್ಪೆ, ಅರಿಶಿಣ ಗುಪ್ಪೆ, ತೊರೆನೂರು ದೊಡ್ಡಳುವಾರ, ಆರನೇ ಹೊಸಕೋಟೆ ಮೊದಲಾದ ಗ್ರಾಮಗಳ ಸಹಸ್ರಾರು ಭಕ್ತರು ಪೂಜೋತ್ಸವದಲ್ಲಿ ಭಾಗಿಯಾದರು. ಮರುದಿನ ಶುಕ್ರವಾರ ಬೆಳಗ್ಗೆ ದೇವಿಯ ಸನ್ನಿಧಿಯಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹಲವು ಭಕ್ತರು ಪ್ರಾಣಿಗಳ ಬಲಿಕೊಟ್ಟು ಭಕ್ತಿ ಮೆರೆದರು.

ಬಳಿಕ ತಮ್ಮ ತಮ್ಮ ಮನೆಗಳಿಗೆ ಬೇರೆ ಬೇರೆ ಊರುಗಳಿಗೆ ವಿವಾಹ ಮಾಡಿಕೊಟ್ಟಿದ್ದ ಹೆಣ್ಣು ಮಕ್ಕಳು ಒಳಗೊಂಡAತೆ ಮಿತ್ರರು, ನೆರೆ ಹೊರೆಯ ಗ್ರಾಮಗಳ ಭಕ್ತ ಸ್ನೇಹಿತರನ್ನು ಆಹ್ವಾನಿಸಿ ವಿವಿಧ ಭಕ್ಷö್ಯ ಭೋಜನ ಸಿದ್ದಪಡಿಸಿ ಉಣ ಬಡಿಸುತ್ತಿದ್ದುದು ಕಂಡು ಬಂತು. ಹಾಗೆಯೇ ದೇವಾಲಯದ ಆವರಣದಲ್ಲೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್.ರಮೇಶ್, ಗೌರವಾಧ್ಯಕ್ಷ ಟಿ.ಆರ್. ಚಂದ್ರ, ಗೌರವ ಸಲಹೆಗಾರ ಕಾಳಶೆಟ್ಟಿ, ಶಿವಪ್ಪಯ್ಯ, ಉಪಾಧ್ಯಕ್ಷ ಹೆಚ್.ಎಂ.ಸAತೋಷ್, ಕಾರ್ಯದರ್ಶಿ ಎ.ಪಿ.ಸುನಿಲ್, ಸಹಕಾರ್ಯದರ್ಶಿ ಎ.ಜಿ.ಸುನಿಲ್, ಖಜಾಂಚಿ ಎ.ಜಿ.ಜಗದೀಶ್, ನಿರ್ದೇಶಕರಾದ ಗುರುಲಿಂಗಪ್ಪ, ಮಾಣಿಚ್ಚ, ತ್ರಿಲೋಕ, ಶಿವರಾಜು, ಹರೀಶ್, ಹಾರುವಯ್ಯ, ಸ್ವಾಮಿ, ರಾಜೇಶ್, ನಾಗೇಶ್, ದೇವಾಲಯದ ಉಸ್ತುವಾರಿ ಶಿವಾನಂದ, ಅರ್ಚಕ ಚಂದ್ರ ಮೊದಲಾದವರಿದ್ದರು.