ಸುಂಟಿಕೊಪ್ಪ, ಏ. ೧೪: ಕ್ಷÄಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಪ್ರಕರಣ ಇಲ್ಲಿಗೆ ಸಮೀಪದ ಕಲ್ಲೂರುವಿನಲ್ಲಿ ಸಂಭವಿಸಿದೆ.

ಕಲ್ಲೂರುವಿನ ಬಸವೇಶ್ವರ ದೇವರ ಉತ್ಸವ ಸಂದರ್ಭದಲ್ಲಿ ಸಂಜೆ ವೇಳೆ ಮೋಹನ್ ಹಾಗೂ ರವೀಂದ್ರ ಎಂಬವರುಗಳ ನಡುವೆ ಜಗಳವೇರ್ಪಟ್ಟಿದ್ದು, ಈ ಸಂದರ್ಭ ಮೋಹನ್ ರವೀಂದ್ರ ಅವರ ತಲೆಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ಗಾಯಾಳು ರವೀಂದ್ರನನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಗಂಗಾಧರಪ್ಪ, ಠಾಣಾಧಿಕಾರಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. - ವಿನ್ಸೆಂಟ್