ಸೋಮವಾರಪೇಟೆ, ಏ. ೧೪: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಳವಡಿಸಿದ್ದ ಮ್ಯಾಟ್ ಮೈದಾನದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಎ ಗ್ರೇಡ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಬೆಂಗಳೂರು ರೈಸಿಂಗ್ ಬುಲ್ಸ್ ತಂಡವು ಪ್ರತಿಷ್ಠಿತ ಒಕ್ಕಲಿಗ ಕಪ್ ಕಬಡ್ಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ನಸುಕಿನ ೩.೩೦ರ ವೇಳೆಯಲ್ಲಿಯೂ ನೆರೆದಿದ್ದ ಸಾವಿರಾರು ಮಂದಿ ಕಬಡ್ಡಿ ಪ್ರೇಮಿಗಳ ಚಪ್ಪಾಳೆ, ಶಿಳ್ಳೆಯ ಪ್ರೋತ್ಸಾಹದ ನಡುವೆ ಕೇವಲ ೨ ಅಂಕಗಳ ಮುನ್ನಡೆಯೊಂದಿಗೆ ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಬೆಂಗಳೂರು ರೈಸಿಂಗ್ ಬುಲ್ಸ್ ತಂಡವು ತನ್ನ ಮುಡಿಗೇರಿಸಿಕೊಂಡಿತು.
ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದÀ ಜಿಎಂಪಿ ಶಾಲಾ ಮೈದಾನದಲ್ಲಿ ೩ದಿನಗಳು ನಡೆದ ರಾಷ್ರೀಯ ಮಟ್ಟದ ಎ ಗ್ರೇಡ್ ಹೊನಲು ಬೆಳಕಿನ ಪ್ರತಿಷ್ಠಿತ ‘ಒಕ್ಕಲಿಗರ ಕಪ್’ ಕಬಡ್ಡಿ ಪಂದ್ಯಾಟವು ಸಾವಿರಾರು ಪ್ರೇಕ್ಷಕರು, ಪ್ರೋ ಕಬಡ್ಡಿ ಆಟಗಾರರೊಂದಿಗೆ ಪ್ರತಿಷ್ಠಿತ ತಂಡಗಳ ಆಟಗಾರರ ಸಮಾಗಮಕ್ಕೆ ಸಾಕ್ಷಿಯಾಯಿತು. ಫೈನಲ್ ಪಂದ್ಯಾಟದಲ್ಲಿ ಬೆಂಗಳೂರು ರೈಸಿಂಗ್ ಬುಲ್ಸ್ ತಂಡವು ಜೆ.ಕೆ. ಅಕಾಡೆಮಿ ಕಾಸರಗೋಡು ತಂಡದ ವಿರುದ್ಧ ೨ ಅಂಕಗಳ ಮುನ್ನಡೆಯೊಂದಿಗೆ ೨ ಲಕ್ಷ ನಗದು ಬಹುಮಾನಕ್ಕೆ ಪಾತ್ರವಾಯಿತು. ಜೆ.ಕೆ. ಅಕಾಡೆಮಿ ಕಾಸರಗೋಡು ತಂಡವು ದ್ವಿತೀಯ ಸ್ಥಾನ ಪಡೆದು ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.
ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ, ಚತುರ್ಥ ಸ್ಥಾನವನ್ನು ಬಿಪಿಸಿಎಲ್ ತಂಡ ಪಡೆಯುವ ಮೂಲಕ ತಲಾ ರೂ. ೫೦ ಸಾವಿರ ನಗದು ಹಾಗು ಟ್ರೋಫಿಗಳನ್ನು ತಮ್ಮದಾಗಿಸಿಕೊಂಡವು. ರೋಚಕ ಫೈನಲ್ನಲ್ಲಿ ೨೮-೨೬ ಅಂಕಗಳ ಅಂತರದಲ್ಲಿ ಬೆಂಗಳೂರು ರೈಸಿಂಗ್ ಬುಲ್ಸ್ ತಂಡ ವಿಜಯದ ನಗೆ ಬೀರಿತು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ನಲ್ಲಿ ಜೆ.ಕೆ. ಅಕಾಡೆಮಿ ಕಾಸರಗೋಡು ತಂಡ ಬಿಪಿಸಿಎಲ್ ತಂಡವನ್ನು ೩೧-೨೯ ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್ಗೇರಿತ್ತು. ೨ನೇ ಸೆಮಿಫೈನಲ್ನಲ್ಲಿ ರೈಸಿಂಗ್ ಬುಲ್ಸ್ ತಂಡ ಬ್ಯಾಂಕ್ ಆಫ್ ಬರೋಡ ತಂಡವನ್ನು ೨೯-೧೭ ಅಂತರದಲ್ಲಿ ಸೋಲಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಕಾಸರಗೋಡು ತಂಡದ ವಿಶ್ವರಾಜ್, ಬೆಸ್ಟ್ ಡಿಫೆಂಡರ್ ಬುಲ್ಸ್ನ ದೀಪಕ್, ಬೆಸ್ಟ್ ಆಲ್ರೌಂಡರ್ ಬುಲ್ಸ್ನ ಆಶಿಶ್ ಮಲ್ಲಿಕ್ ಪಡೆದರು. ಇದರೊಂದಿಗೆ ನಡೆದ ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳಗಾವಿಯ ಜೈ ಮಹಾಕಾಳಿ ತಂಡ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ತಂಡ ಪಡೆಯಿತು. ತೃತೀಯ ಸ್ಥಾನವನ್ನು ಚಿಕ್ಕಮಗಳೂರಿನ ಬಿಸಿಆರ್ ತಂಡ, ಚತುರ್ಥ ಬಹುಮಾನವನ್ನು ಬೆಳಗಾವಿಯ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ವಿಜಯ ವಾರಿಯರ್ಸ್ ತಂಡಗಳು ಪಡೆದವು.
ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ರೂ. ೫೦ ಸಾವಿರ, ದ್ವಿತೀಯ ರೂ. ೩೦ ಸಾವಿರ, ತೃತೀಯ ಹಾಗೂ ಚತುರ್ಥ ತಲಾ ೧೫ ಸಾವಿರ ನಗದು ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು. ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬೆಸ್ಟ್ ರೈಡರ್ ಬೆಳಗಾವಿ ಜಿಲ್ಲೆಯ ಜೈ ಮಹಾಕಾಳಿ ತಂಡದ ಅಮೂಲ್ಯ ಪಾಟೀಲ್, ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ತಂಡದ ಮಹಾಲಕ್ಷೀ ಪಡೆದರು.
ದಾನಿಗಳಾದ ಕಿರಗಂದೂರು ಎ.ಎನ್. ಪದ್ಮನಾಭ, ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಗೌರವಾಧ್ಯಕ್ಷ ಬಿ.ಜೆ. ದೀಪಕ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ. ಸುರೇಶ್, ಹಿರಿಯ ಕಬಡ್ಡಿ ಆಟಗಾರ ಮಂಜೂರು ತಮ್ಮಣಿ, ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಎಸಿಎಫ್ ಗಾನಶ್ರೀ, ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾವಳಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಮಡಿಕೇರಿ ಶಾಸಕ ಡಾ.ಮಂತರ್ಗೌಡ, ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ, ಹುಣಸೂರು ಶಾಸಕ ಹರೀಶ್ ಗೌಡ, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರುಗಳು ಭಾಗವಹಿಸಿ ಶುಭಕೋರಿದರು.
ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಹಿರಿಯ ವಕೀಲ ಚಂದ್ರಮೌಳಿ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಹಾನಗಲ್ಲು ಗ್ರಾ.ಪಂ. ಸದಸ್ಯ ಮಿಥುನ್ಗೌಡ ಸೇರಿದಂತೆ ಮತ್ತಿತರ ಗಣ್ಯರು ಇದ್ದರು.
ಯುವ ವೇದಿಕೆಯ ಪದಾಧಿಕಾರಿಗಳು, ತೀರ್ಪು ಗಾರರು, ದಾನಿಗಳು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸ ಲಾಯಿತು. ಕೂತಿ ದಿವಾಕರ್ ಕಾರ್ಯಕ್ರಮ ನಿರ್ವಹಿಸಿದರೆ, ಗುರುರಾಜ್ ಶಿರಸಿ ಹಾಗೂ ಶೇಖರ್ಮೂರ್ತಿ ಬೆಂಗಳೂರು ಅವರುಗಳು ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.