ಚೆಯ್ಯಂಡಾಣೆ, ಏ. ೧೪: ಕೂರ್ಗ್ ಜಂಇಯ್ಯತುಲ್ ಉಲಮಾ ಮಡಿಕೇರಿ ಝೋನ್ ಸಮಿತಿಯ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ಹಜ್ ತರಬೇತಿ ಶಿಬಿರ ಆಯೋಜಿಸಲಾಗಿದೆ.ತಾ. ೧೫ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಕೊಟ್ಟಮುಡಿಯ ಆಝಾದ್ ನಗರದ ಶಾದಿ ಮಹಲ್ ಸಭಾಂಗಣದಲ್ಲಿ ಅಬ್ದುಲ್ ರಶೀದ್ ದಾರಿಮಿ ಕಣ್ಣೂರು ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಅಶ್ರಫ್