ಮಡಿಕೇರಿ, ಏ. ೧೪: ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊAಡಿತು. ತಾ. ೨೬ ರಂದು ಶ್ರೀ ಮಾದೇಶ್ವರ ಹಾಗೂ ಶ್ರೀ ಭಗವತಿ ದೇವಿ ಸನ್ನಿಧಾನದಲ್ಲಿ ಸಂಜೆ ೭ ಗಂಟೆಗೆ ಅಂದಿಬೊಳಕ್, ತಾ. ೨೭ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ನೆರವಂಡ ಕುಟುಂಬದ ಐನ್‌ಮನೆಯಿಂದ ಭಂಡಾರ ತರುವುದು, ೧೦ ಗಂಟೆಗೆ ಬೋಡ್ ಹಬ್ಬ, ನಾಥÀಂಡ ಕಲ್ಲಿಗೆ ತೆಂಗಿನಕಾಯಿ ಅರ್ಪಣೆ, ಮಧ್ಯಾಹ್ನ ೧೨ ಗಂಟೆಗೆ ಕೂಡಂಡ ಕುಟುಂಬದ ಐನ್‌ಮನೆಯಲ್ಲಿ ಸಾಮೂಹಿಕ ಪಟ್ಟಣಿಕಾರ್ಯ ನಡೆಯಿತು. ಸಂಜೆ ೫ ಗಂಟೆಗೆ ಶ್ರೀ ಭಗವತಿ ದೇವರು ಹೊರಬರುವುದು. ತಾ. ೨೮ ರಂದು ಸಂಜೆ ೪ ಗಂಟೆಗೆ ಶ್ರೀ ಭಗವತಿ ದೇವಿಯ ಅವಭೃತ ಸ್ನಾನ, ಕಾವೇರಿ ಹೊಳೆಯಲ್ಲಿ ಸ್ನಾನದ ಬಳಿಕ ಚಂಡೆ ಮದ್ದಳೆಯೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ನೃತ್ಯ, ಸಂಪ್ರೋಕ್ಷಣೆ, ೧೦ ಗಂಟೆಗೆ ಅನ್ನಸಂತರ್ಪಣೆ ನಡೆಯಿತು.
ತಾ. ೨೯ಕ್ಕೆ ಶುದ್ಧ ಕಲಶ ಬಳಿಕ ದೇವಸ್ಥಾನದಿಂದ ಭಂಡಾರ ಇಳಿಸುವುದು. ತಾ. ೩೦ ರಂದು ಬೆಳಿಗ್ಗೆ ಶ್ರೀ ಭದ್ರಕಾಳಿ ಹಾಗೂ ಶ್ರೀ ಎತ್ತೋಳಮ್ಮೆ ದೇವಿಯ ಮುಡಿತರೆ ಜರುಗಿತು. ತಾ. ೩೧ ರಂದು ಮೇಲೇರಿಗೆ ಸೌದೆ ಕಡಿಯುವುದು ರಾತ್ರಿ ೭ಕ್ಕೆ ಕೊಟ್ಟಿ ಪಾಡುವೊ, ಶ್ರೀ ವಿಷ್ಣುಮೂರ್ತಿ ದೇವರ ಗುಡಿಯ ಬಾಗಿಲು ತೆರೆಯುವುದು, ತೋಯತ ತೆರೆ ನಡೆಯಿತು.
ತಾ. ೧ ರಂದು ರಾತ್ರಿ ೯ ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ, ಮಂದಣ್ಣ ಮೂರ್ತಿಯ ಕೋಲ, ತಾ. ೨ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಕಲಿಯಾಟಜಪ್ಪ ತೆರೆ, ೧೦ ಗಂಟೆಗೆ ಚೌರಿರ ಕುಟುಂಬದ ಐನ್‌ಮನೆಯಲ್ಲಿ ಫಲಹಾರ ಸ್ವೀಕಾರ, ೧೧ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿಗೆ ಬೀಳುವ ದೃಶ್ಯ ನೆರೆದಿದ್ದ ಸಾವಿರಾರು ಭಕ್ತರನ್ನು ರೋಮಾಂಚನಗೊಳಿಸಿತು. ಉತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ದಿಗೆ ದೇವರಿಗೆ ವಿವಿಧ ರೀತಿಯ ಹರಕೆ, ಕಾಣಿಕೆ ಸಲ್ಲಿಸಿ ಕೃತಾರ್ಥಭಾವ ಹೊಂದಿದರು. ಭಕ್ತರಿಗೆ ಅಂದು ಮಧ್ಯಾಹ್ನ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಚೌರಿರ ಮೇದಪ್ಪ, ಗೌರವ ಕಾರ್ಯದರ್ಶಿ ನೆರವಂಡ ಸಂಜಯ್ ಪೂಣಚ್ಚ, ಗ್ರಾಮ ಮತ್ತು ಹೊರ ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.