ಮಡಿಕೇರಿ, ಏ. ೧೬: ಪೋಷಣ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಚಟುವಟಿಕೆಯಾದ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮವು ಚರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ನೆರವೇರಿತು. ಪುಷ್ಪವೇಣಿ ಶಾಲಾ ಶಿಕ್ಷಕರು ಸ್ವಚ್ಛತೆ ಮತ್ತು ಆಹಾರದ ಮಹತ್ವದ ಬಗ್ಗೆ ತಿಳಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಗರ್ಭಿಣಿ - ಬಾಣಂತಿಯರ ಆರೈಕೆ, ಸಾವಿರ ದಿನಗಳ ಮಹತ್ವ, ಸ್ತನ್ಯಪಾನ, ಪೂರಕ ಆಹಾರ ಪೌಷ್ಟಿಕ ಆಹಾರಗಳ ಮಹತ್ವಗಳ ಬಗ್ಗೆ ತಿಳಿಸಿದರು.

ಆಶಾ ಕಾರ್ಯಕರ್ತೆ ಚಂದ್ರಾವತಿಯವರು ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಉಮಾಶ್ರೀ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು. ಜಾನವಿ, ಆಶಾ ಅವರಿಗೆ ಸೀಮಂತ ಮಾಡಲಾಯಿತು. ವಿಹಾದ್ಯಾ, ಶಿವಾರ್ಥ್ ಸೋಮಯ್ಯ, ಹರ್ಲಿನ್ ಬೆಳ್ಳಿಯಪ್ಪ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳ ದಾನಿಗಳಾದ ಪಾರ್ವತಿಯವರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಕೃಷ್ಣವೇಣಿ, ಅಂಗನವಾಡಿ ಕಾರ್ಯಕರ್ತೆಯರಾದ ಸುಶೀ, ಯೋಗಿತಾ ಹಾಜರಿದ್ದರು.