ಪೆರಾಜೆ, ಏ. ೧೬: ಪೆರಾಜೆಯ ಮಜಿಕೋಡಿ ಎಂಬಲ್ಲಿ ಮರಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿತ್ತು.

ಮರದಲ್ಲಿ ಬೆಂಕಿ ಕಂಡ ಸ್ಥಳೀಯರು ಸುಳ್ಯ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಿದ ಮೇರೆಗೆ ಅಗ್ನಿ ಶಾಮಕ ದಳದ ವಾಹನ ಆಗಮಿಸಿದ್ದು, ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನ ಹೋಗಲು ಸಾಧ್ಯವಾಗದ ಹಿನ್ನೆಲೆ ಹಿಂತಿರುಗಬೇಕಾಯಿತು. ನಂತರ ಊರಿನ ಯುವಕರು ಸತತ ಕಾರ್ಯಾಚರಣೆಯ ಮೂಲಕ ಬೆಂಕಿಯನ್ನು ನಂದಿಸಿದರು.

ಕಾರ್ಯಾಚರಣೆಯಲ್ಲಿ ಮನು ಪೆರುಮುಂಡ, ಕಿರಣ್ ಕುಂಬಳಚೇರಿ, ಪ್ರಸಾದ್ ಪಾಣತ್ತಿಲ, ಯತಿಶ್ಯಾಂ ಕುಂಬಳಚೇರಿ, ಹೇಮಕುಮಾರ್ ಕುಂಬಳಚೇರಿ ಶರತ್ ಬೊಳುಂಜ, ನಕುಲ ಕೊಳಂಗಾಯ, ದರಣೀಶ್ ಏಣಾವರ, ಧನುರಾಜ್ ನಿಡ್ಯಮಲೆ, ಮಿಥುನ ಮಜಿಕೋಡಿ, ಹರ್ಷಿತ್ ಮಜಿಕೋಡಿ, ಗಂಗಾಧರ ನೆಕ್ಕಿಲ ಪುನೀತ್ ನೆಕ್ಕಿಲ ಭಾಗವಹಿಸಿದ್ದರು.