ವೀರಾಜಪೇಟೆ, ಏ. ೧೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ)ವಿರಾಜಪೇಟೆ ತಾಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳು, ಇವರ ಆಶ್ರಯದಲ್ಲಿ ಕೃಷಿಗೆ ಪೂರಕವಾಗಿರುವ ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದ ವಿಎಸ್ಎಸ್ಎನ್ ಸಭಾಂಗಣದಲ್ಲಿ ನಡೆಯಿತು.
ಕೃಷಿ ಮೇಲ್ವಿಚಾರಕ ವಸಂತ್ ಮಾತನಾಡಿ ನೀರನ್ನು ನಿಯಮಿತವಾಗಿ ಬಳಸೋಣ ನೀರಿನ ಉಳಿತಾಯ ನಮ್ಮ ಸಂಸ್ಕöÈತಿಯಾಗಲಿ, ನಾಳಿನ ಮನುಕುಲಕ್ಕೆ ನಮ್ಮ ಕೊಡುಗೆ ನೀಡಿ ನಮಗಾಗಿ ಇರುವ ಪ್ರಕೃತಿಯನ್ನು ಕಾಪಾಡೋಣ ಹಾಗೂ ಮುಂದಿನ ಪೀಳಿಗೆಗೆ ನೀಡೋಣ ಎಂದು ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕ ದನೇಶ್ ಮಾತನಾಡಿ ನೀರಿನ ಮಹತ್ವ ಮತ್ತು ಅದರ ಸದ್ಬಳಕೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಣಿ ಪಕ್ಷಿಗಳಿಗೆ ಪ್ರಾತ್ಯಕ್ಷತೆ ಮುಖಾಂತರ ನೀರು ಇಡಲಾಯಿತು. ಒಕ್ಕೂಟದ ಉಪಾಧ್ಯಕ್ಷ ಸುಮಾ, ಪದಾಧಿಕಾರಿಗಳಾದ ಸ್ವಾತಿ, ರೇಖಾ, ಮಮತಾ, ಸುನಂದ ಇದ್ದರು. ಸೇವಾ ಪ್ರತಿನಿಧಿ ದೇವಕಿ, ಸಿ.ಎಸ್.ಸಿ ಸೇವಾದಾರರಾದ ದಿವ್ಯ, ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.