ಕೂಡಿಗೆ, ಏ. ೧೫: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಮಳೆಗಾಲದಲ್ಲಿ ಸಂಪೂರ್ಣವಾಗಿ ಭರ್ತಿಯಾದಾಗ ನೀರನ್ನು ನದಿಗೆ ಹರಿಯಬಿಡುವ ಸಂದರ್ಭದಲ್ಲಿ ನೀರು ಧುಮ್ಮಿಕುವ ದೃಶ್ಯವನ್ನು ಪ್ರವಾಸಿಗರು ವೀಕ್ಷಿಸಲು ಅನುಕೂಲವಾಗುವಂತೆ ಮತ್ತು ಮುಂಭಾಗದ ಹಳೆಯ ಸೇತುವೆಯು ಸಂಪೂರ್ಣವಾಗಿ ಭರ್ತಿಯಾಗಿ ಸಾರ್ವಜನಿಕರಿಗೆ ತಿರುಗಾಟ ಮಾಡಲು ತೊಂದರೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಯ ಮೇರೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೀರಾವರಿ ಇಲಾಖೆಯ ಮುಖೇನ ರೂ. ೩೬ ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಅನುಮೋದನೆಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಾರಂಗಿ ನೀರಾವರಿ ಇಲಾಖೆಯ ಮೂಲಕ ನೂತನ ಸೇತುವೆ ಃoತಿ sಣಡಿiಟಿg ಂಡಿಛಿh bಡಿiಜgeನ ಕಾಮಗಾರಿಯ ಕ್ರಿಯಾ ಯೋಜನೆಗೆ ಸಂಬAಧಿಸಿದAತೆ ರೂ. ೩೬ ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮಕ್ಕೆ ಸಂಬAಧಿಸಿದ ಇಲಾಖೆಯೊಂದಿಗೆ ಸಭೆ ನಡೆದು ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿಗೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆ ನಡೆದು ಆಧುನಿಕ ತಂತ್ರಜ್ಞಾನದ ನೂತನ ಮಾದರಿಯ ಸೇತುವೆ ನಿರ್ಮಾಣದ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಅಣೆಕಟ್ಟೆಯ ಮುಂಭಾಗದಲ್ಲಿ ನೂತನ ಮಾದರಿಯಾಗಿ ಹೊಸ ಸೇತುವೆಯಲ್ಲಿ ವಾಹನಗಳ ಸಂಚಾರ ಜೊತೆಯಲ್ಲಿ ಒಂದು ಭಾಗದಲ್ಲಿ ಅಣೆಕಟ್ಟೆಯ ನೀರು ಧುಮ್ಮಿಕುವ ದೃಶ್ಯವನ್ನು ಸಹ ಸಾರ್ವಜನಿಕರು ವೀಕ್ಷಣೆ ಮಾಡುವ ಹೊಸ ರೀತಿಯಾದ ಃoತಿ sಣಡಿiಟಿg ಂಡಿಛಿh bಡಿiಜge ಕ್ರಿಯಾ ಯೋಜನೆಯಂತೆ ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ನಡೆಯಲಿದೆ ಎಂದು ಅಧೀಕ್ಷಕ ಅಭಿಯಂತರ ಕೆ.ಕೆ. ರಘಪತಿ ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಅಚ್ಚುಕಟ್ಟು ವ್ಯಾಪ್ತಿಯ ಉಪ ಕಾಲುವೆಗಳ ದುರಸ್ತಿಗೆ ಸಂಬAಧಿಸಿದAತೆ ರೈತರ ಬಹುದಿನಗಳ ಬೇಡಿಕೆಯ ಅನುಗುಣವಾಗಿ ನೀರಾವರಿ ಇಲಾಖೆಯ ಮೂಲಕ ೫೦ ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ೫೦ ಕೋಟಿ ವೆಚ್ಚದ ಕಾಮಗಾರಿ ಅನುಮೋದನೆಗೊಂಡಿದ್ದು, ಸದ್ಯದಲ್ಲಿ ಉಪ ಕಾಲುವೆಗಳ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ.