ಐಗೂರು, ಏ. ೧೪: ಐಗೂರಿನ ಆದಿಶಕ್ತಿ ಮಹಾತಾಯಿ ಪಾಷಾಣಮೂರ್ತಿ ಅಮ್ಮನವರ ೪೯ನೇ ವರ್ಷದ ದೈವಕೋಲ ನೇಮೋತ್ಸವ ತಾ. ೨೪ ರಿಂದ ೨೯ ರವರೆಗೆ ನಡೆಯಲಿದೆ.
ತಾ. ೨೪ ರಂದು ಬೆಳಿಗ್ಗೆ ೯ಕ್ಕೆ ಗಣಪತಿ ಹೋಮ, ೧೧ ಗಂಟೆಗೆ ಶುದ್ಧಿ ಪುಣ್ಯ, ರಾತ್ರಿ ೮ ಗಂಟೆಗೆ ಅಣ್ಣಪ್ಪಸ್ವಾಮಿ ದರ್ಶನ, ೯ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ತಾ. ೨೫ ರಂದು ಬೆಳಿಗ್ಗೆ ೫ ಗಂಟೆಗೆ ಕಲಶÀದ ಮೆರವಣಿಗೆ, ಬೆ. ೧೦ ಗಂಟೆಗೆ ಮಹಾಪೂಜೆ, ಬೆ. ೧೧ ಗಂಟೆಗೆ ಹಣ್ಣುಕಾಯಿ ಪೂಜೆ, ಬೆ. ೧೧.೩೦ ಗಂಟೆಗೆ ಆದಿಶಕ್ತಿ ಮಹಾತಾಯಿ ದರ್ಶನ, ೧ ಗಂಟೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ತಾ. ೨೬ ರಂದು ಕೋಲಗಳು ಆರಂಭವಾಗಲಿದ್ದು, ಸಂಜೆ ೭ ಗಂಟೆಗೆ ಭಂಡಾರ ಆಗಮನ, ರಾತ್ರಿ ೮ ಗಂಟೆಗೆ ಅನ್ನದಾನ ಕಾರ್ಯಕ್ರಮ, ೮.೩೦ ಗಂಟೆಗೆ ವಸ್ತçದಾನ ಕಾರ್ಯಕ್ರಮ, ೯.೩೦ ಗಂಟೆಗೆ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ ನಡೆಯಲಿದೆ.
ತಾ. ೨೭ ರಂದು ಬೆಳಗಿನ ಜಾವ ೨.೩೦ ಗಂಟೆಗೆ ಕುಪ್ಪೆ ಪಂಜುರ್ಲಿ ದೈವದ ಕೋಲ, ಬೆಳಗಿನ ಜಾವ ೪ ಗಂಟೆಗೆ ಕೊರತಿ ದೈವದ ಕೋಲ, ೬ಕ್ಕೆ ಕೊರಗಜ್ಜ ದೈವದ ಕೋಲ, ಬೆಳಿಗ್ಗೆ ೮.೩೦ ಗಂಟೆಗೆ ಲಘು ಉಪಹಾರ, ಬೆ. ೯ಕ್ಕೆ ಧರ್ಮ ದೈವದ ಕೋಲ, ಬೆ. ೧೧ ಗಂಟೆಗೆ ಭಂಡಾರ ನಿರ್ಗಮನ, ಬೆ. ೧೨ ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ.
ತಾ. ೨೯ ರಂದು ೧೦.೩೦ ಗಂಟೆಗೆ ಭದ್ರಕಾಳಿಯ ದೇವಿಯ ಕೋಲ, ಮಧ್ಯಾಹ್ನ ೧೨ ಗಂಟೆಗೆ ಜಾಗದ ಗುಳಿಗನ ಕೋಲ, ಮಧ್ಯಾಹ್ನ ೧.೩೦ ಗಂಟೆಗೆ ಸರ್ವ ದೈವಗಳ ಎಡೆ ಪ್ರಸಾದ, ಅಪರಾಹ್ನ ೩ಕ್ಕೆ ಮಹಾಮಂಗಳಾರತಿ, ಸಂಜೆ ೬ಕ್ಕೆ ದೈವನಡೆ ಮುಚ್ಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ದೈವದರ್ಶಿಗಳಾದ ಎಸ್.ಪಿ. ಆನಂದ ಪೂಜಾರಿ ತಿಳಿಸಿದ್ದಾರೆ.