ಮಡಿಕೇರಿ, ಏ. ೧೪: ಕಾಂತೂರು-ಮೂರ್ನಾಡು ಶ್ರೀ ಪನ್ನಂಗಾಲ ದೇವಿಯ ವಾರ್ಷಿಕೋತ್ಸವ ತಾ. ೧೭ ಮತ್ತು ೧೮ ರಂದು ನಡೆಯಲಿದೆ.

ತಾ. ೧೭ ರಂದು ಬೆಳಿಗ್ಗೆ ದೇವರ ಶುದ್ಧ ಕಲಶ ಪೂಜೆ, ಕೆರೆ ಮನೆಯಿಂದ ಭಂಡಾರ ತರುವುದು, ಎತ್ತುಪೋರಾಟ, ದೇವರ ದರ್ಶನ ಹಾಗೂ ಸಂಜೆ ೭ ಗಂಟೆಗೆ ಕುರುಂದ ಭಾರಣಿ ಜರುಗಲಿದೆ.

ತಾ. ೧೮ ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಚಾಮುಂಡಿ ಉತ್ಸವ, ಕುರುಂದಾಟ, ದೇವರ ಜಳಕ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷರು ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.