ನಾಪೋಕ್ಲು, ಏ. ೧೫: ಗ್ರಾಮ ಪಂಚಾಯಿತಿಯ ೨೦೨೪-೨೫ರ ಸಾಲಿನ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.

ಹಿಂದೆ ನಿಗದಿಪಡಿಸಿದಂತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜು ಪಕ್ರಿಯೆ ಕುರಿತು ಮಾಹಿತಿ ನೀಡಿದ ಅವರು, ಮಾರುಕಟ್ಟೆ ೧೯ ಲಕ್ಷ ೭ ಸಾವಿರ ೪೭೦ ರೂ.ಗಳಿಗೆ ಹರಾಜಾಗಿದೆ. ವಾಹನ ಶುಲ್ಕ ೩,೧೨,೭೦೦ ರೂ.ಗಳಿಗೆ, ಹಸಿ ಮೀನು ಒಂದನೇ ಮಳಿಗೆ ೩,೫೬,೦೦೬ ರೂ. ಗಳಿಗೆ ಹಾಗೂ ಎರಡನೇ ಮಳಿಗೆ ೩,೨೬,೯೭೮ ರೂ.ಗಳಿಗೆ ಹರಾಜಾಗಿದೆ. ಕುರಿಮಾಂಸ ಮಳಿಗೆ ಒಂದನ್ನು ೧,೭೨,೨೮೦ಗಳಿಗೆ ಎರಡನ್ನು ೧,೭೨,೧೬೨ ರೂ.ಗಳಿಗೆ ಹರಾಜಾಗಿದೆ. ಕೋಳಿ ಮಾಂಸ ಆರು ಮಳಿಗೆಗಳಿಗೆ ಅವಕಾಶಗಳಿದ್ದು ಇದರಲ್ಲಿ ನಾಲ್ಕು ಮಳಿಗೆಗಳನ್ನು ತಲಾ ೭೮,೧೧೬ ರೂ.ಗಳಿಗೆ ಹರಾಜಾಗಿದೆ ಉಳಿದ ಹರಾಜನ್ನು ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಂಗAಡ ಶಶಿ ಮಂದಣ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.