ವೀರಾಜಪೇಟೆ, ಏ. ೧೪: ಕಲಾವಿಧನ ಬದುಕು ಅನೇಕ ಏರುಇಳಿತಗಳನ್ನು ಕಂಡು ಸಾಗುತ್ತದೆ. ಆದರೆ ಬದುಕಿನಲ್ಲಿ ಸಾಧಿಸಿರುವ ಸಾದನೆಯು ಯುಗಯುಗಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ. ಇದಕ್ಕೆ ಸಾಕ್ಷಿ ದಿ.ಅಪಾಡಂಡ ರಘು ಅವರು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಅದ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.

ಕೊಡಗು ಜಿಲ್ಲಾ ಕಲಾವಿದರ ಸಂಘ (ರಿ) ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವೀರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ. ಗ್ರೂಪ್ ಖಾಸಗಿ ಕಟ್ಟಡ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ನಿರ್ದೇಶಕ ದಿ. ಆಪಾಡಂಡ ಟಿ. ರಘು ಅವರಿಗೆ ಶ್ರಧ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು. ಸಭೆಗೆ ಆಗಮಿಸಿ ಮಾತನಾಡಿದ ಮಹೇಶ್ ನಾಚಯ್ಯ ಅವರು ಜಿಲ್ಲೆಯಲ್ಲಿ ಹಲವು ಕಲಾವಿದರಿಗೆ ಆಶ್ರಯ ಕರುಣಿಸಿ ಕೊಡವ ಧಿಮಂತ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ದಾರವಾಹಿ ಮೂಲಕ ಭಿತ್ತರಿಸಿದ ಕೀರ್ತಿ ರಘು ಅವರಿಗೆ ಸಲ್ಲುತ್ತದೆ. ಮನುಜ ಸತ್ತರು ಕಲೆಯು ಎಂದಿಗೂ ಜೀವಂತವಾಗಿರುತ್ತದೆ. ಕೊಡಗಿನಲ್ಲಿ ಐನ್ ಮನೆಗಳು ನಶಿಸಿ ಹೋಗುವ ಸ್ಥಿತಿಯಿತ್ತು. ಐನ್ ಮನೆಗಳ ಚಿತ್ರಣ ಐತಿಹಾಸಿಕ ಕ್ಷಣಗಳ ಹಿನ್ನಲೆಗಳನ್ನು ದಾರವಾಹಿ ಮೂಲಕ ಜನತೆಗೆ ತೋರಿಸಿಕೊಟ್ಟು ಐನ್ ಮನೆಗಳ ಉಳಿವಿಗೆ ಕಾರಣಕರ್ತರಾದರು ಎ.ಟಿ. ರಘು ಎಂದರು. ಸದಾ ನೆನಪಿಸುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಹಿರಿಯ ಕಲಾವಿದ ನೆರವಂಡ ಉಮೇಶ್ ಅವರು ಪ್ರಸ್ತಾವಿಕ ಭಾಷಣದಲ್ಲಿ ಕೊಡಗು ಜಿಲ್ಲೆ ಪುಟ್ಟದಾದರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಹಲವು ಮಹನೀಯರ ದಂತಕತೆಗಳೇ ಸಾಕ್ಷೀ. ಕೊಡಗು ಜಿಲ್ಲೆಯಿಂದ ಒಂದು ನೂರು ರೂಪಾಯಿಗಳಿಂದ ಮದ್ರಾಸ್ ಗೆ ಪಯಣ ಬೆಳೆಸಿ ಸುಮಾರು ೫೭ ಚಲನಚಿತ್ರಗಳನ್ನು ನಿರ್ದೇಶನ ಮಾಡಿ ಖ್ಯಾತ ನಾಮರ ಸಾಲಿನಲ್ಲಿ ನೆಲೆ ಕಂಡಿರುವ ದಿ. ಎ.ಟಿ ರಘು ಅವರು ಧೀಮಂತರು. ನಟನೆ ಎಂಬುದು ಏನೆಂಬುದು ತಿಳಿಯದಿರುವ ವಯಸ್ಸಿನಲ್ಲಿ ನಟನೆ ಕಲಿಕೆಯೊಂದಿಗೆ ಹಲವು ಕಲಾವಿದರನ್ನು ಹುಟ್ಟುಹಾಕಿದ್ದಾರೆ. ೧೭ ಕೊಡವ ದಾರವಾಹಿಗಳನ್ನು ಕಿರುತೆರೆಯ ಮೇಲೆ ಬಿತ್ತರಿಸಿದ್ದಾರೆ. ದಾರವಾಹಿಗಳಲ್ಲಿ ಬರುವ ಸಾಹಿತ್ಯ, ಹಾಡುಗಳು ಕ್ರಮಗಳು, ಸಂಸ್ಕೃತಿಯು ಮುಂದಿನ ಪೀಳಿಗೆಗೆ ದಾರಿದೀಪದಂತೆ ಎಂದರು. ಕಲಾವಿದರ ಬೆಳವಣಿಗೆಗೆ ಕೊಡಗು ಜಿಲ್ಲಾ ಕಲಾವಿದರ ಸಂಘ ಹುಟ್ಟುಹಾಕಲಾಗಿದೆ ಎಂದರು.

ಜಿಲ್ಲಾ ಜಾನಪದ ಪರಿಷತ್ ಅದ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ ಎ.ಟಿ. ರಘು ಅವರ ಆತ್ಮಜ್ಯೋತಿ ಇಂದು ಎಲ್ಲೆಡೆ ಬೆಳಗುತ್ತಿದೆ ಎಂದರು. ಮನುಜನ ದೇಹಕ್ಕೆ ಸಾವು ಸಂಭವಿಸಿದರು. ಜ್ಯೋತಿಯು ಎಂದಿಗೂ ನಂದುವುದಿಲ್ಲ. ಎ.ಟಿ. ರಘು ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಸಿನಿಮಾ ಮಂದಿರ ನಿರ್ಮಾಣವಾಗಬೇಕು. ಕಳೆದುಕೊಂಡಿರುವ ದಿವ್ಯ ಚೇತನಕ್ಕೆ ಕಲಾವಿದರ ಆತ್ಮಪೂರ್ಣ ಕಲೆ ನಮನಗಳನ್ನು ಸಲ್ಲಿಸುವಂತಾಗಬೇಕು ಎಂದು ಹೇಳಿದರು.

ದಿ. ಎ.ಟಿ. ರಘು ಅವರ ಪುತ್ರಿ ಬಯವಂಡ ಬಿನು ಸಚಿನ್ ಮಾತನಾಡಿ, ಜಿಲ್ಲೆ ಮತ್ತು ರಾಜ್ಯದ ಚಲನಚಿತ್ರ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ತಂದೆ. ಅವರು ನೀಡಿರುವ ಸ್ಪೂರ್ತಿದಾಯಕವಾದ ಮಾಹಿತಿಗಳು ಯುವ ಜನತೆಗೆ ಮಾರ್ಗದರ್ಶನವಾಗಬೇಕು. ಅವರ ಆಶೋತ್ತರಗಳು ಯುವ ಜನತೆಗೆ, ಕಲಾವಿದರಿಗೆ ದಾರಿದೀಪವಾಗಬೇಕು ಎಂದು ಹೇಳಿದರು.

ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ನಿಕಟಪೂರ್ವ ಅದ್ಯಕ್ಷರಾದ ಮಾದಂಡ ಪೂವಯ್ಯ, ಕಾವೇರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ.ಇಟ್ಟಿರ ಬಿದ್ದಪ್ಪ, ಕೊಡವಾಮೆರ ಕೊಂಡಾಟ ಸಂಘಟನೆಯ ಅದ್ಯಕ್ಷ ಚಾಮೇರ ದಿನೇಶ್, ನಿರ್ದೇಶಕರಾದ ಕೊಟ್ಟುಕತ್ತಿರ ಪ್ರಕಾಶ್, ಪೊನ್ನಚೆಟ್ಟಿರ ರಮೇಶ್, ಚೆರಿಯಪಂಡ ಸುರೇಶ್, ಕೋಟ್ರಮಾಡ ಲಾಲ ಪೂಣಚ್ಚ, ಚಲನಚಿತ್ರ ನಟಿ ತಾತಂಡ ಪ್ರಭಾ ನಾಣಯ್ಯ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎ.ಟಿ. ರಘು ಅವರ ೪೫ ನಿಮಿಷಗಳ ಸಾಕ್ಷö್ಯ ಚಿತ್ರ ಪ್ರದರ್ಶನ ಕಂಡಿತು. ಜಿಲ್ಲೆಯ ಚಿತ್ರಕಲಾವಿದರಾದ ಬಿ.ಆರ್.ಸತೀಶ್ ಅವರ ಕುಂಚದಿAದ ಎ.ಟಿ. ರಘು ಅವರ ಭಾವಚಿತ್ರ ಅನಾವರಣವಾಯಿತು. ಗಾಯಕರಾದ ಟಿ.ಡಿ.ಮೋಹನ್ ಮತ್ತು ಮಾಳೇಟಿರ ಅಜಿತ್ ಅವರಿಂದ ಶೋಕ ಗೀತೆ ಹಾಡಲಾಯಿತು, ಉಳುವಂಗಡ ಕಾವೇರಿ ಅವರು ಎ.ಟಿ. ರಘು ಅವರ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿ ನುಡಿದರು. ಜಾದುಗಾರ್ ವಿಕ್ರಂ ಶೆಟ್ಟಿ ಅವರು ಜಾದು ಕಲೆಯ ಮೂಲಕ ಎ.ಟಿ. ರಘು ಅವರ ಭಾವಚಿತ್ರದೊಂದಿಗೆ ಹೂವಿನ ಮಾಲೆ ಪ್ರದರ್ಶನ ಮಾಡಿದರು.

ವೀರಾಜಪೇಟೆ ಕೊಡವ ಸಮಾಜದ ಮಾಜಿ ಅದ್ಯಕ್ಷ, ಹಿರಿಯ ನಟ ವಾಂಚಿರ ನಾಣಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಘು ಅವರು ಕನ್ನಡ ಚಲನಚಿತ್ರ ಕ್ಷೇತ್ರ, ಕೊಡವ ಭಾಷೆ, ಸಂಸ್ಕೃತಿ ಕಲೆಗೆ ಕಲಾವಿದರಿಗೆ ನೀಡಿರುವ ಸೇವೆ ಅನನ್ಯವಾಗಿದೆ. ಮನುಷ್ಯ ಜೀವನದಲ್ಲಿ ಸಾಧಿಸುವ ಅನೇಕ ಸಂಗತಿಗಳು ಕಣ್ಮರೆಯಾದರು ಗುಣಗಾನ ಮಾಡುವಂತಿರಬೇಕು. ರಘು ಅವರ ಹೆಸರಿನಲ್ಲಿ ಕಲೆಗೆ ಸಂಭAದಿಸಿದAತೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೋಡಮಾಡ ಭವಾನಿ ನಾಣಯ್ಯ, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಕಲಾವಿದರಾದ ಟಿ.ಡಿ. ಮೋಹನ್, ಮಲ್ಲೇಟಿರ ಅಜಿತ್, ಆಪಾಂಡAಡ ರಘು ಅವರ ಪುತ್ರಿ ಬಯವಂಡ ಬಿನು ಸಚಿನ್ ಹಾಡು ಹಾಡಿ ಪ್ರೇಕ್ಷಕರ ಮನರಂಜಿಸಿದರು.

ತಿರುವಲAಡ ಸುಜಲ ನಾಣಯ್ಯ ಪ್ರಾರ್ಥಿಸಿದರೆ, ನೆಲ್ಲಚಂಡ ರೇಖಾ ಸ್ವಾಗತಿಸಿದರು. ಕಾರ್ಯದರ್ಶಿ ಈರಮಂಡ ಹರಿಣಿ ಮತ್ತು ಮುಂಡಚಾಡಿರ ರಿನಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಿದ್ದಂಡ ವಿಕ್ರಮ್ ಬಿದ್ದಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘದ ಪದಾಧಿಕಾರಿಗಳು, ಸದಸ್ಯರು, ಬಾಳೆಯಡ ಪ್ರತೀಶ್, ಪಟ್ಟಡ ಧನು, ಎ.ಟಿ. ರಘು ಅವರು ನಿರ್ಧೇಶಿಸಿದ ಚಲನಚಿತ್ರದಲ್ಲಿ ಅಭಿನಯಿಸಿದ ನಟರು ನಟಿಯರು, ಕಿರು ತೆರೆಯ ನಟನಟಿಯರು, ಗಾಯಕರು ಹಿತೈಷಿಗಳು, ಸ್ನೇಹಿತರು ಹಾಜರಿದ್ದರು. -ಕಿಶೋರ್ ಕುಮಾರ್ ಶೆಟ್ಟಿ