ವೀರಾಜಪೇಟೆ: ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಪುö್ಪನಾಡು ಅರಮೇರಿಯಲ್ಲಿರುವ ಶ್ರೀ ಪಾಡಿ ಇಗ್ಗುತ್ತಪ್ಪ ದೇವರ ಸಹೋದರಿ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಮೊದಲ ದಿನ ಉತ್ಸವ ಮೂರ್ತಿಯನ್ನು ಎಳನೀರಿನಿಂದ ಶುದ್ಧಗೊಳಿಸಿ ಪೂಜೆ ಸಲ್ಲಿಸಲಾಯಿತು. ಬಾಚೀರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಬಳಿಕ ದೇವರ ದರ್ಶನ ನಡೆಯಿತು. ಮರುದಿನ ಪ್ರಮುಖ ಆಕರ್ಷಣೆಯಾದ ದೇವಿಯ ಕೊಡೆ ತರುವ ಧಾರ್ಮಿಕ ವಿಧಾನವನ್ನು ನೆರವೇರಿಸಲಾಯಿತು.

ಗದ್ದೆಯ ಮೂಲಕ ಕೊಡೆಯನ್ನು ಹೊತ್ತ ಭಕ್ತರು ದೇವಾಲಯವನ್ನು ಪ್ರವೇಶಿಸಿದರು. ದೇವಾಲಯಕ್ಕೆ ಪ್ರದಕ್ಷಿಣೆ ಸಲ್ಲಿಸಿ ಕೊಡೆಯನ್ನು ಉತ್ಸವ ಮೂರ್ತಿಯ ಬಳಿ ಇಡಲಾಯಿತು. ಉತ್ಸವದ ಸಂದರ್ಭ ಭಕ್ತರು ತಾವು ಹೊತ್ತ ಹರಕೆಗಳನ್ನು ಸಮರ್ಪಿಸಿದರು. ಸಂಜೆ ದೇವಿಯ ಉತ್ಸವ ಮೂರ್ತಿಯು ದೇವಾಲಯಕ್ಕೆ ಪ್ರದಕ್ಷಿಣೆ ಬರುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಉತ್ಸವದ ಸಂದರ್ಭ ಅನ್ನಸಂತರ್ಪಣೆ ನಡೆಯಿತು. ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಭಾಗವಹಿಸಿದ್ದರು.

ಶಾಸಕರ ಭೇಟಿ: ಪನ್ನಂಗಾಲತಮ್ಮೆ ದೇವಾಲಯಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿದರು.

ಉತ್ಸವದಲ್ಲಿ ಭಾಗಿಯಾದ ಶಾಸಕರು ಶ್ರೀ ದೇವಿಗೆ ಉತ್ಸವ ಸಂದರ್ಭದಲ್ಲಿ ಸಲ್ಲುವ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಜಾತ್ರೋತ್ಸವಕ್ಕೆ ಆಗಮಿಸಿದ ಭಕ್ತರಲ್ಲಿ ಹಲವರು ಶಾಸಕರಲ್ಲಿ ಮಾತನಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.ಗುಡ್ಡೆಹೊಸೂರು: ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೊಳ್ಳೂರು ಶ್ರೀಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ದೇವಿಯ ಆರಾಧನೆ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆಯಿಂದಲೇ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಅರ್ಚಕ ಸತ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಅಭಿಷೇಕ, ಕಲಶ ಪ್ರತಿಷ್ಠಾಪನೆ ಹಾಗೂ ದೇವಿಗೆ ಅಭಿಷೇಕ ಭಕ್ತಿ ಪೂರಕವಾಗಿ ನಡೆದವು. ವಾರ್ಷಿಕ ಪೂಜೆ ಅಂಗವಾಗಿ ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು ದೇವಾಲಯವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.

ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಬೆಳ್ಳೂರು, ಗುಡ್ಡೆಹೊಸೂರು, ಹಾರಂಗಿ, ಮಾದಾಪಟ್ಟಣ, ಬಸವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ನೆರವೇರಿಸಿದರು.

ಶ್ರೀಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ ಮಾತನಾಡಿ, ರೂ. ೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಸಮಿತಿ ನಿರ್ಧರಿಸಿದೆ.

ಸುಮಾರು ಎಂಬತ್ತು ವರ್ಷಗಳ ಇತಿಹಾಸ ಹೊಂದಿರುವ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಪೂಜಾ ಕಾರ್ಯಗಳು ನಡೆಯುತ್ತಿವೆ. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.

ಹಿರಿಯರ ಮಾರ್ಗದರ್ಶನ ದಲ್ಲಿ ಹಲವಾರು ವರ್ಷಗಳಿಂದ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕೆ.ಡಿ. ದಾದಪ್ಪ, ಕಾರ್ಯದರ್ಶಿ ಬಿ.ಎಂ. ಸಂತೋಷ್ ಕುಮಾರ್, ಖಜಾಂಚಿ ಜಿ.ಎನ್. ಷಣ್ಮುಖ, ನಿರ್ದೇಶಕರಾದ ಬಿ.ಪಿ. ಗುರುಬಸಪ್ಪ, ಬಿ.ಟಿ ಪ್ರಸನ್ನ, ಬಿ.ಜಿ. ಸಂಪತ್, ಬಿ.ಎನ್. ಕಾಶಿ, ಎಂ.ಆರ್. ಉತ್ತಪ್ಪ, ವಿ.ಬಿ. ನಾಗರಾಜು, ಬಿ.ವಿ. ಮೋಹನ್ ಕುಮಾರ್, ಬಿ.ಆರ್. ಮಹಾದೇವ, ಕೆ.ಆರ್. ನಿತ್ಯಾನಂದ, ಬಿ.ಜಿ. ನಂದಕುಮಾರ್, ಎಂ. ಅಭಿಷೇಕ್, ಬಿ.ಪಿ. ಪ್ರಶಾಂತ್ ಸುವರ್ಣ, ಸಿ.ಆರ್. ದಿನು, ವಿಜಯ್ ಕುಮಾರ್, ಮುಖಂಡರಾದ ಪುಲಿಯಂಡ ರಾಮುದೇವಯ್ಯ, ಚಂದ್ರಶೇಖರ್, ದಾಮೋದರ ಪಾಲ್ಗೊಂಡಿದ್ದರು. ಸಂಜೆ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಶಾಸಕರ ಭೇಟಿ : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇದೇ ಸಂದರ್ಭ ಮಾತನಾಡಿ ಅವರು ದೇವಸ್ಥಾನ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ರೂ.೧೦ ಲಕ್ಷ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಕೆಪಿಸಿಸಿ ಸದಸ್ಯ ಹೆಚ್.ಕೆ. ನಟೇಶ್ ಗೌಡ, ದಾಮೋದರ ಭಾಗವಹಿಸಿದ್ದರು.ಶನಿವಾರಸಂತೆ: ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹ್ ಅವರ ಉರೂಸ್ ಸಮಾರಂಭ ಮತ್ತು ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಗುಡುಗಳಲೆಯ ಶಾಫಿ ಬದ್ರಿಯಾ ಜುಮಾ ಮಸೀದಿ ಮತ್ತು ಹಝ್ರತ್ ಫಬೀರ್ ಷಾಹ್ ದರ್ಗಾ ಶರೀಫ್‌ನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದವು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸಾವಿರಾರು ಮಂದಿ ಭಕ್ತರು ಉರೂಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉರೂಸ್ ಪ್ರಯುಕ್ತ ಜುಮಾ ನಮಾಜಿನ ನಂತರ ಜಿಜೆಎಂ ಅಧ್ಯಕ್ಷ ಟಿ.ಎ. ಇಸ್ಮಾಯಿಲ್ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಸೂಫಿ ದಾರಿಮಿ ಪ್ರಾರ್ಥಿಸಿದರು. ನಂತರ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಖತೀಬ್ ಸೂಫಿ ದಾರಿಮಿ ಉದ್ಘಾಟಿಸಿದರು. ಜನಾಬ್ ಟಿ.ಎ. ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಲಕ್ಷ ದ್ವೀಪದ ಬಹು ಅಸಯ್ಯಿದ್ ಝೈನುದ್ದೀನ್ ಸಖಾಫಿ ಅಲ್ ಬುಖಾರಿ ಕೂರಿಕ್ಕುಝಿ ತಂಙಳ್ ಮುಖ್ಯ ಪ್ರಭಾಷಣ ಮತ್ತು ದುಃಆ ಮಜ್ಲಿಸ್ ಅನ್ನು ಮಾಡಿದರು. ಶನಿವಾರ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಜೆಎಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಮುಸ್ತಫ ವಹಿಸಿದ್ದರು. ಕೇರಳ ಕಣ್ಣೂರಿನ ಅಸ್ಸಾಂ ಅಝಹರಿ ಪೊಯಿತುಮ್ ಕಡಾವ್ ಮುಖ್ಯ ಪ್ರಭಾಷಣ ಮಾಡಿದರು. ದುಃಆ ಮಜ್ಲಿಸ್ ನೇತೃತ್ವವನ್ನು ಕೇರಳ ಕಾಸರಗೋಡು ಕುಂಬೋಳ್‌ನ ಅಸ್ಸಯ್ಯಿದ್ ಆಲೀ ತಂಙಳ್ ವಹಿಸಿದ್ದರು. ಗುಡುಗಳಲೆ ಜಾತ್ರಾ ಮೈದಾನದಲ್ಲಿ ಭಾನುವಾರ ಮಖಾಂ ಉರೂಸ್ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಜೆಎಂ ಉಪಾಧ್ಯಕ್ಷ ಜನಾಬ್ ಸಿ.ಎಂ.ಅಬ್ದುಲ್ಲಾ ವಹಿಸಿ ಮಾತನಾಡಿದರು. ಬೆಳಿಗ್ಗೆ ೧೧.೩೦ ಗಂಟೆಗೆ ಮೌಲೀದ್ ಪಾರಾಯಣ ಕಾರ್ಯಕ್ರಮದಲ್ಲಿ ಕೇರಳ ಕಾಸರಗೋಡು ಕುಂಬೋಳ್‌ನ ದುಃಆ ಮಜ್ಜಿಸ್ ನೇತೃತ್ವದಲ್ಲಿ ಅಸ್ಸಯ್ಯಿದ್ ಅಲೀ ತಂಙಳ್ ನಡೆಯಿತು. ಮಧ್ಯಾಹ್ನ ೧ ಗಂಟೆಯಿAದ ೫ ಗಂಟೆಯವರೆಗೆ ಅನ್ನದಾನ ನಡೆದು ಉರೂಸ್ ಸಮಾರಂಭ ಸಂಪನ್ನವಾಯಿತು. ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಯಿ ಅಧ್ಯಾತ್ಮಿಕ ಕೇಂದ್ರದ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊAಡಿತು.

ಮಹಾಪೂಜೆ, ಧ್ವಜಾರೋಹಣ, ದೀಪಾರಾಧನೆ, ದೇವರ ಪ್ರದಕ್ಷಣೆ ಬಲಿಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ದೇವರ ದರ್ಶನ ಬಲಿ, ಮಹಾಭಿಷೇಕ, ಮಹಾಪೂಜೆ, ವಿಶೇಷ ಸೇವೆಗಳು, ದೇವರ ಪ್ರದಕ್ಷಣೆ ನೃತ್ಯ ಜರುಗಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಮತ್ತು ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವರ ಉತ್ಸವ ಮೂರ್ತಿಯನ್ನು ಚೆಂಡೆ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿ ನದಿಯಲ್ಲಿ ಅವಭೃತಸ್ನಾನದ ಬಳಿಕ ಸನ್ನಿಧಿಗೆ ಹಿಂತಿರುಗಿ ದೇವರ ಪ್ರದಕ್ಷಣೆ, ನೃತ್ಯ ಬಲಿ ಜರುಗಿತು. ಶುದ್ಧ ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆಯೊAದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊAಡಿತು.

ದೇವಾಲಯದ ಮುಖ್ಯ ಅರ್ಚಕ ಸುಧೀರ, ತಂತ್ರಿಗಳಾಗಿ ರಮೇಶ್ ಶರ್ಮಾ, ಸುರೇಶ್ ಶರ್ಮ, ಸತ್ಯಮೂರ್ತಿ ಸರಳಾಯ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಟಿ.ಆರ್. ಕಾರ್ಯದರ್ಶಿ ಸುಜಿ ಕುಮಾರ್ ಟಿ.ಎ, ಖಜಾಂಚಿ ಗೋಪಾಲ ಎಂ.ಪಿ., ಉಪಾಧ್ಯಕ್ಷ ಟಿ.ಕೆ. ಸೂರ್ಯಕುಮಾರ್, ಕಾರ್ಯಾಧ್ಯಕ್ಷ ರಮೇಶ್ ಟಿ.ಎನ್., ಹಿರಿಯರಾದ ಆನಂದ ಸ್ವಾಮಿ, ನಿರ್ದೇಶಕರುಗಳಾದ ರಾಧಾಕೃಷ್ಣ ರೈ, ತಂಗ, ಮಹೇಶ್, ಸೀನ, ಭವಾನಿ, ಲೀಲಾ ಸೇರಿದಂತೆ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದ ಆದಿ ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ಶ್ರೀ ದೇವಿಯ ದೇವತಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಕಣಿಯ ಜನಾಂಗದವರು ಶ್ರದ್ಧಾಭಕ್ತಿಯಿಂದ ಓಲೆ(ತಾಳೆ ಜಾತಿ ಸೇರಿದ ಮರದ ಗರಿ)ಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತುಪೋರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲತಮ್ಮೆ ದೇವಸ್ಥಾನಕ್ಕೆ ಮಧ್ಯಾಹ್ನ ತರಲಾಯಿತು.

ಈ ಕೊಡೆಯಲ್ಲಿ ಪನ್ನಂಗಾಲತಮ್ಮೆ ನೆಲೆಸಿರುವಳೆಂದೂ, ಅಣ್ಣನ ಮನೆಯಿಂದ ಅವಳನ್ನು ತನ್ನ ಮನೆಗೆ ಕರೆತರಲಾಗುವ ಪದ್ಧತಿ ಇದೆಂಬ ನಂಬಿಕೆ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿದೆ. ಅಣ್ಣನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿರುವುದೊಂದಿಗೆ ಭಕ್ತರನ್ನು ರೋಮಾಂಚನಗೊಳಿಸುತ್ತದೆ.

ಈ ಹಬ್ಬದ ಆರಂಭದಿAದಲೂ ದೇವಿಯ ಅಣ್ಣನಾದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಿಂದ ತೀರ್ಥ ಪ್ರಸಾದ ತರುವ ಸಂಪ್ರದಾಯವಿದ್ದು ಹಬ್ಬ ನಡೆಯುವ ದಿನ ಅಣ್ಣ ದುಃಖ ತಪ್ತನಾಗಿರುವ ಸನ್ನಿವೇಶ ಎಂಬAತೆ ಪಾಡಿ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮ ಬೆಟ್ಟ ಮೋಡಗಳಿಂದ ಕೂಡಿರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಇಲ್ಲಿ ಎರಡು ವರ್ಷಕ್ಕೊಮ್ಮೆ ದೊಡ್ಡ ಹಬ್ಬ ಜರುಗಲಿದ್ದು ಪ್ರಸಕ್ತ ವರ್ಷ ದೊಡ್ಡಹಬ್ಬ ವಿಜೃಂಭಣೆಯಿAದ ಜರುಗಿತು. ಉತ್ಸವವನ್ನು ವೀಕ್ಷಿಸಲು ಅಧಿಕ ಮಂದಿ ನೆರೆದಿದ್ದರು.ಐಗೂರು: ಬೇಳೂರು ಬಸವನಳ್ಳಿಯ ಗುಡುಗೂರಿನಲ್ಲಿ ಹಾಲೇರಿ ಬಸವೇಶ್ವರ ಜಾತ್ರೆಯು ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು. ದೇವಾಲಯದ ಆವರಣವು ತಳಿರು ತೋರಣ ಮತ್ತು ಕೇಸರಿ ಬಣ್ಣಗಳ ಚಿತ್ತಾರಗಳೊಂದಿಗೆ ರಾರಾಜಿಸುತ್ತಿತ್ತು. ಗಂಗಾಪೂಜೆಯ ನಂತರ ಅರ್ಚಕರು ಪಟ್ಟದಮ್ಮ ದೇವರು ಮತ್ತು ನಾಗದೇವರ ಬನಕ್ಕೆ ಪೂಜೆಯನ್ನು ಸಲ್ಲಿಸಿದರು.

ದೇವಾಲಯಕ್ಕೆ ಆಗಮಿಸಿದ ಬೇಳೂರು ಮಠದ ಸ್ವಾಮೀಜಿಗಳನ್ನು ಗ್ರಾಮದ ಮಾತೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಕರೆದೊಯ್ಯಲಾಯಿತು. ದೇವಾಲಯದ ಸಮಿತಿಯವರು ಮತ್ತು ಗ್ರಾಮಸ್ಥರ ಪರವಾಗಿ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮುಗಿದ ನಂತರ ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಪೂಜೋತ್ಸವದಲ್ಲಿ ದೇವಾಲಯದ ಸಮಿತಿಯವರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊAಡಿತು.

ಮಹಾಪೂಜೆ, ಧ್ವಜಾರೋಹಣ, ದೀಪಾರಾಧನೆ, ದೇವರ ಪ್ರದಕ್ಷಣೆ ಬಲಿಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ದೇವರ ದರ್ಶನ ಬಲಿ, ಮಹಾಭಿಷೇಕ, ಮಹಾಪೂಜೆ, ವಿಶೇಷ ಸೇವೆಗಳು, ದೇವರ ಪ್ರದಕ್ಷಣೆ ನೃತ್ಯ ಜರುಗಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಮತ್ತು ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವರ ಉತ್ಸವ ಮೂರ್ತಿಯನ್ನು ಚೆಂಡೆ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿ ನದಿಯಲ್ಲಿ ಅವಭೃತಸ್ನಾನದ ಬಳಿಕ ಸನ್ನಿಧಿಗೆ ಹಿಂತಿರುಗಿ ದೇವರ ಪ್ರದಕ್ಷಣೆ, ನೃತ್ಯ ಬಲಿ ಜರುಗಿತು. ಶುದ್ಧ ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆಯೊAದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊAಡಿತು.

ದೇವಾಲಯದ ಮುಖ್ಯ ಅರ್ಚಕ ಸುಧೀರ, ತಂತ್ರಿಗಳಾಗಿ ರಮೇಶ್ ಶರ್ಮಾ, ಸುರೇಶ್ ಶರ್ಮ, ಸತ್ಯಮೂರ್ತಿ ಸರಳಾಯ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಟಿ.ಆರ್. ಕಾರ್ಯದರ್ಶಿ ಸುಜಿ ಕುಮಾರ್ ಟಿ.ಎ, ಖಜಾಂಚಿ ಗೋಪಾಲ ಎಂ.ಪಿ., ಉಪಾಧ್ಯಕ್ಷ ಟಿ.ಕೆ. ಸೂರ್ಯಕುಮಾರ್, ಕಾರ್ಯಾಧ್ಯಕ್ಷ ರಮೇಶ್ ಟಿ.ಎನ್., ಹಿರಿಯರಾದ ಆನಂದ ಸ್ವಾಮಿ, ನಿರ್ದೇಶಕರುಗಳಾದ ರಾಧಾಕೃಷ್ಣ ರೈ, ತಂಗ, ಮಹೇಶ್, ಸೀನ, ಭವಾನಿ, ಲೀಲಾ ಸೇರಿದಂತೆ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಹರದೂರಿನಲ್ಲಿ ದೈವಗಳ ನೇಮೋತ್ಸವ

ಸುಂಟಿಕೊಪ್ಪ: ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ, ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ ೮೫ನೇ ನೇಮೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಆಯುಧಾ ಪೂಜೆ, ನಿತ್ಯಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು. ನಂತರ ಮಂತ್ರವಾದಿ ಗುಳಿಗನ ನೇಮ ನಡೆದು ಭಕ್ತರಲ್ಲಿ ಭಯಭಕ್ತಿ ಮೂಡಿಸಿತು. ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು.

ಗಂಧಪ್ರಸಾದದೊAದಿಗೆ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು ಸುಳ್ಯ, ಪುತ್ತೂರು, ಸಕಲೇಶಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.ಶನಿವಾರಸAತೆ: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಸಂಕ್ರಮಣ ವಿಶೇಷ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಭಕ್ತರು ದೇವರಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ, ಎಳನೀರು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿದರು. ಅರ್ಚಕರಾದ ವಿಮಲೇಶ್ಚಂದ್ರ, ಪ್ರಕಾಶ್ಚಂದ್ರ ಹಾಗೂ ಸಂತೋಷ್ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ಮಾಡಲಾಯಿತು.ನಾಪೋಕ್ಲು: ಸಮೀಪದ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನವ ಕಲಶ ಪೂಜೆ ಹಾಗೂ ಹೋಮವನ್ನು ನೆರವೇರಿಸಲಾಯಿತು. ಇಲ್ಲಿಯ ಗ್ರಾಮಕ್ಕೆ ಒಳಪಟ್ಟ ಊರಿನ ನಾಲ್ಕು ತಕ್ಕರಲ್ಲಿ ಒಬ್ಬರಾದ ಕೇಲೆಟ್ಟಿರ ಕುಟುಂಬಸ್ಥರ ಉಸ್ತುವಾರಿಯಲ್ಲಿರುವ ಈ ದೇಗುಲವು ಟಿಪ್ಪುವಿನ ಕಾಲದಲ್ಲಿ ಹಾನಿಗೊಳಗಾಗಿತ್ತು.

ಕೆಲವು ವರ್ಷಗಳ ಹಿಂದೆ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದು ಸ್ಥಗಿತಗೊಂಡಿದ್ದ ನಿತ್ಯಪೂಜೆ ವಿಶೇಷ ಪೂಜೆ ಹವನಗಳೊಂದಿಗೆ ಮರುಚಾಲನೆ ನೀಡಲಾಯಿತು.

ಬಿಸು ಶುಭ ದಿನವಾದ ಸೋಮವಾರದಿಂದ ದೇವಾಲಯದಲ್ಲಿ ಶ್ರೀ ಮಹಾವಿಷ್ಣುವಿಗೆ ನಿತ್ಯ ಪೂಜೆ ಆರಂಭವಾಗಲಿದೆ. ದಿನಂಪ್ರತಿ ಬೆಳಿಗ್ಗೆ ೮.೩೦ ಗಂಟೆಯಿAದ ೯.೩೦ ಗಂಟೆ ತನಕ ನಿತ್ಯಪೂಜೆ ನಡೆಯಲಿರುವುದಾಗಿ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.ಐಗೂರು: ಬೇಳೂರು ಬಸವನಳ್ಳಿಯ ಕಾರೆಕೊಪ್ಪದ ಉಚ್ಚ ಬಸವೇಶ್ವರ ದೇವರ ಉತ್ಸವವು ಪಂಚವಾದ್ಯ, ಪೂರ್ಣ ಕುಂಭ ಮೆರವಣಿಗೆ, ಕೊಂಡ ಹಾಯುವ ಮೂಲಕ ಭಕ್ತಿ ಪೂರ್ವಕವಾಗಿ ಸಂಪನ್ನಗೊAಡಿತು.

ದೇವಾಲಯವು ತಳಿರು-ತೋರಣ, ವಿದ್ಯುತ್ ದೀಪಗಳಿಂದ ಶೃಂಗಾರಗೊAಡಿತ್ತು. ಅರ್ಚಕ ಮಾದೇವ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನಡೆದವು. ಗ್ರಾಮದ ಬಾವಿ ಕಟ್ಟೆಗೆ ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸಿ ಗಂಗಾ ಪೂಜೆಯನ್ನು ನೆರವೇರಿಸಲಾಯಿತು.

ನಂತರ ಪೂರ್ಣ ಕುಂಭ ಹೊತ್ತ ಮಹಿಳೆಯರು ಮತ್ತು ಗ್ರಾಮಸ್ಥರು ಪಂಚವಾದ್ಯಗಳೊAದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತೆರಳಿದರು. ದೇವಾಲಯದ ಆವರಣದಲ್ಲಿ ಬೆಂಕಿಯ ಕೆಂಡದ ರಾಶಿಯ ಕೊಂಡ ಸೇವೆಯನ್ನು ಏರ್ಪಡಿಸಿದ್ದರು. ದರ್ಶನ ಬಂದ ದೇವರು ಕೆಂಡವನ್ನು ಹಾಯ್ದ ನಂತರ ಗ್ರಾಮಸ್ಥರಿಗೆ ಆಶೀರ್ವಚನವನ್ನು ನೀಡಿತು.

ಮಹಾಮಂಗಳಾರತಿ, ಪ್ರಸಾದ ವಿನಿಯೋಗಗಳು ನಡೆದ ನಂತರ ಗ್ರಾಮಸ್ಥರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.ಶನಿವಾರಸAತೆ: ಸುಳುಗಳಲೆ ಗ್ರಾಮದ ಚೌಡಮ್ಮ ತಾಯಿ, ಪಂಜುರ್ಲಿ ಹಾಗೂ ಗುಳಿಗ ದೈವದ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.

ಹೋಮ ನೆರವೇರಿದ ನಂತರ ದೇವರ ಪ್ರತಿಷ್ಠಾಪನೆ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ನೆರೆದಿದ್ದ ಸರ್ವರಿಗೂ ಅನ್ನಸಂತರ್ಪಣೆ ನಡೆಯಿತು.

ಪ್ರತಿಷ್ಠಾಪನೆ ಪೂಜಾ ವಿಧಿವಿಧಾನಗಳನ್ನು ಪಂಜದ ಲಕ್ಷö್ಮಣ್, ಗಂಗಾಧರ್ ಹಾಗೂ ಸನ್ನಿದಿಯ ಅರ್ಚಕ ಲಿಂಗಪ್ಪ ನೆರವೇರಿಸಿದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿ ಮತ್ತು ವಿವಿಧ ಹೋಮ-ಹವನಗಳ ಮೂಲಕ ದೇವಾಲಯ ಆವರಣದಲ್ಲಿ ನಡೆಯಿತು.

ವಾರ್ಷಿಕ ಪೂಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ ಇತ್ಯಾದಿ ಪೂಜಾ ಕೈಂಕರ್ಯಗಳು ಕೇರಳ ಶಿವಕುಮಾರ್, ಸಜೀ ತಂಡದವರ ನೇತೃತ್ವದಲ್ಲಿ ನಡೆಯಿತು.

ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಹಾಗೂ ಅನ್ನಸಂರ್ತಪಣೆ ನಡೆಯಿತು. ವಾರ್ಷಿಕ ಪೂಜೋತ್ಸವಕ್ಕೆ ಕೂಡಿಗೆ, ಕುಶಾಲನಗರ, ಮದಲಾಪುರ, ಹಾರಂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಈ ಪೂಜೋತ್ಸವ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಸಂಜೆ ೫ ಗಂಟೆಗೆ ವಾರ್ಷಿಕ ವರದಿ, ನಂತರ ೨೦೨೫-೨೬ನೇ ಸಾಲಿನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ ಸೂಚನಾ ಸಭೆ ನಡೆದವು.

೭ ಗಂಟೆಗೆ ದೀಪಾಲಂಕಾರ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಉಪಾಧ್ಯಕ್ಷ