ಮಡಿಕೇರಿ, ಏ. ೧೫: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಾಸನ ನಗರದ ಕಲಾ, ವಿಜ್ಞಾನ ಕಾಲೇಜು ಹಾಗೂ ಮಲ್ನಾಡ್ ಇಂಜಿನಿಯರಿAಗ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ನಡೆದ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆಕರ್ಷಕ ಟ್ರೋಫಿಯೊಂದಿಗೆ ರೂ. ೨೫ ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ಕೊನೆಯ ಬಾಲ್ವರೆಗೆ ಹೋರಾಟ ನಡೆಸಿ ಕೊಡಗು ತಂಡವು ವಿರೋಚಿತ ಸೋಲು ಕಂಡಿತು. ಕೊಡಗು ತಂಡದ ಪರ ನಾಯಕ ಬಿ.ಮಂಜು, ಉಪನಾಯಕ ಎ.ಎಸ್. ಮುಸ್ತಫಾ, ಇಸ್ಮಾಯಿಲ್ ಕಂಡಕರೆ, ಹೇಮಂತ್, ಎಂ.ಕೆ. ಆದರ್ಶ್, ಆಂಟೋಣಿ, ಜಯಪ್ರಕಾಶ್, ಶಿವರಾಜ್, ರೆಜಿತ್ ಕುಮಾರ್ ಗುಹ್ಯ, ಪ್ರೇಮ್, ವಿನೋದ್ ಕೆ.ಎಂ, ಸಂತೋಷ್ ರೈ, ನವೀನ್ ಸುವರ್ಣ ಹಾಗೂ ಲೋಹಿತ್ ಪ್ರತಿನಿಧಿಸಿದರು.