ಮಡಿಕೇರಿ, ಏ. ೧೫ : ಮುದ್ದಂಡ ಕುಟುಂಬದ ವತಿಯಿಂದ ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಮಂಗಳವಾರ ೯ ತಂಡಗಳು ಮುನ್ನಡೆ ಸಾಧಿಸಿದವು.
ಮೈದಾನ ೧ರಲ್ಲಿ ಚೆರುವಾಳಂಡ ಮತ್ತು ಸಣ್ಣುವಂಡ ತಂಡಗಳ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಸಣ್ಣುವಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಯತಿಕ್ ಅಯ್ಯಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೂವಯ್ಯ ೧ ಗೋಲು ಬಾರಿಸಿದರು. ಚೆರುವಾಳಂಡ ಪರ ಸುಬ್ಬಯ್ಯ ೧ ಗೋಲು ದಾಖಲಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೋಮೆಯಂಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ ೫-೧ ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಗೆಲುವು ದಾಖಲಿಸಿತು. ಸೋಮೆಯಂಡ ಪರ ಅಪ್ಪಚ್ಚು ಭರ್ಜರಿ ೪ ಗೋಲು ದಾಖಲಿಸಿದರೆ, ಅಪ್ಪಯ್ಯ ೧ ಗೋಲು ಬಾರಿಸಿದರು. ಅಲ್ಲಾರಂಡ ಪರ ಗೌತಮ್ ಗಣಪತಿ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಓಡಿಯಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕಲಿಯಂಡ ಜಯ ಸಾಧಿಸಿತು. ಕಲಿಯಂಡ ಪರ ಭರತ್, ದೇಶ್ ಮುತ್ತಣ್ಣ, ಚಿರಂತ್, ಚಿಣ್ಣಪ್ಪ ಹಾಗೂ ಕಿರಣ್ ತಲಾ ೧ ಗೋಲು ದಾಖಲಿಸಿದರು. ಓಡಿಯಂಡ ಪೃಥ್ವಿ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕರಿನೆರವಂಡ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕಿಶನ್ ಸೋಮಯ್ಯ ಹಾಗೂ ಅಪ್ಪಚ್ಚು ತಲಾ ೧ ಗೋಲು ದಾಖಲಿಸಿದರು. ಕರಿನೆರವಂಡ ಪರ ಲಿತೇಶ್ ಬಿದ್ದಪ್ಪ ೧ ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಯವಂಡ ಮತ್ತು ಮುಕ್ಕಾಟಿರ (ಹರಿಹರ) ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಬಯವಂಡ ತಂಡ ಗೆಲುವು ದಾಖಲಿಸಿತು. ಬಯವಂಡ ಪರ ಜನಕ, ದೀಪು ಮಾದಪ್ಪ ಹಾಗೂ ಪೊನ್ನಣ್ಣ ತಲಾ ೧ ಗೋಲು ದಾಖಲಿಸಿದರು. ಮುಕ್ಕಾಟಿರ ನಿರನ್ ೧ ಗೋಲು ದಾಖಲಿಸಿದರು. ಮುಕ್ಕಾಟಿರ ಶ್ರುಹಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ ೨ರಲ್ಲಿ ಕಾಯಪಂಡ ಮತ್ತು ಮಾಳೇಟಿರ (ಕುಕ್ಲೂರು) ತಂಡಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಾಯಪಂಡ ತಂಡ ಗೆಲುವು ದಾಖಲಿಸಿತು. ಕಾಯಪಂಡ ಪರ ದೇವಯ್ಯ ೨ ಗೋಲು ದಾಖಲಿಸಿದರು. ಮಾಳೇಟಿರ ಸುವಿನ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಲ್ಲಚಂಡ ಮತ್ತು ಮೇಕೇರಿರ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಜಯ ಸಾಧಿಸಿತು. ಮೇಕೇರಿರ ಪರ ಅಭಿನವ್ ಗಣಪತಿ ೧ ಗೋಲು ಬಾರಿಸಿದರು. ಬಲ್ಲಚಂಡ ನಾಣಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನಂಬುಡಮಾಡ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ನಂಬುಡಮಾಡ ತಂಡ ಜಯ ಸಾಧಿಸಿತು. ನಂಬುಡಮಾಡ ಪರ ಜೆಮ್ಸಿ ಹಾಗೂ ನಿಹಾಲ್ ಅಚ್ಚಯ್ಯ ತಲಾ ೧ ಗೋಲು ದಾಖಲಿಸಿದರು. ಚೊಟ್ಟೆಯಂಡಮಾಡ ಪರ ನಾಣಯ್ಯ ಹಾಗೂ ದೀಪಕ್ ತಲಾ ೧ ಗೋಲು ದಾಖಲಿಸಿದರು. ಚೊಟ್ಟೆಯಂಡಮಾಡ ಮೋಹಿತ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಯ್ಯನೆರವಂಡ ಮತ್ತು ಅಂಜಪರವAಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಅಂಜಪರವAಡ ಗೆಲುವು ದಾಖಲಿಸಿತು. ಅಂಜಪರವAಡ ಪರ ಚಿರಾಗ್ ಚೆಂಗಪ್ಪ ೨, ಜತನ್ ಅಯ್ಯಪ್ಪ, ರೋಶನ್ ಮಾದಪ್ಪ ಹಾಗೂ ವಿನಯ್ ಪೂವಣ್ಣ ತಲಾ ೧ ಗೋಲು ದಾಖಲಿಸಿದರು. ಅಯ್ಯನೆರವಂಡ ತನುಷ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.