ಕೂಡಿಗೆ, ಏ. ೧೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರೈತರ ಸಭೆಯು ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ಸರಕಾರವು ರೈತರಿಗೆ ಶೇ. ೦ ಬಡ್ಡಿ ದರದಲ್ಲಿ ಕೆ.ಸಿ.ಸಿ. ಫಸಲು ಸಾಲ ನೀಡುವ ಸಂಬAಧವಾಗಿ ಸರಕಾರದ ಆದೇಶದ ಪ್ರಕಾರವಾಗಿ ಸಿಂಗಲ್ ಆರ್.ಟಿ.ಸಿ. ಉಳ್ಳವರು ಮಾತ್ರ ಪ್ರೂಟ್ ತಂತ್ರಾAಶದ ಮೂಲಕ ಫಾರಂ ೩ ಮಾಡಿಸಿ ಕೆ.ಸಿ.ಸಿ. ಸಾಲ ಪಡೆಯಬಹುದಾಗಿದೆ, ಅದರೆ ೨೦೨೧ರಲ್ಲಿ ಆದೇಶ ಬಂದರೂ ಇಲ್ಲಿಯವರೆಗೆ ಶೇ. ೦ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತಿತ್ತು. ಆದರೆ ಸಹಕಾರ ಸಂಘದಲ್ಲಿ ಕಳೆದ ವರ್ಷಗಳಲ್ಲಿ ಜಂಟಿ ಖಾತೆಯ ಆರ್.ಟಿ.ಸಿ.ಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ರೈತರು ಸಹಕಾರ ಸಂಘದ ನಿಯಮಾನುಸಾರ ಕೆ.ಸಿ.ಸಿ. ಸಾಲವನ್ನು ಪಡೆದಿರುತ್ತಾರೆ. ಆದರೆ ಇದೀಗ ಮರು ಪಾವತಿ ಸಂದರ್ಭದಲ್ಲಿ ಈ ನಿಯಮಗಳನ್ನು ಜಾರಿಗೆ ತಂದಿರುವುದರಿAದಾಗಿ ರೈತರುಗಳಿಗೆ ತೊಂದರೆ ಅಗುವುದರ ಬಗ್ಗೆ ಸಭೆಯಲ್ಲಿ ಹಾಜರಿದ್ದ ರೈತರು ತಿಳಿಸಿದರು.

ಸಭೆಯಲ್ಲಿ ಸರಕಾರದ ಸೂಚನೆ ಮತ್ತು ಅದಕ್ಕೆ ಅನುಗುಣವಾಗಿ ರೈತರಿಗೆ ಅನುಕೂಲವಾಗುವಂತೆ ಜಂಟಿ ಖಾತೆಯಲ್ಲಿರುವ ರೈತರಿಗೆ ಕೆ.ಸಿ.ಸಿ. ಸಾಲವನ್ನು ಪಡೆಯುವ ಯೋಜನೆಗೆ ಸಂಬAಧಿಸಿದ ಸಲಹೆ, ಸೂಚನೆಗಳು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನೀಡಿದರು. ಅದರ ಅನುಗುಣವಾಗಿ ಜಿಲ್ಲೆ ಕೇಂದ್ರದ ಬ್ಯಾಂಕ್ ನಿಯಮಗಳನ್ನು ಪಾಲನೆ ಮಾಡಿ ತಮ್ಮ ತಮ್ಮ ಜಂಟಿ ಖಾತೆದಾರರು ತಮ್ಮ ಆಧಾರ್ ಕಾರ್ಡ್ ನೋಂದಣಿ, ಸೇರಿದಂತೆ ಸಹಕಾರ ನಿಯಮಾನುಸಾರ ಕೆ.ಸಿ.ಸಿ. ಸಾಲ ನೀಡುವ ಸಂಪೂರ್ಣವಾದ ಮಾಹಿತಿಯನ್ನು ರೈತರಿಗೆ ಒದಗಿಸಿದರು. ಜೊತೆಗೆ ಸಿಂಗಲ್ ಆರ್.ಟಿ.ಸಿ. ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ರೈತರುಗಳಾದ ಪ್ರಕಾಶ್, ತಮ್ಮಯ್ಯ ರಾಜಣ್ಣ, ಕುಮಾರ್ ಕೆ.ಕೆ. ನಾಗರಾಜಶೆಟ್ಟಿ, ಸೋಮಶೇಖರ್, ಮಂಜುನಾಥ ಅವರು ಸಹಕಾರ ಸಂಘದ ನಿಯಮಗಳಿಲ್ಲಿ ಸಡಿಲಿಕೆಯ ಮೂಲಕ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡುವಂತೆ ಸಲಹೆಗಳನ್ನು ನೀಡುವುದರ ಜೊತೆಯಲ್ಲಿ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕ್‌ನ ಕುಶಾಲನಗರ ವಲಯ ವ್ಯವಸ್ಥಾಪಕ ಅಜಿತ್ ಕುಮಾರ್ ಕೆ.ಸಿ.ಸಿ. ಫಸಲು ಸಾಲ ಪಡೆಯುವ ಹೊಸ ವಿಧಾನ, ರೈತರು ಕೈಗೊಳ್ಳಬಹುದಾದ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಕೃಷ್ಣ ಗೌಡ, ಕೆ.ಪಿ. ರಾಜು, ಎಸ್.ಎಸ್. ಕೃಷ್ಣ, ಜಯಶ್ರೀ, ರಮೇಶ್, ಕುಮಾರ್, ಸಂಘದ ಮೇಲ್ವಿಚಾರಕ ಮಹಮ್ಮದ್, ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಸೇರಿದಂತೆ ೧೪ ಗ್ರಾಮಗಳ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.