ಕೂಡಿಗೆ, ಏ. ೧೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಪ್ರವಿತ್ರ ಕಾವೇರಿ ನದಿಯ ದಂಡೆಯ ಮೇಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಕೊನೆಯ ದಿನದಲ್ಲಿ ಶ್ರೀ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನಡೆದವು.
ತೆಪ್ಪೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಪಂಚಾಮೃತಾಭೀಷೇಕ. ಅಷ್ಟೋತ್ತರ ಸಹಸ್ರನಾಮಾರ್ಚನೆ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಸಂಜೆ ಉಯ್ಯಾಲೋತ್ಸವ, ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಗೆ ಪುಷ್ಪಾಲಂಕಾರ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ, ಕಣಿವೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಮತ್ತು ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ, ನಂತರ ಕಾವೇರಿ ನದಿಯಲ್ಲಿ ಶ್ರೀ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮ ಪೂಜಾ ಕೈಂಕರ್ಯಗಳೊAದಿಗೆ ದೇವಾಲಯದ ಪ್ರಧಾನ ಅರ್ಚಕ ಹೆಚ್.ಆರ್. ರಾಘವೇಂದ್ರಚಾರ್ ನೆರವೇರಿಸಿದರು.
ಬ್ರಹ್ಮ ರಥೋತ್ಸವ ಅಂಗವಾಗಿ ನಾಲ್ಕು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಜ್ಯಮಟ್ಟದ ಕುಣಿಯೋಣಾ ಬಾರ ನೃತ್ಯ ಸ್ಪರ್ಧೆ, ಟೀಮ್ ಡ್ರೀಮ್ ಸ್ಪಾರ್ಸ್ಡ ಡ್ಯಾನ್ಸ್ ಸ್ಟುಡಿಯೋ ಮಾಸ್ಟರ್ ಶರಣ್, ಜೋಸ್ ಕುಶಾಲನಗರ, ಮತ್ತು ತಂಡದವರಿAದ ನೃತ್ಯ ವೈವಿದ್ಯಮಯ ನೃತ್ಯ, ಎ. ಕ್ರಿಯೆಟಿವ್ ಡ್ಯಾನ್ಸ್ ಅಕಾಡೆಮಿ ಇವರ ತಂಡದಿAದ ನೃತ್ಯ ವೈವಿಧ್ಯ, ಮತ್ತು ಹಾಸನ ಮೋಹನ್ ಮೆಲೋಡೀಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದವು.
ಸಮಾರೋಪ ಸಮಾರಂಭದಲ್ಲಿ ವರ್ಷಂಪ್ರತಿಯAತೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾಕುಮಾರಿ, ಸದಸ್ಯರಾದ ಶಿವನಂಜಪ್ಪ, ಅನಂತ, ಶಿವಕುಮಾರ್, ಗುತ್ತಿಗೆದಾರ ವೆಂಕಟೇಶ, ಉದ್ಯಮಿ ಆರ್.ಆರ್. ಕುಮಾರ್, ಸಮಿತಿಯ ಕಾರ್ಯದರ್ಶಿ ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ, ಗೌರವ ಅಧ್ಯಕ್ಷ ಇ.ಎಸ್. ಗಣೇಶ್, ವಿಶೇಷ ಆಹ್ವಾನಿತರಾದ ಕೆ.ಸಿ. ನಂಜುAಡ ಸ್ವಾಮಿ, ಆರ್.ಆರ್. ಕುಮಾರ್, ನಿರ್ದೇಶಕರಾದ ಆರ್.ಆರ್. ಮಧು, ಶಿರಗಜೆ ನವೀನ್, ಶಿವಕುಮಾರ್, ರಮೇಶ್, ಪ್ರಶಾಂತ, ರಾಕೇಶ್, ಮಂಜುನಾಥ, ಪರಮೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.