ಗೋಣಿಕೊಪ್ಪಲು, ಏ. ೧೫: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಒಂಬತ್ತನೆಯ ದಿನ ೮ ತಂಡಗಳು ಮುನ್ನಡೆ ಸಾಧಿಸಿದವು. ಚೇರಂಡ ಹಾಗೂ ನೂರೆರ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೂರೆರ ತಂಡವು ೪ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿತು. ಚೇರಂಡ ತಂಡ ತನ್ನ ೭ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.

ಮಾಳೆಯಂಡ(ದೇವಣಗೇರಿ) ಹಾಗೂ ಪುಗ್ಗೆರ ತಂಡದ ನಡುವಿನ ಪಂದ್ಯದಲ್ಲಿ ಮಾಳೆಯಂಡ ತಂಡವು ಮೊದಲು ಯಾವುದೇ ವಿಕೆಟ್ ಕಳೆದುಕೊಳ್ಳದೆ ೪೭ ರನ್ ಬಾರಿಸಿತು. ಪುಗ್ಗೆರ ತಂಡವು ೪ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿತಾದರೂ ಅಂತಿಮವಾಗಿ ಗುರಿ ಮುಟ್ಟಲು ಸಾಧ್ಯವಾಗದೆ ಸೋಲನ್ನು ಅನುಭವಿಸಿತು.

ಚೆರುಮಂದAಡ, ನಂಬಿಯಪAಡ ತಂಡದ ನಡುವಿನ ಹಣಾಹಣಿಯಲ್ಲಿ ಚೆರುಮಂದAಡ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ಗರಿಷ್ಠ ರನ್ ಅನ್ನು ಬೆನ್ನತ್ತಿದ ನಂಬಿಯಪAಡ ತಂಡವು ೪ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಸಮಬಲ ಸಾಧಿಸಿತು. ಆಯೋಜಕರು ನಿಯಮದಂತೆ ಸೂಪರ್ ಓವರ್ ನಿಯಮ ಜಾರಿಗೆ ತಂದರು. ಇದರಲ್ಲಿ ಚೆರುಮಂದAಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ತೀತಮಾಡ ಹಾಗೂ ಮಿನ್ನಂಡ ತಂಡದ ನಡುವಿನ ಹೋರಾಟದಲ್ಲಿ ತೀತಮಾಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ೫ ವಿಕೆಟ್ ಕಳೆದುಕೊಂಡು ೯೧ ರನ್ ಕಲೆ ಹಾಕಿತು. ಮಿನ್ನಂಡ ತಂಡವು ೫ ವಿಕೆಟ್ ಕಳೆದುಕೊಂಡು ೫೦ ರನ್‌ಗಳಿಸಲಷ್ಟೆ ಶಕ್ತವಾಯಿತು.

ಬಾಚಿನಾಡಂಡ ಹಾಗೂ ಮಾಣಿರ ತಂಡದ ನಡುವಿನ ಪಂದ್ಯದಲ್ಲಿ ಬಾಚಿನಾಡಂಡ ತಂಡ ೫ ವಿಕೆಟ್ ಕಳೆದುಕೊಂಡು ೩೪ ರನ್ ಬಾರಿಸಿತು. ಮಾಣಿರ ತಂಡವು ೫ ವಿಕೆಟ್ ಕಳೆದುಕೊಂಡು ೩೩ ರನ್ ಗಳಿಸಿ ಸೋಲನ್ನು ಅನುಭವಿಸಿತು.

ಐಯಲಪಂಡ ಹಾಗೂ ಪಾರುವಂಗಡ ನಡುವಿನ ಪಂದ್ಯಾಟದಲ್ಲಿ ಐಯಲಪಂಡ ತಂಡವು ೮೫ ರನ್ ಗಳಿಸಿತು. ಪಾರುವಂಗಡ ತಂಡವು ೪ ವಿಕೆಟ್ ಕಳೆದುಕೊಂಡು ಕೇವಲ ೪೮ ರನ್ ಸಂಪಾದಿಸಿ ಸೋಲನ್ನು ಒಪ್ಪಿಕೊಂಡಿತು.

ಪಟ್ರಪಂಡ ಹಾಗೂ ಐಮುಡಿಯಂಡ ನಡುವಿನ ಪಂದ್ಯದಲ್ಲಿ ಪಟ್ರಪಂಡ ತಂಡವು ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸಿತು. ಈ ರನ್ ಬೆನ್ನತ್ತಿದ್ದ ಐಮುಡಿಯಂಡ ತಂಡವು ೪ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿ ಸೋಲನ್ನು ಅನುಭವಿಸಿತು.

ತಾತಂಡ ಹಾಗೂ ಮೋಟನಾಳಿರ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಮೋಟನಾಳಿರ ತಂಡವು ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೯೪ ರನ್ ಗಳಿಸಿತು. ತಾತಂಡ ತಂಡವು ೪ ವಿಕೆಟ್ ಕಳೆದುಕೊಂಡು ಕೇವಲ ೩೪ ಗಳಿಸಿ ಸೋಲನ್ನು ಅನುಭವಿಸಿತು. - ಹೆಚ್.ಕೆ. ಜಗದೀಶ್