ಕೂಡಿಗೆ, ಏ. ೧೪: ಕೂಡಿಗೆ ಸೈನಿಕ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಅತುಲ್ ಕುಮಾರ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸುವ ಯುವ ವಿಜ್ಞಾನಿ ಕಾರ್ಯಕ್ರಮ(ಯುವಿಕಾ)ಗೆ ಆಯ್ಕೆಯಾಗಿದ್ದಾನೆ. ಮೇ ೧೯ ರಿಂದ ಮೇ ೩೦ ರವರೆಗೆ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ(ಯುಆರ್‌ಎಸ್‌ಸಿ) ದಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾರತದ ಯುವ ಮನಸ್ಸುಗಳಲ್ಲಿ ವಿಜ್ಞಾನೋತ್ಸುಕತೆಯನ್ನು ಉತ್ತೇಜಿಸುವ ಹಾಗೂ ಬೆಳೆಸುವ ಉದ್ದೇಶದಿಂದ ರೂಪುಗೊಂಡದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬAಧಿಸಿದ ಆಳವಾದ ಜ್ಞಾನ, ಇಸ್ರೋದ ಹಿರಿಯ ವಿಜ್ಞಾನಿಗಳೊಂದಿಗೆ ಸಂವಾದ, ಹಸ್ತ ಕೌಶಲ್ಯದ ಚಟುವಟಿಕೆಗಳು, ಪ್ರಯೋಗಾಲಯ ಭೇಟಿಗಳು ಹಾಗೂ ಪ್ರದರ್ಶನಗಳು ಒಳಗೊಂಡಿರುತ್ತವೆ. ಇದರಿಂದ ವಿದ್ಯಾರ್ಥಿಗಳನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿAಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.