ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಏ. ೧೬: ಮಡಿಕೇರಿಯಲ್ಲಿ ಜರುಗುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವ ಮುಕ್ತಾಯಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿ ಉಳಿದಿವೆ. ಪಂದ್ಯಾಟದಲ್ಲಿ ಇದೀಗ ಬಲಿಷ್ಠ ತಂಡಗಳು ಮಾತ್ರ ಉಳಿದುಕೊಂಡಿದ್ದು ಆಟದ ರೋಚಕತೆಯೂ ಹೆಚ್ಚುತ್ತಿದೆ. ಈ ನಡುವೆ ಆಯೋಜಕರಾದ ಮುದ್ದಂಡ ಕುಟುಂಬಸ್ಥರು ಕೆಲವೊಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ವಿಶೇಷತೆಗಳು ತಾ. ೧೭ ರಿಂದ (ಇಂದಿನಿAದ) ಒಂದೊAದಾಗಿ ಪ್ರಾರಂಭಗೊಳ್ಳುತ್ತಿವೆ. ಕೇವಲ ಕೊಡವ ಜನಾಂಗದವರು ಮಾತ್ರವಲ್ಲ ಜಿಲ್ಲೆಯ ಇನ್ನಿತರ ಎಲ್ಲಾ ಜಾತಿ - ಜನಾಂಗದವರನ್ನು ಬೆಸೆಯುವ ನಿಟ್ಟಿನಲ್ಲಿ ಮುಕ್ತ ಕಾರ್ಯಕ್ರಮಗಳನ್ನು೮ ಹಾಕಿಯ ಸಂಭ್ರಮದ ನಡುವೆ ಏರ್ಪಡಿಸಲಾಗಿದೆ ಎಂದು ಮುದ್ದಂಡ ಹಾಕಿ ಕಪ್‌ನ ಅಧ್ಯಕ್ಷ ರಶಿನ್ ಸುಬ್ಬಯ್ಯ, ಪದಾಧಿಕಾರಿ ಆದ್ಯ ಪೂವಣ್ಣ ಮಾಹಿತಿ ನೀಡಿದ್ದಾರೆ.

ಇಂದು ಶ್ವಾನ ಪ್ರದರ್ಶನ

ತಾ. ೧೭ರಂದು (ಇಂದು) ಮುಖ್ಯ ಮೈದಾನದ ಬಳಿ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪಶುವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಮುದ್ದಿನ ಶ್ವಾನದೊಂದಿಗೆ ಮುಕ್ತವಾಗಿ ಭಾಗವಹಿಸಬಹುದಾಗಿದೆ. ಬೆಳಿಗ್ಗೆ ೧೦ ರಿಂದ ೧೧.೩೦ರವರೆಗೆ ಕಾರ್ಯ ಕ್ರಮವಿದ್ದು ವಿವಿಧ ವಿಭಾಗದಲ್ಲಿ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ಶ್ವಾನಗಳಿಗೆ ಉಚಿತ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ತಾ. ೨೦ರಂದು ಬೊಡಿ ನಮ್ಮೆ

ತಾ. ೨೦ರಂದು ಮುಕ್ತ ತೆಂಗಿನಕಾಯಿಗೆ ಗುಂಡುಹೊಡೆÀಯುವ ಸ್ಪರ್ಧೆ ಜರುಗಲಿವೆ. .೨೨, ೧೨ನೇ ಬೋರ್ ಹಾಗೂ ಏರ್‌ರೈಫಲ್ ವಿಭಾಗದಲ್ಲಿ ಮುಕ್ತ ಸ್ಪರ್ಧೆಯಿದ್ದು ನಗದು ಹಾಗೂ ಟ್ರೋಫಿ ನೀಡಲಾಗುವುದು.

ತಾ. ೨೧ರಿಂದ ಮಹಿಳಾ ಹಾಕಿ

ಮುದ್ದಂಡ ಕಪ್‌ನೊಂದಿಗೆ ಈ ಬಾರಿ ಕೊಡವ ಕುಟುಂಬದ ಮಹಿಳೆಯರಿಗೂ ಪ್ರತ್ಯೇಕವಾಗಿ ೫ಎ ಸೈಡ್ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಇದಕ್ಕೆ ೫೬ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿದ್ದು ತಾ. ೨೧ರಿಂದ ಈ ಪಂದ್ಯಾಟ ಆರಂಭವಾಗಲಿದೆ. ತಾ. ೨೧ರ ಬೆಳಿಗ್ಗೆ ೯ ಗಂಟೆಗೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಅಂತರರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಮಂಡೇಪAಡ ಪುಷ್ಪಾ ಕುಟ್ಟಣ್ಣ ಈ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಮಹಿಳಾ ಹಾಕಿ ವಿಜೇತರಿಗೆ ರೂ. ೨ ಲಕ್ಷ ನಗದು, ರನ್ನರ್ಸ್ಗೆ ರೂ. ೧ ಲಕ್ಷ ಹಾಗೂ ಟ್ರೋಫಿ ಬಹುಮಾನವಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡು ನಿರ್ಗಮಿಸುವ ಇತರ ಎಲ್ಲಾ ತಂಡಗಳಿಗೂ ತೂಕ್‌ಬೊಳ್‌ಚ ನೀಡಲಾಗುತ್ತದೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ. ತಾ. ೨೬ರಂದು ಇದರ ಫೈನಲ್ ಜರುಗಲಿದೆ. ಕೊಡಗಿನವರನ್ನು ಒಳಗೊಂಡಿರುವ ಬೆಂಗಳೂರಿನ ಲೇಕ್‌ಸೈಡ್ ಹಾಕಿ ಕ್ಲಬ್ ಈ ಪಂದ್ಯಾವಳಿ ನಡೆಸಿಕೊಡಲಿದೆ.

ತಾ. ೨೪ರಂದು ರಸ್ತೆ ಸುರಕ್ಷತಾ ಓಟ

ತಾ. ೨೪ರಂದು ಮೈಂಡ್ ಮತ್ತು ಮ್ಯಾಟರ್ ಸಂಸ್ಥೆಯ ಸಹಯೋಗದಲ್ಲಿ ಮುದ್ದಂಡ ಹಾಕಿ ಉತ್ಸವ ಸಮಿತಿ ರಸ್ತೆ ಸುರಕ್ಷತಾ ಜಾಗೃತಿ ಓಟವನ್ನು ಹಮ್ಮಿಕೊಂಡಿದೆ. ಕೊಡಗು ಜಿಲ್ಲಾಡಳಿತ, ಕೊಡಗು ಪೊಲೀಸ್, ಹೆದ್ದಾರಿ ಪ್ರಾಧಿಕಾರ ಸಹಕಾರ ನೀಡುತ್ತಿದ್ದು ರನ್‌ಫಾರ್ ಸೇಷ್ಟಿ ಹೆಸರಿನಲ್ಲಿ ಈ ಜಾಗೃತಿ ಅಭಿಯಾನ ನಡೆಯಲಿದೆ. ತಾ. ೨೪ರ ಬೆಳಿಗ್ಗೆ

೭ ಗಂಟೆಗೆ (ಮೊದಲ ಪುಟದಿಂದ) ಫೀ.ಮಾ. ಕಾರ್ಯಪ್ಪ ವೃತ್ತದಿಂದ ಓಟ ಆರಂಭಗೊಳ್ಳಲಿದ್ದು ಫೀ.ಮಾ. ಕಾರ್ಯಪ್ಪ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಅಲ್ಲಿ ಸಭಾ ಕಾರ್ಯಕ್ರಮವೂ ಜರುಗಲಿದೆ. ರಸ್ತೆ ಸುರಕ್ಷತಾ ಓಟವನ್ನು ಇನ್‌ವೆಟ್ರೋರೀಸರ್ಚ್ ಸಲ್ಯೂಷನ್ (IಗಿಖS) ಇಸುಜು಼ ಕಂಪೆನಿ ಪ್ರಾಯೋಜಿಸುತ್ತಿದೆ. ವಿವಿಧ ಸಂಘ ಸಂಸ್ಥೆಗಳವರೂ ಪಾಲ್ಗೊಳ್ಳುತ್ತಿದ್ದಾರೆ.

ತಾ. ೨೬ರಂದು ಸೈಕ್ಲೋಥಾನ್

ತಾ. ೨೬ರಂದು ಮುದ್ದಂಡ ಕುಟುಂಬದೊAದಿಗೆ ಟೂರ್ ಆಫ್ ನೀಲ್‌ಗಿರೀಸ್‌ನ ಸಹಭಾಗಿತ್ವದಲ್ಲಿ ಖ್ಯಾತ ಸೈಕಲ್‌ಪಟುಗಳನ್ನು ಒಳಗೊಂಡAತೆ ಸೈಕ್ಲೋಥಾನ್ ಏರ್ಪಡಿಸಲಾಗಿದೆ. ಮಡಿಕೇರಿ, ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಪಾಲಿಬೆಟ್ಟ, ಮಡಿಕೇರಿ ಮಾರ್ಗವಾಗಿ ಈ ಜಾಥಾ ನಡೆಯಲಿದೆ.

ಬೆಂಗಳೂರು ಉತ್ತರದ ಸಂಸದ ಹಾಗೂ ಸ್ವತಃ ಕ್ರೀಡಾ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ (ಐರನ್‌ಮ್ಯಾನ್) ತೇಜಸ್ವಿ ಸೂರ್ಯ ಅವರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.