ನಾಪೋಕ್ಲು, ಏ. ೧೪: ಸಮೀಪದ ಕಕ್ಕುಂದ ಕಾಡು ಶ್ರೀ ಲಕ್ಷಿö್ಮ ವೆಂಕಟೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯ ತಾ. ೧೬ ರಂದು ನಡೆಯಲಿದೆ. ಈ ಹಿನ್ನೆಲೆ ಪ್ರಥಮ ಹಂತವಾಗಿ ಸಪರಿವಾರ ಸಹಿತ ಶ್ರೀದೇವರ ಬಾಲಾಲಯ ಪ್ರತಿಷ್ಠ ಕಾರ್ಯಕ್ರಮ ತಾ. ೧೬ ರಂದು ನಡೆಯಲಿದೆ. ಇದರ ಅಂಗವಾಗಿ ತಾ. ೧೪ ರಂದು ಸಂಜೆ ೬.೩೦ ರಿಂದ ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ ನಡೆಯಲಿದೆ. ತಾ. ೧೫ ರಂದು ಬೆಳಿಗ್ಗೆ ೮ ಗಂಟೆಯಿAದ ಶಾಂತಿ ಹೋಮ ಪ್ರಾಯಶ್ಚಿತ ಹೋಮ ದೇವರಿಗೆ ಕಲಶಾಭಿಷೇಕ. ಸಂಜೆ ೫ ರಿಂದ ಬಾಲಾಲಯದಲ್ಲಿ ವಾಸ್ತು ಪೂಜೆ ಮತ್ತು ವಾಸ್ತು ಬಲಿ. ತಾ. ೧೬ ರಂದು ಬೆಳಿಗ್ಗೆ ೭ ರಿಂದ ಸಂಹಾರತತ್ವ ಹೋಮ ಶ್ರೀ ದೇವರನ್ನು ಬಾಲಲಯದಲ್ಲಿ ಪ್ರತಿಷ್ಠೆ ಮಾಡಿ ಧ್ಯಾನ ಸಂಕೋಚ ಪ್ರಕ್ರಿಯೆ ಮಹಾಪೂಜೆ ನಡೆಯಲಿದೆ.