ಸೋಮವಾರಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರಪೇಟೆಯಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಜರುಗಿತು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಸ್ತಬ್ಧಚಿತ್ರಗಳ ಸಹಿತ ಜರುಗಿದ ಅದ್ದೂರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಮೆರವಣಿಗೆ ಸಿ.ಕೆ. ಸುಬ್ಬಯ್ಯ ರಸ್ತೆ, ತ್ಯಾಗರಾಜ ರಸ್ತೆ, ಮಡಿಕೇರಿ ರಸ್ತೆ, ಬಸವೇಶ್ವರ ರಸ್ತೆಯ ಮೂಲಕ ಸಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಹಿರಿಕರ, ಕೂಗೂರು, ಆಲೂರು-ಸಿದ್ದಾಪುರ, ಕಣಗಾಲು, ತೋಳೂರುಶೆಟ್ಟಳ್ಳಿ, ಬೆಟ್ಟದಳ್ಳಿ, ತಲ್ತರೆಶೆಟ್ಟಳ್ಳಿ, ಹಾನಗಲ್ಲು, ಗಾಂಧಿನಗರ, ಗಣಗೂರು, ಕುಂಬೂರು, ವೆಂಕಟೇಶ್ವರ ಬ್ಲಾಕ್, ತಾಲೂಕು ಆಡಳಿತದ ಸಮಾಜಕಲ್ಯಾಣ ಇಲಾಖೆಯಿಂದ ಸ್ತಬ್ಧಚಿತ್ರಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.
ಮೆರವಣಿಗೆಯಲ್ಲಿ ‘ಜೈ ಭೀಮ್, ಅಂಬೇಡ್ಕರ್‌ಗೆ ಜೈ, ಸಂವಿಧಾನ ಶಿಲ್ಪಿಗೆ ಜೈ’ ಎಂಬ ಜಯಘೋಷಗಳು ಮೊಳಗಿದವು. ಅಂಬೇಡ್ಕರ್ ಕುರಿತ ಕ್ರಾಂತಿ ಗೀತೆಗಳು, ಸಂಗೀತ, ವಾದ್ಯಗಳಿಗೆ ಸಾರ್ವಜನಿಕರು ಹೆಜ್ಜೆ ಹಾಕಿದರು. ಸಮಾನತೆಗೆ ಶ್ರಮಿಸಿದ ನಾಯಕ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಸ್ವಾತಂತ್ರö್ಯಪೂರ್ವದಲ್ಲಿಯೇ ಸಮಾಜದ ಅಸಮಾನತೆಯ ವಿರುದ್ಧ ಸಿಡಿದೆದ್ದು ಸಮಾನತೆಗೆ ಶ್ರಮಿಸಿದ ಮಹಾನ್ ನಾಯಕ ಅಂಬೇಡ್ಕರ್ ಎಂದು ಬಣ್ಣಸಿದರು. ಸಮಾಜದಲ್ಲಿ ಏಕತೆಗೆ ಶ್ರಮಿಸಿ ಸರ್ವ ಶ್ರೇಷ್ಠ ಸಂವಿಧಾನ ರಚಿಸಿದರು. ಆ ಮೂಲಕ ಸ್ವಾತಂತ್ರಾö್ಯ ನಂತರದ ೫೦ ವರ್ಷಗಳಲ್ಲಿಯೇ ಗುಣಾತ್ಮಕ ಬದಲಾವಣೆ ಬಯಸಿದ್ದರು. ಆದರೆ ಅವರ ಬದಲಾವಣೆಯ ಚಿಂತನೆಗಳು ನಿರೀಕ್ಷಿತ ವೇಗದಲ್ಲಿ ಪ್ರಗತಿಯಾಗಿಲ್ಲ ಎಂದು ಬೇಸರಿಸಿದ ಅವರು, ಅಂಬೇಡ್ಕರ್ ಅವರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತಗೊಳ್ಳಬಾರದು ಎಂದರು. ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿದರೂ ಸ್ವದೇಶಕ್ಕೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾನ್ ಮೇದಾವಿಯಾಗಿದ್ದ ಅಂಬೇಡ್ಕರ್‌ರು ಸ್ವದೇಶದ ಸುಧಾರಣೆಗೆ ಮುಂದಾದ ಮಹಾನ್ ನಾಯಕ ಎಂದು ಮಂತರ್ ಗೌಡ ಅಭಿಪ್ರಾಯಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಕಾರ್ಯದರ್ಶಿ ಹಾಗೂ ವಕೀಲರಾದ ಕಾಳಸ್ವಾಮಿ ಅವರು, ಹೆಣ್ಣುಮಕ್ಕಳ ಹಕ್ಕಿಗೆ ಹೋರಾಟ ನಡೆಸಿದ ಅಂಬೇಡ್ಕರ್ ಅವರು, ಈ ಸಂಬAಧಿತ ಮಸೂದೆಯನ್ನು ಅಂದಿನ ಪಾರ್ಲಿಮೆಂಟ್ ಬೆಂಬಲಿಸದ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಂತಹ ಕ್ರಾಂತಿಕಾರಕ ಎಂದರು. ಇದರೊಂದಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ, ಹಕ್ಕುಗಳು, ಕಾರ್ಮಿಕರಿಗೆ ಸೌಲಭ್ಯ, ನೀರಾವರಿ ಯೋಜನೆಗಳನ್ನು ಸುಧಾರಿಸಿದ-ಮೀಸಲಾತಿಯನ್ನು ಎಲ್ಲಾ ವರ್ಗಕ್ಕೂ ವಿಸ್ತರಿಸಿದ ಮಹಾನ್ ಆಡಳಿತಗಾರ. ಇಂತಹ ಮಹಾನ್ ನಾಯಕನನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು ಎಂದು ಅಭಿಪ್ರಾಯಿಸಿದ ಅವರು, ದೇಶದಲ್ಲಿ ಆರ್‌ಬಿಐ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾದ ಅಂಬೇಡ್ಕರ್ ಅವರ ಭಾವಚಿತ್ರವನ್ನು ಭಾರತೀಯ ನೋಟಿನಲ್ಲಿ ಮುದ್ರಿಸಲು ರಾಜಕೀಯ ಕಾರಣಗಳಿಂದ ಸಾಧ್ಯವಾಗಿಲ್ಲ ಎಂದು ಬೇಸರಿಸಿದರು. ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಸಿದ್ದೇಗೌಡ, ಪ.ಪಂ. ಮುಖ್ಯಾಧಿಕಾರಿ ಸತೀಶ್, ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ಉಪಾಧ್ಯಕ್ಷ ಡಿ.ಜೆ. ಈರಪ್ಪ, ಕಾರ್ಯದರ್ಶಿ ಟಿ.ಈ. ಸುರೇಶ್, ಖಜಾಂಚಿ ಬಿ.ಈ. ಜಯೇಂದ್ರ, ಪ.ಜಾ. ಮತ್ತು ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನೇಶ್, ಆದಿದ್ರಾವಿಡ ಸಮಾಜದ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ದಲಿತ ಹಿತರಕ್ಷಣಾ ಒಕ್ಕೂಟದ ಎಂ.ಪಿ. ಹೊನ್ನಪ್ಪ, ಪ.ಪಂ. ನಾಮನಿರ್ದೇಶಿತ ಸದಸ್ಯ ಹೆಚ್.ಎ. ನಾಗರಾಜು, ಸ್ತಿçà ಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ರೆಹನಾ ಸುಲ್ತಾನ್, ತಾಲೂಕು ಅಧ್ಯಕ್ಷೆ ಹೇಮಾ, ಅಕ್ರಮ ಸಕ್ರಮ ಸಮಿತಿ ಸದಸ್ಯ ಜೆ.ಎಲ್. ಜನಾರ್ಧನ್, ಬೋವಿ ಸಂಘದ ಅಧ್ಯಕ್ಷ ಸುಜಿತ್ ಸೇರಿದಂತೆ ಇತರರು ಇದ್ದರು.ವೀರಾಜಪೇಟೆ: ನಾವುಗಳು ನಾಡಿನಲ್ಲಿ ಸುಖ-ಶಾಂತಿಯಿAದ ಜೀವನ ನಡೆಸುವಂತಾಗಲು ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವೇ ಪ್ರಮುಖ ಕಾರಣ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ - ಪೊನ್ನಂಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಹಾಗೂ ಪಟ್ಟಣದ ಅಂಬೇಡ್ಕರ್ ಭವನದ ಎದುರು ನೂತನವಾಗಿ ಸ್ಥಾಪಿಸಲಾಗಿರುವ ಡಾ. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಅವರ ಕಾನೂನಿನಲ್ಲಿ ಮೂಲಭೂತ ಹಕ್ಕುಗಳೇ ಇರಲಿಲ್ಲ. ಅದನ್ನು ನಂತರ ಸಂವಿಧಾನದ ಮೂಲಕ ಎಲ್ಲಾ ವರ್ಗದ ಜನರಿಗೆ ನೀಡಿದ ಹೆಗ್ಗಳಿಕೆ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ನಾವು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿ ಮುನ್ನಡೆಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಇಂದು ಭಾರತ ದೇಶದ ಕಾನೂನಾದ ನಮ್ಮ ಹೆಮ್ಮೆಯ ಸಂವಿಧಾನವನ್ನು ಎಲ್ಲರೂ ಗೌರವಿಸಿ ಅದರಂತೆ ನಡೆದುಕೊಳ್ಳುವುದು ನಮ್ಮ ಗುರಿಯಾಗಿ ಇರಬೇಕೆಂದು ಕರೆ ನೀಡಿದರು. ವಿವಿಧತೆಯಲ್ಲಿ ಏಕತೆ ಎಂಬ ಮಾತಿನ ಪರಿಕಲ್ಪನೆಯಲ್ಲಿ ಅಂಬೇಡ್ಕರ್ ಎಲ್ಲರಿಗೂ ಸಮಾನತೆಯನ್ನು ಸಂವಿಧಾನದ ಮೂಲಕ ನೀಡಿ ಶೋಷಿತ ಸಮಾಜ, ಪರಿಶಿಷ್ಟ ಪಂಗಡ, ಹಿಂದುಳಿದವರಿಗೆ ಅನುಕೂಲ ಕಲ್ಪಿಸಿದರು. ಶೋಷಿತರನ್ನು ಮುಖ್ಯವಾಹಿನಿಗೆ ತರುವ ಅಗತ್ಯಕ್ಕೆ ಮೀಸಲಾತಿ ಬೇಕು. ಇಂದು ನಾನು ಅನೇಕ ಹಾಡಿ ಕಾಲೋನಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಸಮಾನತೆ ಇದೇ ಎಂದು ಅನ್ನಿಸುತ್ತದೆ. ಏಕೆಂದರೆ ಇಂದು ಶ್ರೀಮಂತರ -ಬಡವರ ನಡುವೆ ಅಂತರ ಕಡಿಮೆಯಾಗುತ್ತಿದೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ಇದೆ. ಅಂದರೆ ಕೆಲವರು ಮಾತ್ರ ಇಂದು ದೇಶದಲ್ಲಿ ಶ್ರೀಮಂತರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಶ್ರೀಮಂತ - ಬಡವರ ಅಂತರ ಹೆಚ್ಚುತ್ತಿದೆ. ಸಂವಿಧಾನದಲ್ಲಿ ಅಭಿವೃದ್ಧಿ, ಕಾನೂನು ರಚನೆಗಳ ಬಗ್ಗೆ ತಿಳಿಸಿದೆ. ಇಲ್ಲಿ ದೇಶದ ಸಂಪತ್ತು ಎಲ್ಲರಿಗೂ ಸೇರಬೇಕು.
ಹಣದಲ್ಲಿ ಕ್ರೋಢೀಕರಣಕ್ಕೆ ಸರಕಾರ ಅವಕಾಶ ನೀಡಬಾರದು ಎನ್ನುವ ಆಶಯ ಇದೆ. ಇದನ್ನೇ ನಮ್ಮ ಸರಕಾರ ಪಂಚ ಗ್ಯಾರಂಟಿ ಮೂಲಕ ಬಡವರಿಗೆ, ವಿವಿಧ ವರ್ಗದವರಿಗೆ ಹಂಚುತ್ತಿದೆ ಎಂದು ಪೊನ್ನಣ್ಣ ಹೇಳಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಬುಸಂ ಮತ್ತು ಸದಸ್ಯ ಜೂನ, ಪೊನ್ನಂಪೇಟೆ ಪ.ಪಂ. ಉಪಾಧ್ಯಕ್ಷ ಅಲೀರ ರಶೀದ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ ಶಂಕರ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಶಾಸಕರ ಅಪ್ತ ಕಾರ್ಯದರ್ಶಿ ರಾಮಚಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ,್ಣ ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಲಾಲ ಅಪ್ಪಣ್ಣ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ,್ಪ ಜಾನಪದ ಪರಿಷತ್ ಕಾರ್ಯದರ್ಶಿ ಮುನೀರ್ ಅಹ್ಮದ್, ವಿ.ಕೆ. ಸತೀಶ್ ಕುಮಾರ್, ವೀರಭದ್ರಯ್ಯ, ಗಣೇಶ್ ಉಪಸ್ಥಿತರಿದ್ದರು.
ಕೂಡಿಗೆಯ ಅಬ್ದುಲ್ ಕಲಾಂ ವಸತಿ ನಿಲಯದ ಡಾ. ಗುರುಸ್ವಾಮಿ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ಹಿರಿಯ ದಲಿತ ಮುಖಂಡರುಗಳನ್ನು, ಪ್ರಮುಖರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಅಂಬೇಡ್ಕರ್ ಭವನ ಪೂರ್ಣಗೊಳುಲು ಅನುದಾನ ನೀಡಿದ ಶಾಸಕರನ್ನು ಕೂಡ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಎಸ್.ಟಿ ಗಿರೀಶ್ ಕ್ರಾಂತಿಗೀತೆ ಹಾಡಿದರು.ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿದ್ದು, ಯುವಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆಮಾಡುವ ಮೂಲಕ ಬಲಿಷ್ಠ ದೇಶಕಟ್ಟಲು ಶ್ರಮಿಸಬೇಕು. ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಲು ಅಂಬೇಡ್ಕರ್ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿದ್ದು, ಪ್ರತಿಯೊಬ್ಬರು ಭಾರತದ ಸಂವಿಧಾನದ ಬಗ್ಗೆ ಅಧ್ಯಯನ ಮಾಡಬೇಕು ಎಂದರು. ನಂತರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಎನ್.ಪಿ. ರೀತಾ, ಎಂ.ಎ. ಕುಶಾಲಪ್ಪ, ಪುತ್ತಾಮನೆ ಪೂಜಾ, ಬಿಬಿಎ ವಿಭಾಗ ಮುಖ್ಯಸ್ಥ ಅಜಯ್ ಕುಮಾರ್, ಎನ್.ಎಸ್.ಎಸ್. ಹಾಗೂ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ, ಸಂವಿಧಾನಕ್ಕೆ ಸಂಬAಧಿಸಿದAತೆ ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು, ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನೀತ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.ಕಣಿವೆ: ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ ಮಾತನಾಡಿ, ಡಾ. ಅಂಬೇಡ್ಕರ್ ಮಾನವೀಯತೆಯ ಮೇರುದೀಪ. ಅವರು ಬರೆದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದುದು. ಇದರಿಂದಾಗಿ ಅದೆಷ್ಟೋ ಬಡ ಹಾಗೂ ನಿರ್ಗತಿಕ ಮಂದಿಯ ಬದುಕು ಬೆಳಕಾಗಿದೆ. ದೇವಾಲಯಗಳಿಗೆ ಹೋಗಿ ಸಾಲಾಗಿ ನಿಲ್ಲುವ ನಮ್ಮ ಜನ ಗ್ರಂಥಾಲಯಗಳ ಮುಂದೆ ಸಾಲಾಗಿ ನಿಂತಾಗ ನಾನು ಬರೆದ ಸಂವಿಧಾನಕ್ಕೆ ಇನ್ನಷ್ಟು ಹೊಳಪು ಸಿಗುತ್ತದೆ. ಮಂದಿಯ ಬದುಕು ಮತ್ತಷ್ಟು ಹಸನಾಗುತ್ತದೆ ಎಂದು ಹೇಳಿದ ಸಂವಿಧಾನ ಶಿಲ್ಪಿಯ ಹೇಳಿಕೆಯನ್ನು ಡಾ. ದೀಪಿಕಾ ಈ ಸಂದರ್ಭ ಉಲ್ಲೇಖಿಸಿದರು. ಆಸ್ಪತ್ರೆಯ ಆರೋಗ್ಯ ಸುರಕ್ಷತಾ ಅಧಿಕಾರಿ ಶಕೀನಾ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಮುಖೇಶ್, ಚಂದ್ರೇಶ್, ಪ್ರಯೋಗ ಶಾಲಾ ತಂತ್ರಜ್ಞರಾದ ಶುಭ, ಸಿಬ್ಬಂದಿ ಮಂಜುನಾಥ ಇದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಿಆರ್‌ಪಿ ತಿರುನೆಲ್ಲಿಮಾಡ ಜೀವನ್ ಹಾಗೂ ಶಿಕ್ಷಕರು ಹಾಜರಿದ್ದರು.ಮಡಿಕೇರಿ: ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಕೊಟ್ಟಮುಡಿ ಅಭಿಪ್ರಾಯಪಟ್ಟರು.
ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ಎಂಬುದನ್ನು ಸಾರಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಲ್ಲಿ ಭಯಮುಕ್ತವಾಗಿ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ. ಅಂಬೇಡ್ಕರ್ ಅವರ ತತ್ವ, ಸಿದ್ದಾಂತವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಹಮೀದ್, ಮೊಣ್ಣಪ್ಪ, ವಕೀಲ ರಿಯಾಝ್, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.ಕುಶಾಲನಗರ: ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಎಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಉಪನ್ಯಾಸಕ ಬಿ.ಎಂ. ಲಿಂಗರಾಜು ಕರೆ ನೀಡಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಸ್ಪೃಶ್ಯರಿಗೆ ನೀಡಿದ ಮತದಾನದ ಅವಕಾಶವನ್ನು ಬಹುಸಂಖ್ಯಾತ ಮನುವಾದಿಗಳು ವಂಚಿತಗೊಳಿಸುವ ವ್ಯವಸ್ಥಿತ ಪ್ರಯತ್ನವನ್ನು ಡಾ. ಅಂಬೇಡ್ಕರ್ ವಿರೋಧಿಸಿದರು. ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದ ಅಂಬೇಡ್ಕರ್ ಅಂದೇ ಅವುಗಳ ಅನುಷ್ಠಾನ ಮಾಡುವ ಬಗ್ಗೆ ದೂರದರ್ಶತ್ವವನ್ನು ಹೊಂದಿದ್ದರು ಎಂದರು.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಒಳಗೆ ಮರು ಪರೀಕ್ಷೆ ನಡೆಸಿ ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುವ ದೂರದೃಷ್ಠಿತ್ವ ೧೯೩೫ ರಲ್ಲಿ ಅಂಬೇಡ್ಕರ್ ಹೊಂದಿದ್ದರು. ಅದನ್ನು ಇಂದಿನ ಸರ್ಕಾರಗಳು ತಮ್ಮ ಆಲೋಚನೆ ಎಂದು ಜಂಬದಿAದ ಹೇಳಿಕೊಳ್ಳುತ್ತಿವೆ. ಒಳ ಮೀಸಲಾತಿ ವಿಚಾರವಾಗಿ ಉಪಜಾತಿಗಳನ್ನು ರದ್ದುಪಡಿಸಬೇಕೆಂದು ಅಂಬೇಡ್ಕರ್ ಬಯಸಿದ್ದರು. ಎಲ್ಲರಿಗೂ ಸಮಾನ ಅವಕಾಶಗಳ ಆಶಯವನ್ನು ಕೊಡಲು ಬಯಸಿದ್ದರು. ಆದರೆ ದುರದೃಷ್ಟವಶಾತ್ ಉಪಜಾತಿಗಳ ಒಳಜಗಳ ಇಂದು ಬೀದಿಗೆ ಬಂದು ನಿಂತಿರುವುದು ವಿಪರ್ಯಾಸ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಪರಿಕಲ್ಪನೆಯನ್ನು ಇಂದಿನ ರಾಜಕೀಯ ವ್ಯವಸ್ಥೆ ಒಡೆದು ಹಾಕುತ್ತಿರುವುದು ವಿಷಾದನೀಯ ಎಂದರು.
ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಜಾತಿ ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಣದ ಬಗ್ಗೆ ಪುರುಷರಿಗೆ ಎಷ್ಟು ಅವಕಾಶಗಳು ಇವೆಯೋ ಅಷ್ಟೇ ಅವಕಾಶಗಳನ್ನು ಮಹಿಳೆಯರಿಗೂ ಕೊಡಬೇಕೆಂಬ ಸಂಕಲ್ಪವನ್ನು ಸಂವಿಧಾನದ ಮೂಲಕ ಹೇಳಿದವರು ಅಂಬೇಡ್ಕರ್ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳಾದ ನಾವು ಅವರ ಸಂದೇಶಗಳನ್ನು ತಿಳಿದು, ಸದಾ ಅನುಸರಿಸಬೇಕಾಗಿದೆ ಎಂದರು.
ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜೊತೆಯಲ್ಲಿ ಈ ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಡಿ. ಚಂದ್ರು, ಸಮಾಜಸೇವಕ ಬಿ.ಡಿ. ಅಣ್ಣಯ್ಯ, ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು ಮಾತನಾಡಿದರು. ಶಿಕ್ಷಕ ಸುನೀಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಸದಸ್ಯರಾದ ಬಿ. ಜೈವರ್ಧನ್, ಜಯಲಕ್ಷö್ಮಮ್ಮ ನಂಜುAಡಸ್ವಾಮಿ, ಮುಖ್ಯಾಧಿಕಾರಿ ಗಿರೀಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಕರ್ನಾಟಕ ಕಾವಲು ಪಡೆದ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಡಯಟ್ ಹಿರಿಯ ಉಪನ್ಯಾಸಕಿ ಪುಷ್ಪಾ, ಜಿಲ್ಲಾ ಸೋಲಿಗರ ಸಂಘದ ಅಧ್ಯಕ್ಷ ಮಹೇಶ್, ಮುಖಂಡರಾದ ದಾಮೋದರ್, ಗೋವಿಂದರಾಜು, ಹೆಚ್.ಬಿ. ಗಣೇಶ್, ಶಿವಕುಮಾರ್, ಸತೀಶ್ ಪಾಲ್ಗೊಂಡಿದ್ದರು. ಲೋಕೇಶ್ ಪ್ರಾರ್ಥಿಸಿದರು. ಶಿಕ್ಷಕ ಮಹೇಂದ್ರ ಸ್ವಾಗತಿಸಿದರು. ಶಿಕ್ಷಕಿ ರಾಣಿ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕಾವೇರಿ ಪ್ರತಿಮೆ ಬಳಿಯಿಂದ ಅಲಂಕೃತ ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ಮೆರವಣಿಗೆ ನಡೆಸಲಾಯಿತು.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಅವರುಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಸದಸ್ಯರುಗಳಾದ ಪಿ.ಎಫ್. ಸಬಾಸ್ಟಿನ್, ಹೆಚ್.ಯು. ರಫೀಕ್ ಖಾನ್, ಆರ್.ಎಸ್. ವಸಂತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಹೆಚ್.ಕೆ. ಚಂದ್ರಕಲಾ, ಸಿಬ್ಬಂದಿಗಳಾದ ಎಸ್.ಎ. ಶ್ರೀನಿವಾಸ್, ಈ.ಎಸ್. ಸಂಧ್ಯಾ ಶಶಿ, ಡಿ.ಎಂ. ಮಂಜುನಾಥ್, ರಂಗಸ್ವಾಮಿ, ವೀರಭದ್ರ, ವಿಶ್ವ, ಮಣಿಕಂಠ, ಮುನಿಸ್ವಾಮಿ, ಮುರುಗೇಶ್, ರಮೇಶ್, ರಾಜ, ಚಂದ್ರ ಮಣಿ ಹಾಗೂ ಇತರರು ಇದ್ದರು.ಸೋಮವಾರಪೇಟೆ: ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವತಿಯಿಂದ ಶಾಲಾ ಆವರಣದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಕಾಲೇಜು ಪ್ರಾಂಶುಪಾಲ ಹೆಚ್.ಕೆ. ಉಮೇಶ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಜೀವನ, ದೇಶಕ್ಕೆ ಅವರ ಕೊಡುಗೆ, ಸರ್ವರಿಗೂ ಸಮಾನವಾದ ಬದುಕನ್ನು ಕಲ್ಪಿಸಿದ ಅವರ ಜೀವನ ಇಂದಿನ ಯುವಜನಾಂಗಕ್ಕೆ ಮಾರ್ಗದರ್ಶನವಾಗಬೇಕೆಂದರು.
ಮುಖ್ಯ ಶಿಕ್ಷಕ ಎಂ.ಎA. ಯಶ್‌ವಂತ್ ಕುಮಾರ್, ಕಾಲೇಜು ಉಪನ್ಯಾಸಕರು, ಸಹ ಶಿಕ್ಷಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.