ಕೂಡಿಗೆ, ಏ. ೧೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾರ್ಗದರ್ಶನದಲ್ಲಿ ವ್ಯಾಪ್ತಿಯ ನೂರು ರೈತರ ಅಧ್ಯಯನ ಪ್ರವಾಸವು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟಿçÃಯ ತೋಟಗಾರಿಕಾ ಮೇಳಕ್ಕೆ ತೆರಳಿ ತೋಟಗಾರಿಕೆಗೆ ಸಂಬAಧಿಸಿದAತೆ ಮೇಳದಲ್ಲಿದ್ದ ವಿಜ್ಞಾನಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಬೆAಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಬೃಹತ್ ರಾಷ್ಟಿçÃಯ ತೋಟಗಾರಿಕಾ ಮಹಾ ಮೇಳದಲ್ಲಿ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದ ತೋಟಗಾರಿಕೆಗೆ ಸಂಬAಧಿಸಿದ ನೂರಾರು ಬಗೆಯ ಫಲಪುಷ್ಪಗಳ ಪ್ರದರ್ಶನ, ವಿವಿಧ ಬಗೆಯ ತರಕಾರಿ ಹೈಬ್ರೀಡ್ ತಳಿಯ ಹಣ್ಣುಗಳ ಗಿಡಗಳ ವೀಕ್ಷಣೆ ಮತ್ತು ಹೈಬ್ರೀಡ್ ತಳಿಯ ವಿವಿಧ ಬಗೆಯ ತೋಟಗಾರಿಕಾ ಬೆಳೆ ಅದಕ್ಕೆ ಸಂಬAಧಿಸಿದ ಸಂಪೂರ್ಣ ವಾದ ಮಾಹಿತಿಯನ್ನು ಅಲ್ಲಿನ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದದ ಮೂಲಕ ವಿಚಾರ ಗಳನ್ನು ರೈತರು ತಿಳಿದುಕೊಂಡರು.

ಕಡಿಮೆ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರ ಮೂಲಕ ಅಧಿಕ ಬೆಳೆಯನ್ನು ಬೆಳೆಯುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದ ವಿವಿಧ ಬಗೆಯ ತೋಟಗಾರಿಕಾ ವಿಷಯಗಳ ಬಗ್ಗೆ ಕೇಂದ್ರದ ತೋಟಗಾರಿಕಾ ಸಂಸ್ಥೆಯ ಅಧಿಕಾರಿಗಳು ಸಹಕಾರ ಸಂಘದ ರೈತರಿಗೆ ಮಾಹಿತಿಯನ್ನು ಒದಗಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್. ಕೃಷ್ಣ, ರಾಮಚಂದ್ರ, ನಾಗರಾಜು, ಜಯಶ್ರೀ, ರಮೇಶ್ ಸೇರಿದಂತೆ ನೂರಾರು ರೈತರು ಹಾಜರಿದ್ದರು.