ಮಡಿಕೇರಿ, ಏ. ೧೪: ಹಿಂದೂ ಮಲೆಯಾಳಿ ಸಮುದಾಯ ಹಾಗೂ ತುಳುನಾಡಿನ ಜನರ ಹೊಸ ವರ್ಷವಾದ ವಿಷು ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ - ಸಂಭ್ರಮದಿAದ ಆಚರಿಸಲಾಯಿತು.

ಶನಿವಾರಸಂತೆ ವ್ಯಾಪ್ತಿಯಲ್ಲಿ

ಮುಳ್ಳೂರು: ಸೋಮವಾರ ನಡೆದ ವಿಷು ಹಬ್ಬವನ್ನು ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಹಿಂದೂ ಮಲೆಯಾಳಿ ಬಾಂಧವರು ಸಡಗರ ಸಂಭ್ರಮದಿAದ ಆಚರಿಸಿದರು. ಶನಿವಾರಸಂತೆ ಪಟ್ಟಣ ಸೇರಿದಂತೆ ಮಾಲಂಬಿ, ಕಣಿವೆಬಸವನಹಳ್ಳಿ, ಮುಳ್ಳೂರು, ಜಾಗೇನಹಳ್ಳಿ, ಗೋಪಾಲಪುರ, ಒಡೆಯನಪುರ, ಹೊಸಗುತ್ತಿ, ಆಲೂರುಸಿದ್ದಾಪುರ ಮುಂತಾದ ಕಡೆಗಳಲ್ಲಿ ವಿಷು ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು.

ತಮ್ಮ ಮನೆಗಳಲ್ಲಿ ಸಾಂಪ್ರದಾಯಕ ವಿಷುಕಣಿ ಸಂಕೇತವಾಗಿ ಲೋಹದ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನ ಕಾಯಿ, ಹಲಸಿನ ಕಾಯಿ, ಮಾವಿನಕಾಯಿ, ಕೆಲವು ತರಕಾರಿ ಸೇರಿದಂತೆ ಹೊನ್ನೆ ಮರದ ಹೂವು, ಚಿನ್ನ, ಬೆಳ್ಳಿ, ಹಣ, ಹೊಸ ಬಟ್ಟೆ, ಪಂಚಾಗ ಇನ್ನಿತ್ತರ ವಸ್ತುಗಳನ್ನಿಟ್ಟು ನಂತರ ಆ ತಟ್ಟೆಯನ್ನು ಮನೆಯ ದೇವರ ಕೋಣೆಯಲ್ಲಿಟ್ಟು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮನೆ ದೇವರಾದ ಶ್ರೀ ಕೃಷ್ಣನ ವಿಗ್ರಹ, ಭಾವಚಿತ್ರಕ್ಕೆ ದೀಪ ಬೆಳಗಿಸಿ ಮನೆ ಮಂದಿ ಸೇರಿಕೊಂಡು ಭಯಭಕ್ತಿಯಿಂದ ಪೂಜಿಸಿ ಕನ್ನಡಿಯ ಪ್ರತಿಬಿಂಬ ಮೂಲಕ ಶ್ರೀಕೃಷ್ಣನ ವಿಗ್ರಹವನ್ನು[ದೇವರನ್ನು] ಮನೆ ಮಂದಿ ನೋಡಿಕೊಂಡು ವಿಷು (ಹೊಸ ವರ್ಷ) ಹಬ್ಬವನ್ನು ಆಚರಿಸಿದರು. ನಂತರ ಮನೆ ಮಂದಿ ಅಕ್ಕ ಪಕ್ಕದವರು ಸೇರಿಕೊಂಡು ಬಗೆಬಗೆಯ ಸಿಹಿ ಊಟ ತಯಾರಿಸಿ ಭೋಜನ ಮಾಡಿದರು.

ಸುಂಟಿಕೊಪ್ಪ

ಸುಂಟಿಕೊಪ್ಪ: ಸುಂಟಿಕೊಪ್ಪ ಭಾಗದಲ್ಲಿ ನೆಲೆ ನಿಂತಿರುವ ಮಲೆಎಯಾಳಿ ಸಮಾಜದವರು ವಿಷು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿAದ ಆಚರಿಸಿದರು.

ಆನಂತರ ವಿಷು ಹಬ್ಬದ (ಕೊನ್ನಪೂ) ಹೊನ್ನೆಹೂ, ವಿಷು ಕಣಿಗಳಾದ (ಅಡ) ತಿಂಡಿ ವಿವಿಧ ಬಗೆಯ ಹಣ್ಣು ಹಂಪಲು, ತರಕಾರಿ, ದವಸಧಾನ್ಯ ಹಲಸಿನಗುಜ್ಜೆ, ಚಿನ್ನದಸರ ಹಾಗೂ ಹಣವನ್ನು ದೇವರ ಕೋಣೆಯಲ್ಲಿ ಇರಿಸಿ ಹೊಸವರ್ಷದಿಂದ ಕುಟುಂಬ ವರ್ಗಕ್ಕೆ ಐಶ್ವರ್ಯ ಆರೋಗ್ಯ ನೆಮ್ಮದಿ ನೀಡಿಲೆಂದು ದೇವರಲ್ಲಿ ಪ್ರಾರ್ಥಿಸಿದರು. ಮಧ್ಯಾಹ್ನ ವಿವಿಧ ಬಗೆಯ ಸಸ್ಯಹಾರಿ ಭೋಜನವನ್ನು ತಯಾರಿಸುವ ಮೂಲಕ ಮನೆಯ ಮಂದಿ ಹಾಗೂ ಬಂಧು ಮಿತ್ರರು ಸೇರಿ ಸ್ವೀಕರಿಸಿ ಸಂಭ್ರಮಿಸಿದರು.