ಐಗೂರು, ಏ. ೧೬: ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯಮಟ್ಟ, ರಾಷ್ಟçಮಟ್ಟ ಮತ್ತು ಅಂತರರಾಷ್ಟಿçÃಯ ಕ್ರೀಡಾಕೂಟದವರೆಗೆ ಭಾಗವಹಿಸಬೇಕಾದರೆ ಗ್ರಾಮಗಳಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳ ಅವಶ್ಯಕತೆ ಇದೆ.
ಇತ್ತೀಚೆಗೆ ಸೋಮವಾರಪೇಟೆ ತಾಲೂಕಿಗೆ ಎಂ.ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ ತಾಲೂಕಿಗೆ ಒಟ್ಟು ಸಂಖ್ಯೆಯ ೧೧ ಸಿಂಥೆಟಿಕ್ ಆಕ್ರಿಯಾಲಿಕ್ ಟರ್ಫ್ನ ವಾಲಿಬಾಲ್ ಅಂಕಣಗಳ ಅನುದಾನ ಲಭಿಸಿದೆ. ಇವುಗಳಲ್ಲಿ ಹರದೂರು ಗ್ರಾಮ ಪಂಚಾಯಿತಿಯ ಸದಸ್ಯರು ಸಿಂಥೆಟಿಕ್‌ನ ಎರಡು ವಾಲಿಬಾಲ್ ಆಟದ ಅಂಕಣಗಳ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಲಾ ರೂ. ೫ ಲಕ್ಷದ ಹತ್ತು ಸಾವಿರ ವೆಚ್ಚದ ಒಟ್ಟು ರೂ. ೧೦ ಲಕ್ಷದ ಇಪ್ಪತ್ತು ಸಾವಿರ ವೆಚ್ಚದ ಎರಡು ಸಿಂಥೆಟಿಕ್ ಅಂಕಣಗಳ ಕೆಲಸ ಮುಗಿದಿದ್ದು, ಒಂದು ಅಂಕಣವು ಹೊಸತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣಗೊಂಡು ಪಂದ್ಯಾವಳಿ ವೀಕ್ಷಿಸಲು ಸಿಮೆಂಟಿನ ಗ್ಯಾಲರಿ ನಿರ್ಮಿಸಲಾಗಿದೆ.ಇನ್ನೊಂದು ಅಂಕಣವು ಹೊಸತೋಟದ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ನಿರ್ಮಾಣಗೊಂಡಿದ್ದು, ಹಲವಾರು ಗ್ರಾಮೀಣ ಪ್ರತಿಭೆಗಳು ರಾಜ್ಯಮಟ್ಟ ಮತ್ತು ರಾಷ್ಟçಮಟ್ಟದ ಪಂದ್ಯಾವಳಿಯ ಕದತಟ್ಟುವ ಭಾಗ್ಯ ಲಭಿಸಿದೆ. ವಾಲಿಬಾಲ್ ಅಂಕಣಗಳ ಬಗ್ಗೆ ತಾಲೂಕು ತಾಂತ್ರಿಕ ಸಂಯೋಜಕ ರಂಜಿತ್ ಅವರಲ್ಲಿ ಮಾಹಿತಿ ಬಯಸಿದಾಗ, ಕಾಂಕ್ರೀಟ್ ಜೆಲ್ಲಿಯೊಂದಿಗೆ ಸಜ್ಜಾದ ಅಂಕಣದ ಮೇಲ್ಭಾಗದಲ್ಲಿ ೨೪ ಮೀಟರ್ ಉದ್ದ ೧೩ ಮೀಟರ್ ಅಗಲದ ಸಿಂಥೆಟಿಕ್ ಆಕ್ರಿಯಾಯಲಿಕ್ ಟರ್ಫಿಂಗ್ ಮ್ಯಾಟನ್ನು ಹಾಸಲಾಗಿದೆ, ಟರ್ಫಿಂಗ್‌ನ ಮೇಲ್ಭಾಗದಲ್ಲಿ ನೀರು ನಿಲ್ಲದೆ ನೀರು ಹರಿಯುವಂತೆ ನಿರ್ವಹಣೆ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕ್ರೀಡಾಂಗಣ ನಿರ್ಮಿಸುವಲ್ಲಿ ಶಾಸಕ ಡಾ. ಮಂತರ್ ಗೌಡ, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಎಂ.ಎನ್.ಆರ್.ಇ.ಜಿ.ಎ. ಸಹಾಯಕ ನಿರ್ದೇಶಕ ರಾಕೇಶ್ ಮತ್ತು ಅಭಿಯಂತರ ರಾಜೇಶ್ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಗ್ರಾಮಸ್ಥರು ಹೊನಲು ಬೆಳಕಿನ ಪಂದ್ಯಾವಳಿಯ ನಿರೀಕ್ಷೆಯಲ್ಲಿದ್ದು, ಅಂಕಣದ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಹೊಸತೋಟ ತಿಳಿಸಿದ್ದಾರೆ.