ಅನಿಲ್ ಎಚ್.ಟಿ.

ಮಡಿಕೇರಿ, ಏ. ೧೬: ಖ್ಯಾತ ಬ್ಯಾಡ್ಮಿಂಟರ್ ತಾರೆ ಪಿ.ವಿ. ಸಿಂಧು ಅವರಿಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಆಸೆ ಇದೆಯಂತೆ!

ಇAಥ ಆಸೆಗೆ ಕಾರಣವಾದದ್ದು ಇತ್ತೀಚಿಗೆ ಕೊಡಗಿಗೆ ಭೇಟಿ ನೀಡಿ ಇಲ್ಲಿನ ಕಾಫಿ ತೋಟದ ನಡುವೆ ಕೆಲವು ದಿನಗಳು ಕಾಲಕಳೆದ ನಂತರವAತೆ..

ಹೌದು, ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿAದ ಕೊಡಗಿಗೆ ಪತಿ ಜೊತೆಬಂದಿದ್ದು, ಇಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದಾರೆ.

ಈ ಬಗ್ಗೆ ‘ಎಕ್ಸ್’ ನಲ್ಲಿ ಸಂತೋಷ ಹಂಚಿಕೊAಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ‘ಕಾಫಿ ಸಿಪ್’ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. ೧೪ ವನ್ಯಜೀವಿಗಳು, ೮೦೦ ತಳಿಯ ಪಕ್ಷಿಗಳನ್ನೂ, ವಿವಿಧ ಜಾತಿಯ ಪುಪ್ಪ, ಸಸ್ಯಗಳು ಈ ತೋಟದಲ್ಲಿದೆ.

ನನ್ನ ಪತಿ ದತ್ತ ಕೂಡ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಸಿಂಧು ಬಹಿರಂಗಪಡಿಸಿಲ್ಲ. ವಿಶ್ವಚಾಂಪಿಯನ್ ಶಿಪ್, ಒಲಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಧು, ಬ್ಯಾಡ್ಮಿಂಟನ್‌ನಲ್ಲಿ ವರ್ಲ್ಡ್ ರ‍್ಯಾಂಕಿAಗ್ ೨ ಸ್ಥಾನದಲ್ಲಿದ್ದಾರೆ. ಹೆಸರಾಂತ ಉದ್ಯಮಿ ವೆಂಕಟದತ್ತ ಸಾಯಿ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿರುವ ಸಿಂಧು ವಿಶ್ರಾಂತಿ ಬಯಸಿ ಪತಿಯೊಂದಿಗೆ ಕೊಡಗಿಗೆ ಬಂದಿದ್ದರು.