ಮಡಿಕೇರಿ, ಏ. ೧೪: ಮೋಡ ಕವಿದ ವಾತಾವರಣದೊಂದಿಗೆ ಇಂದು ಸಂಜೆ ವೇಳೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ರಭಸದಿಂದ ಮಳೆ ಸುರಿದಿದೆ. ಗಾಳಿಯೂ ಬೀಸಿದ ಪರಿಣಾಮ ಕೆಲವೆಡೆ ಹಾನಿ ಕೂಡ ಸಂಭವಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಜೆ ವೇಳೆ ಗುಡುಗು - ಮಿಂಚು ಸಹಿತ ಜೋರಾಗಿ ಮಳೆ ಸುರಿದಿದೆ. ದಿಢೀರನೆ ಮಳೆ ಸುರಿದಿದ್ದರಿಂದ ಕೊಡೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಯಿತು.

ಮರ ಬಿದ್ದು ಹಾನಿ

ಮಡಿಕೇರಿ ಸನಿಹದ ಅವಂದೂರು ಗ್ರಾಮದಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿ - ಮಳೆಗೆ ಮನೆಯ ಸಮೀಪವಿದ್ದ ಅಡಿಕೆ ಮರಗಳು ಮುರಿದು ಬಿದ್ದಿವೆ. ಮರಗಳು ಕಾರು, ಬೈಕು ಹಾಗೂ ಮನೆಯ ಮೇಲೆ ಬಿದ್ದಿದ್ದರಿಂದ ವಾಹನಗಳು ಹಾಗೂ ಮನೆಗೆ ಹಾನಿಯಾಗಿದೆ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ಸಿಡಿಲಬ್ಬರದ ಆಲಿಕಲ್ಲು ಮಳೆ

ಮಾದಾಪುರ: ಮಾದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಧ್ಯಾಹ್ನ ಬಳಿಕ ಬಿಸಿಲಿನ ತಾಪ ಇಳಿಮುಖವಾಗಿತ್ತು. ಆ ಬೆನ್ನಲ್ಲೇ ಸೌರಮಾನ ಯುಗಾದಿ ಹಾಗೂ ವಿಷು ಉತ್ಸವದ ಭೋಜನ ಆಗುವಷ್ಟರಲ್ಲಿ ಮೋಡ ಆವರಿಸಿಕೊಂಡು ಮಳೆಯು ಸುರಿಯಲಾರಂಭಿಸಿತು.

ಅರೆಕ್ಷಣದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ಮರುಗಳಿಗೆಯಲ್ಲಿ ಆಲಿಕಲ್ಲು ಕೂಡ ಬಿದ್ದಿತು. ಸುಮಾರು ಒಂದು ಗಂಟೆ ಕಾಲ ಮಳೆ ಸುರಿದ ರಸ್ತೆ, ಚರಂಡಿಗಳಲ್ಲಿ ನೀರು ಹರಿದು ಕಸಕಡ್ಡಿಯೆಲ್ಲಾ ಕೊಚ್ಚಿಕೊಂಡು ಹೋಗುತ್ತಿದ್ದ ಸನ್ನಿವೇಶ ಸಾಮಾನ್ಯವಾಗಿತ್ತು.

ಕೂಡಿಗೆ ವಿಭಾಗದಲ್ಲಿ

ಕೂಡಿಗೆ: ಕೂಡಿಗೆ ವ್ಯಾಪ್ತಿಯ ಕೂಡುಮಂಗಳೂರು, ಹೆಬ್ಬಾಲೆ, ಹುದುಗೂರು , ಕೂಡಿಗೆ, ಸೀಗೆಹೊಸೂರು ವ್ಯಾಪ್ತಿಯಲ್ಲಿ ಗುಡುಗು ಸಹಿತ ಅರ್ಧ ಗಂಟೆಗಳ ಕಾಲ ಭಾರೀ ಗಾಳಿ ಮಳೆಯೊಂದಿಗೆ ಮಳೆ ಸುರಿದಿದೆ.

ವೀರಾಜಪೇಟೆ

ವೀರಾಜಪೇಟೆ : ವೀರಾಜಪೇಟೆ ವ್ಯಾಪ್ತಿಯಲ್ಲಿ ವೀರಾಜಪೇಟೆ ಪಟ್ಟಣ ಸೇರಿದಂತೆ ಆರ್ಜಿ, ಬೆಟೋಳಿ, ಬಿಟ್ಟಂಗಾಲ ಕೆದಮುಳ್ಳೂರು, ಕದನೂರು, ಪಾಲಂಗಾಲ, ಅರಮೇರಿ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಗಾಳಿಯೂ ವಿಪರೀತವಾಗಿತ್ತು.

ಕಣಿವೆ ಸುತ್ತಮುತ್ತ

ಕಣಿವೆ : ಹೆಚ್ಚಿನ ಪ್ರಮಾಣದಲ್ಲಿ ಕೃಷಿಕರೇ ಇರುವ ಕಣಿವೆ ಗ್ರಾಮದ ಆಸುಪಾಸಿನ ಗ್ರಾಮಗಳ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಉತ್ತಮ ವರ್ಷಧಾರೆಯಾಗಿದೆ. ಇದರಿಂದಾಗಿ ಶುಂಠಿ ಬಿತ್ತನೆ ಕೈಗೊಂಡ ಕೃಷಿಕರಿಗೆ ಬಹಳಷ್ಟು ಹರ್ಷವುಂಟಾಗಿದೆ. ಶುಂಠಿಯ ಜೊತೆಗೆ ಸಿಹಿಗೆಣಸು, ಮರಗೆಣಸು, ಕೆಸ, ಜೋಳ, ತರಕಾರಿ ಮೊದಲಾದ ಬೆಳೆ ಕೈಗೊಂಡ ರೈತರಿಗೂ ವರುಣ ಸಂತಸ ತಂದಿದೆ. ಕೊಳವೆ ಬಾವಿಗಳಿಂದ ನೀರನ್ನು ಮೇಲೆತ್ತಿ ನಿರಂತರವಾಗಿ ಹೊರಹಾಕಿದ ಪರಿಣಾಮ ಅಂತರ್ಜಲ ಬಹುತೇಕ ಕುಸಿತ ಕಂಡಿದ್ದು ಇದೀಗ ಸುರಿದ ಮಳೆಯಿಂದ ಬಾಯಾರಿದ ಭುವಿಗೂ ಒಂದಷ್ಟು ನೆಮ್ಮದಿ ದೊರತಂತಿದೆ.

ಕಡAಗ

ಕಡAಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಅರಪಟ್ಟು, ಪೊದವಾಡ ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮೊಟ್ಟೆ, ಚೌಕಿ ವ್ಯಾಪ್ತಿಯಲ್ಲಿ ಗುಡುಗು, ಗಾಳಿ ಸಹಿತ ಮಳೆ ಸುರಿದಿದೆ. ಈ ಭಾಗದಲ್ಲಿ ೧.೫ ಇಂಚಿಗೂ ಅಧಿಕ ಮಳೆಯಾದ ವರದಿಯಾಗಿದೆ.

ಚೆಯ್ಯಂಡಾಣೆಯಲ್ಲಿ ಆಲಿಕಲ್ಲು ಮಳೆ

ಚೆಯ್ಯಂಡಾಣೆ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣ, ನರಿಯಂದಡ, ಚೇಲಾವರ, ಕೊಕೇರಿ, ಎಡಪಾಲ, ಕರಡ, ಅರಪಟ್ಟು ವ್ಯಾಪ್ತಿಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಚೆಯ್ಯಂಡಾಣೆ ಪಟ್ಟಣ ಸೇರಿದಂತೆ ವಿವಿಧೆೆಡೆ ೧.೫೦ ರಿಂದ ೨ ಇಂಚಿಗೂ ಅಧಿಕ ಮಳೆಯಾಗಿದೆ.

ಭಾಗಮಂಡಲ

ಭಾಗಮAಡಲ: ಭಾಗಮಂಡಲದಲ್ಲಿ ಗಾಳಿ ಸಹಿತ ಗುಡುಗು ಮಿಂಚಿನೊAದಿಗೆ ಭಾರೀ ಮಳೆಯಾಗಿದೆ. ನಿರಂತರ ಎರಡು ಗಂಟೆಗಳ ಕಾಲ ಮಳೆ ಸುರಿಯಿತು.