ಮಡಿಕೇರಿ, ಏ. ೧೬: ಕೇಂದ್ರ ಸರಕಾರ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆಗೊಂಡಿರುವ ವಕ್ಫ್ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಮುಸ್ಲಿಂ ಸಮುದಾಯದವರು ಶಾಂತಿಯುತ ಪ್ರತಿಭಟನೆ ಮಾಡಿದರು.
ಸುನ್ನಿ ಸಮನ್ವಯ ಸಮಿತಿ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮಗೊಂಡ ಮುಸ್ಲಿಂ ಸಮುದಾಯದ ಪುರುಷರು ರಾಜ್ಯಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ತಿದ್ದುಪಡಿ ಗೊಂಡ ವಕ್ಫ್ ಕಾಯ್ದೆ ಜಾರಿಗೊಳಿಸ ಬಾರದೆಂದು ಆಗ್ರಹಿಸುವುದರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬೃಹತ್ ಮೆರವಣಿಗೆ
ಬೆಳಿಗ್ಗೆ ನಗರದ ಪ್ರವೇಶ ದ್ವಾರ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿದರು. ವಕ್ಫ್ ಮಸೂದೆ ತಿದ್ದುಪಡಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜ. ತಿಮ್ಮಯ್ಯ ವೃತ್ತವನ್ನು ಹಾದು ಮಂಗೇರಿರ ಮುತ್ತಣ್ಣ ರುತ್ತವನ್ನು ಕ್ರಮಿಸಿ ಜಿಲ್ಲಾಧಿಕಾರಿಗಳ ಕಚೇರಿಯತ್ತ ತೆರಳಿದರು. ಪ್ರತಿಭಟನೆಯಲ್ಲಿ ಅಂದಾಜು ನಾಲ್ಕು ಸಾವಿರದಷ್ಟು ಮಂದಿ ಪಾಲ್ಗೊಂಡಿದ್ದರಿAದ ಬಂದೋಬಸ್ತ್ನಲ್ಲಿದ್ದ ಪೊಲೀಸರು ಪ್ರತಿಭಟನಾಕಾರರ ಪ್ರಮುಖರ ಮನವೊಲಿಸಿ ಜಿಲ್ಲಾಧಿಕಾರಿಗಳ ಕಚೇರಿ ಬದಲಿಗೆ ಗಾಂಧಿ ಮೈದಾನದಲ್ಲಿ ಸಮಾವೇಶಗೊಳ್ಳುವಂತೆ ಮಾಡಿದ ಮನವಿ ಮೇರೆಗೆ ಪ್ರತಿಭಟನಾಕಾರರು ಗಾಂಧಿ ಮೈದಾನದಲ್ಲಿ ಒಟ್ಟು ಸೇರಿದರು.
ಹಿಂಪಡೆಯಲು ಆಗ್ರಹ
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಬದಲಿಗೆ ಗಾಂಧಿ ಮೈದಾನದಲ್ಲಿ ಸಮಾವೇಶಗೊಳ್ಳುವಂತೆ ಮಾಡಿದ ಮನವಿ ಮೇರೆಗೆ ಪ್ರತಿಭಟನಾಕಾರರು ಗಾಂಧಿ ಮೈದಾನದಲ್ಲಿ ಒಟ್ಟು ಸೇರಿದರು.
ಹಿಂಪಡೆಯಲು ಆಗ್ರಹ
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ಅಧ್ಯಕ್ಷ ಅಬ್ದುಲ್ಲ ಫೈಝಿ ಹಾಗೂ ಸಯ್ಯದ್ ಶಿಯಾಬುದ್ದಿನ್ ಅಲ್ ಹೈದ್ರೋಸಿ ಅವರುಗಳು ಮಾತನಾಡಿ; ಸಾವಿರಾರು ವರ್ಷಗಳ ಹಿಂದೆ ರಾಜರು, ದಾನಿಗಳು ನೀಡಿರುವ ವಕ್ಫ್ ಆಸ್ತಿಯಲ್ಲಿ ಮದರಸಗಳು, ಈದ್ಗಾ ಮಸೀದಿಗಳನ್ನು ನಿರ್ಮಿಸಿ ಮುಸ್ಲಿಂ ಸಮುದಾಯದ ಏಳಿಗೆಗಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಆಸ್ತಿಗಳನ್ನು ಒಳಗೊಂಡಿರುವ ಮಸೂದೆಯನ್ನು ರದ್ದು ಮಾಡಿರುವುದು ಮುಸಲ್ಮಾನರಿಗೆ ಮಾಡಿರುವ ಅನ್ಯಾಯವಾಗಿದೆ. ನಮಗೆ ಯಾರ ಮೇಲೆಯೂ ದ್ವೇಷವಿಲ್ಲ. ವಕ್ಫ್ ಆಸ್ತಿ ಮುಸಲ್ಮಾನ ಮರಣ ಹೊಂದು ವವರೆಗೂ ಅವಶ್ಯವಾಗಿರುತ್ತದೆ.
ಈ ಸಂಬAಧಿತ ಮಸೂದೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು. ಕೇಂದ್ರ ಸರಕಾರ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು. ಮುಸ್ಲಿಂ ಸಮುದಾಯ ಸಂಘಟನಾತ್ಮಕ ವಾಗಿ ಒಟ್ಟಾಗಿ ಸೇರಿರುವುದು ಶ್ಲಾಘನೀಯ. ಒಗ್ಗಟ್ಟು ಹೀಗೆ ಇರಬೇಕು. ಯಾವುದೇ ಕಾರಣಕ್ಕೂ ಮಸೂದೆ ರದ್ದು ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮಸೀದಿ ಹೊಡೆದು ದೇವಾಲಯ
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಾಜ್ಯ ಕಾಂಗ್ರೆಸ್ ವಕ್ತಾರ ಎಂ. ಲಕ್ಷö್ಮಣ್ ಮಾತನಾಡಿ, ತಾನು ಕಾಂಗ್ರೆಸ್ ವಕ್ತಾರನಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮವರಲ್ಲಿ ಓರ್ವನಾಗಿ ಬಂದಿದ್ದೇನೆ. ಇಂತಹ ಸಂದರ್ಭಗಳಲ್ಲಿ ಹಿಂದೂಗಳು ಕೂಡ ಮುಸ್ಲಿಮರಿಗೆ ಬೆಂಬಲವಾಗಿ ನಿಲ್ಲಬೇಕು. ಯಾವುದೇ ಕಾರಣಕ್ಕೂ ಈ ಮಸೂದೆ ಜಾರಿಯಾಗಲು ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಬಗ್ಗೆ ಸಂಪುಟ
(ಮೊದಲ ಪುಟದಿಂದ) ಸಭೆಯಲ್ಲಿ ಚರ್ಚಿಸಿ ಮಸೂದೆ ಜಾರಿ ಮಾಡದಿರಲು ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಚರ್ಚೆಗಳಾಗಿವೆ ಎಂದು ಹೇಳಿದರು.
ದೇಶದಲ್ಲಿ ಅತಿ ಕಡುಬಡವ ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯವಾಗಿದೆ. ಮಸೀದಿಗಳ ಎಚ್ಚರವಿರಬೇಕು; ಇಲ್ಲವಾದಲ್ಲಿ ಪೂರ್ವಜರ ಕಾಲದಲ್ಲಿ ಇಲ್ಲಿ ದೇವಾಲಯವಿತ್ತು ಎಂದು ಹೇಳಿ ಮಸೀದಿಗಳನ್ನು ಕೆಡವಿ ದೇವಾಲಯ ಕಟ್ಟುತ್ತಾರೆ. ಈ ನಿಟ್ಟಿನಲ್ಲಿ ಮಸೂದೆಯನ್ನು ವಿರೋಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಡೆಯನ್ನು ಶ್ಲಾಘಿಸುವುದಾಗಿ ಹೇಳಿದರು. ಹಿಂದೂಗಳು ಮುಸಲ್ಮಾನರಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಕಾಯ್ದೆಯಲ್ಲಿ ಅಪಾಯ
ಎಸ್.ಡಿ.ಪಿ.ಐ. ಅಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ; ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹತಾಶರಾಗಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡದೆ ಹೋರಾಟ ಮಾಡಬೇಕು. ಇಂದು ಇಲ್ಲಿ ಕೇಳಿ ಬಂದ ಧ್ವನಿ ಮಾರ್ಧನಿಸಿದರೆ ಸಮುದ್ರದ ಅಲೆಗಳು ಕೂಡ ಅಲ್ಲಾಡುತ್ತದೆ. ಈ ಒಂದು ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಉಲಾಮಗಳು ಕೈಜೋಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ಉಲಾಮಗಳು ಹೋರಾಡಿ ಹುತಾತ್ಮರಾಗಿದ್ದಾರೆ ಕಾನೂನಿನ ರಕ್ಷಣೆ ಮಾಡುವ ಕೈಗಳು ಇಲ್ಲಿವೆ ಎಂದು ಹೇಳಿದರು. ಕೇಂದ್ರ ಸರಕಾರ ಈ ಕಾಯ್ದೆ ಜಾರಿ ಮಾಡಿ ಗೆದ್ದಿದೆ ಎಂದು ತಿಳಿದರೆ ಅದು ಕನಸಿನ ಮಾತು ಈ ಕಾಯ್ದೆಯಲ್ಲಿ ಇರುವ ಅಪಾಯವನ್ನು ಮುಸ್ಲಿಂ ಸಮುದಾಯ ಅರಿತುಕೊಳ್ಳಬೇಕಿದೆ. ಮುಂದೊAದು ದಿನ ಯಾರೇ ಆಗಲಿ ವಕ್ಫ್ ಆಸ್ತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ ಜಿಲ್ಲಾಡಳಿತ ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಮಸೀದಿ ದರ್ಗಾಗಳಿಂದ ನಮ್ಮನ್ನು ಹೊರಹಾಕುವ ಪರಿಸ್ಥಿತಿ ಉಂಟಾಗುತ್ತದೆ ಆದರೂ ನಮ್ಮವರು ಇನ್ನೂ ಜಾಗೃತವಾಗಿಲ್ಲ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುನ್ನಿ ಸಮನ್ವಯ ಸಮಿತಿ ಉಪಾಧ್ಯಕ್ಷ ಕೆ.ಎ. ಯಾಕೂಬ್, ಪಿ.ಎಂ. ಅಬ್ದುಲ್ ಲತೀಫ್ ಸೇರಿದಂತೆ ಉಲಾಮಗಳು, ಪ್ರಮುಖರು ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿಯನ್ನು ರಾಷ್ಟçಪತಿಗಳಿಗೆ ಕಳುಹಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಪೊಲೀಸ್ ಬಂದೋಬಸ್ತ್
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ಪಿ.ಕೆ. ರಾಜು, ನಗರ ಠಾಣಾಧಿಕಾರಿ ಅನ್ನಪೂರ್ಣ ಅವರುಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ ಕಲ್ಪಿಸಲಾಗಿತ್ತು.