ಶ್ರೀ ಮಹಾಂತ ಸ್ವಾಮೀಜಿ ಪೀಠಾರೋಹಣ ಸುವರ್ಣ ಮಹೋತ್ಸವ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಶ್ರೀ ಕ್ಷೇತ್ರ ಕಲ್ಲುಮಠದಲ್ಲಿ ಮೇ ೫ ರಂದು ಮಠಾಧೀಶ ಶ್ರೀ ಮಹಾಂತ ಸ್ವಾಮೀಜಿಯವರ ಪೀಠಾ ರೋಹಣ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.

ಕೊಡಗು ಜಿಲ್ಲೆಯ ರಾಜಾಳ್ವಿಕೆ ಯಲ್ಲಿ ಸಾಗಿಬಂದ ನೂರಾರು ಮಠಗಳಲ್ಲಿ ಕೊಡ್ಲಿಪೇಟೆಯ ಶ್ರೀಕ್ಷೇತ್ರ ಕಲ್ಲುಮಠವೂ ಒಂದಾಗಿದ್ದು; ಶ್ರೀ ಮಹಾಂತ ಸ್ವಾಮೀಜಿಯವರ ಪೀಠಾ ರೋಹಣ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮಠದ ಆಡಳಿತ ಸಮಿತಿ ಹಾಗೂ ಭಕ್ತಾದಿಗಳು ಮಠದ ಆವರಣದಲ್ಲಿ ನಡೆಸಲು ನಿಶ್ಚಯಿಸಿದ್ದಾರೆ.

ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ವಿದ್ಯಾಶಂಕರ್ ಮಾತನಾಡಿ, ಶ್ರೀ ಮಠದ ಮಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಪಟ್ಟಾಭಿಷೇಕ ಸ್ವೀಕರಿಸಿ ೫೦ ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.

ಇವರು ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಗುರುತಿಸಿ ನಾಡಿನ ಹರಗುರು ಚರಮೂರ್ತಿ ಗಳಿಂದ ಆಶೀರ್ವಚನ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಭಕ್ತಾದಿಗಳು ಪಾಲ್ಗೊ ಳ್ಳಲಿದ್ದಾರೆ ಎಂದು ತಿಳಿಸಿದರು.

ಲಿಂಗಾಯತ ಸಂಘಟನಾ ವೇದಿಕೆ ರಾಷ್ಟಿçÃಯ ಸಂಚಾಲಕ ಎಸ್. ಮಹೇಶ್, ನಂಜುAಡೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೆಚ್.ಎಂ. ದಿವಾಕರ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.ಗೋಣಿಕೊಪ್ಪಲು: ಹಾತೂರು ಸಮೀಪದ ಕುಂದ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಚಾಮುಂಡಿ ಸಾರ್ಥಾವು ವಿಷ್ಣುಮೂರ್ತಿ ದೇವಾಲಯ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

೩ ವರ್ಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಕೊಡಂದೆರ, ಕಡೇಮಾಡ, ನಾಮೇರ ಕುಟುಂಬಸ್ಥರು ಭಾಗವಹಿಸಿ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸುತ್ತ ಬಂದಿದ್ದಾರೆ. ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ೨ ದಿನದ ದೇವರ ಉತ್ಸವವು ಯಶಸ್ವಿಯಾಗಿ ಜರುಗಿತು.

ಶಾಸಕ ಎ.ಎಸ್. ಪೊನ್ನಣ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡು ದೇವಾಲಯದ ಅಭಿವೃದ್ಧಿಗಾಗಿ ಸಹಕಾರವನ್ನು ನೀಡಿರುವುದಾಗಿ ತಿಳಿಸಿದರು.

ದೇವಾಲಯ ಸಮಿತಿಯ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ ಮಾತನಾಡಿ, ದೇವಾಲಯವು ಉತ್ತಮವಾದ ಪ್ರದೇಶದಲ್ಲಿ ನೆಲೆ ನಿಂತಿದ್ದು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇತ್ತೀಚೆಗೆ ಗ್ರಾಮಸ್ಥರ ಸಹಕಾರದಿಂದ ದೇವಾಲಯವನ್ನು ಅಭಿವೃದ್ದಿ ಪಡಿಸಲಾಗಿದೆ. ೩ ವಷÀðಕ್ಕೊಮ್ಮೆ ದೇವರ ಉತ್ಸವವನ್ನು ಯಶಸ್ವಿಯಾಗಿ ಊರಿನವರ ಸಮ್ಮುಖ ಹಾಗೂ ಕುಟುಂಬಸ್ಥರ ಮುಂದಾಳತ್ವದಲ್ಲಿ ನಡೆಸುತ್ತ ಬರುತ್ತಿದ್ದೇವೆ ಎಂದರು.

ಪೂಜಾ ಕಾರ್ಯದಲ್ಲಿ ದೇವಾಲಯ ಸಮಿತಿಯ ಕಾರ್ಯದರ್ಶಿಗಳಾದ ಕೊಡಂದೆರ ಸುಬ್ಬಯ್ಯ ನಾಮೆರ ಕುಟುಂಬದ ಪ್ರಮುಖರಾದ ನಾಮೆರ ದೇವಯ್ಯ, ಕೊಕ್ಕಂಡ ರೋಷನ್, ಹಾತೂರು ಗ್ರಾ.ಪಂ. ಸದಸ್ಯರಾದ ಕೊಕ್ಕಂಡ ಗಿಣಿ ಗಣಪತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ನಾಪೋಕ್ಲು: ಉರೂಸ್ ಸಮಾರಂಭವು ಧಾರ್ಮಿಕ ಹಾಗೂ ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಆಚರಣೆಯಾಗಿದ್ದು, ಈ ಭಾಗದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತಾ ಬಂದಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ನಾಪೋಕ್ಲು ಹೋಬಳಿಯ ಕಕ್ಕಬೆ ಗ್ರಾಮದಲ್ಲಿ ನಡೆದ ವೈಕೋಲ್ ಪುಳಿಜೋಂ ಉರೂಸ್ ಸಮಾರಂಭದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಉರೂಸ್ ಆಚರಣೆಯ ಸದುದ್ದೇಶದ - ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ ಎಂದು ಇದೇ ಸಂದರ್ಭ ಶಾಸಕರು ಶುಭ ಹಾರೈಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಮೊಯಿದು, ಸಂಪನ್ ಅಯ್ಯಪ್ಪ ಹಾಗೂ ಪ್ರಮುಖರಾದ ಸೌಕತ್ ಅಲಿ, ವಿ.ಎಂ. ಉಸ್ಮಾನ್ ಹಾಜಿ, ಬಾಚಮಂಡ ಲವ ಚಿಣ್ಣಪ್ಪ, ಅಹಮದ್ ಹಾಜಿ, ಉದಿಯಂಡ ಸುಭಾಷ್, ಮೋಹನ್, ಹುಸೇನ್, ಅಬ್ಬು, ಉದಿಯಂಡ ಮೋಹನ್, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಶನಿವಾರಸಂತೆ: ಪವಿತ್ರ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ರಥೋತ್ಸವ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ಬೇಡಿಕೆ ಈಡೇರಿಸಿಕೊಳ್ಳುವ ರಥೋತ್ಸವದ ಜತೆ ನಿಷ್ಠೆ ಮತ್ತು ಶ್ರದ್ಧೆ ಇರುವಂತದ್ದೇ ಪವಿತ್ರ ಕ್ಷೇತ್ರ ಎಂದು ತುಮಕೂರು ಸಿದ್ಧಗಂಗಾ ಮಠಾಧೀಶ ಶ್ರೀಸಿದ್ಧಲಿಂಗ ಮಹಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಅಂಕನಹಳ್ಳಿ ತಪೋವನ ಕ್ಷೇತ್ರದ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಹಾಗೂ ಗುರುವಂದನಾ ಸಮಾರಂಭದ ಸಾನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿ ಅಧ್ಯಾತ್ಮ ಮತ್ತು ಸಾತ್ವಿಕತೆಯ ತಳಹದಿಯ ಮೇಲೆ ರೂಪಿತವಾಗಿದ್ದು, ಸಂಸ್ಕೃತಿಯಲ್ಲಿ ಋಷಿಮುನಿಗಳ ಪಾತ್ರ ಮುಖ್ಯವಾಗಿದೆ. ಕರ್ನಾಟಕದ ಪ್ರಗತಿಗೆ ಮೈಸೂರು ರಾಜರು ಕೊಟ್ಟ ಕೊಡುಗೆ ಅನನ್ಯ. ಕೊಡಗಿನ ಪಾವಿತ್ರತೆ ಉಳಿಸುವ ಜವಾಬ್ದಾರಿ ಜನರಲ್ಲಿದೆ ಎಂದರು. ಸಮ್ಮುಖದಲ್ಲಿದ್ದ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶಯ ನುಡಿಗಳನ್ನಾಡಿ, ಇತಿಹಾಸವನ್ನು ಹುಟ್ಟುಹಾಕಿ ಮತ್ತೆ ಜೀವಂತಿಕೆ ಕೊಟ್ಟು ೨೫ ವರ್ಷಗಳಲ್ಲಿ ಶ್ರದ್ಧಾ ಕೇಂದ್ರವಾಗಿ ಪರಿವರ್ತನೆ ಹೊಂದಿದ ಮನೆಹಳ್ಳಿಮಠದಲ್ಲಿ ಯಂತ್ರ-ತAತ್ರ, ವಿಜ್ಞಾನ ಯುಗದಲ್ಲೂ ಅಧ್ಯಾತ್ಮಿಕತೆಯ ಅವಶ್ಯಕತೆ ಮನಗಂಡ ಮಹಾಂತ ಶಿವಲಿಂಗ ಸ್ವಾಮೀಜಿ ಭಕ್ತರ ಸಹಕಾರದಿಂದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಸಮಾರಂಭ ಉದ್ಘಾಟಿಸಿದ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೊಡಗು-ಮೈಸೂರು ಜಿಲ್ಲೆಗಳೆರಡು ಪವಿತ್ರ ಕ್ಷೇತ್ರವಾಗಿದ್ದು, ಕೊಡಗಿನ ಪರಂಪರೆ ಅನನ್ಯವಾಗಿದೆ. ಸಮಾಜದಲ್ಲಿ ಧರ್ಮ-ಸಂಸ್ಕೃತಿ ಉಳಿಸುವಲ್ಲಿ ಮಠಗಳು ಉತ್ತಮ ಪಾತ್ರ ವಹಿಸುತ್ತವೆ. ಪುಣ್ಯಭೂಮಿ ಭಾರತದಲ್ಲಿ ಯತಿಮುನಿಗಳಿಂದ, ಪೂರ್ವಜರಿಂದ ಧರ್ಮ ಉಳಿದಿದೆ. ವಿಶ್ವ ಸಮುದಾಯ ದಲ್ಲಿ ಹಿಂದೂ ಧರ್ಮವನ್ನು ಕಾಪಾಡಿ, ಉಳಿಸಬೇಕು. ತಪೋವನ ಕ್ಷೇತ್ರದಲ್ಲಿ ಚಟುವಟಿಕೆಗಳು ಕ್ರಿಯಾಶೀಲವಾಗಿವೆ. ಪರಂಪರೆ, ಧರ್ಮ, ಸಂಸ್ಕೃತಿಯೊAದಿಗೆ ದೇವಸ್ಥಾನ ಹಾಗೂ ಮಠ-ಮಾನ್ಯಗಳ ಅಭಿವೃದ್ಧಿಯು ಯೋಜನೆಗಳ ಮೂಲಕ ಆಗಬೇಕು ಎಂದರು.

ಬಸವೇಶ್ವರ ಹಾಗೂ ಶ್ರೀ ಶಿವಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮನೆಹಳ್ಳಿಮಠ ಪವಿತ್ರ ಜಾಗವಾಗಿದ್ದು ತಪೋವನ ಕ್ಷೇತ್ರ ಜಿಲ್ಲೆಯ ಗಡಿಭಾಗದ ಭಕ್ತರಿಗೆ, ಜನರಿಗೆ ಆಶೀರ್ವಾದ ನೀಡಿದೆ. ಮನೆಹಳ್ಳಿ ಮಠದ ಜತೆ ಇತರ ೧೩ ಮಠಗಳ ಅಭಿವೃದ್ಧಿಗಾಗಿ ರೂ. ೫೦ ಲಕ್ಷ ಅನುದಾನ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಆಶಯ ನುಡಿಗಳನ್ನಾಡಿದ ವಿಶ್ವಕಪ್ ವಿಜೇತ ಭಾರತ ಖೋ-ಖೋ ತಂಡದ ಆಟಗಾರ್ತಿ ಕೊಡಗಿನ ಚೈತ್ರಾ ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಕಾರ್ಯಕ್ರಮ ಆಯೋಜಕ ಎಸ್. ಮಹೇಶ್ ಮಾಡಿದ ಮನವಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಡಾ. ಮಂತರ್ ಗೌಡ ಸ್ಪಂದಿಸಿ, ರಾಜ್ಯ-ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಸಹಾಯ, ಸಹಕಾರದ ಜತೆ ವೈಯಕ್ತಿಕ ಸಹಕಾರ ನೀಡುವ ಭರವಸೆ ನೀಡಿದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಶಾಸಕ ಸಿಮೆಂಟ್ ಮಂಜು ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಮಾತನಾಡಿದರು.

ಸಾಧಕರಾದ ನಿವೃತ್ತ ನ್ಯಾಯಾಧೀಶ ಎಂ.ಆರ್. ದೇವಪ್ಪ, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರುಪಾಕ್ಷಯ್ಯ, ವಿಶ್ವಕಪ್ ವಿಜೇತ ಖೊ-ಖೊ ತಂಡದ ಆಟಗಾರ್ತಿ ಚೈತ್ರಾ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ವಿಕ್ರಾಂತ್, ಏಷಿಯ ಕಪ್ ವಿಜೇತ ಹಾಕಿ ತಂಡದ ತರಬೇತುದಾರ ಸಿ.ಬಿ. ಜನಾರ್ಧನ್, ಭರತನಾಟ್ಯ ಕಲಾವಿದೆ ಮಿಲನಾ, ಪ್ರಗತಿಪರ ಕೃಷಿಕ ಡಿ.ಬಿ. ಧರ್ಮಪ್ಪ, ಸಾಹಿತಿ ಉಳುವಂಗಡ ಕಾವೇರಿ ಉದಯ್, ಜಿ.ಪಂ. ಮಾಜಿ ಅಧ್ಯಕ್ಷೆ ಜಯಮ್ಮ ಮತ್ತಿತರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ನ್ಯಾಯಾಧೀಶ ಎಂ.ಆರ್. ದೇವಪ್ಪನವರು ಖೋ-ಖೋ ತಂಡದ ಆಟಗಾರ್ತಿ ಚೈತ್ರಾರಿಗೆ ವೇದಿಕೆಯಲ್ಲೇ ರೂ. ೫ ಸಾವಿರ ಕೊಡುಗೆ ನೀಡಿದರು.

ಶ್ರೀ ಕ್ಷೇತ್ರಾಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಮನೆಹಳ್ಳಿ ಮಠದ ಪರಿಚಯ ಮಾಡಿಕೊಟ್ಟು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಿರಿಕೊಡ್ಲಿಮಠದ ಸದಾಶಿವ¸ Á್ವಮೀಜಿ ನೇತೃತ್ವದಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಹಾಸನ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ, ಇತರ ಮಠಾಧೀಶರು, ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಬೇಲೂರು ಶಾಸಕ ಸುರೇಶ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶಿವಪ್ಪ, ತಹಶೀಲ್ದಾರ್ ಕೃಷ್ಣಮೂರ್ತಿ, ಪ್ರಮುಖರಾದ ಜಿ.ಎಂ. ಕಾಂತರಾಜ್, ಪ್ರದೀಪ್ ಕಂಕನಾಡಿ, ಹಾಲಪ್ಪ, ಶಾರದಮ್ಮ, ಜಯಶ್ರೀ, ದೇವರಾಜಮ್ಮ, ಪದ್ದಕ್ಕ, ಟ್ರಸ್ಟ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ. ಸುಜಲಾದೇವಿ ಹಾಗೂ ಕಾರ್ಯಕ್ರಮ ಆಯೋಜಕ ಎಸ್. ಮಹೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು. ವಿವಿಧ ಶಾಲಾ ವಿದ್ಯಾರ್ಥಿನಿಯರು ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.ನೇಮೋತ್ಸವ ಕಾರ್ಯಕ್ರಮ

ಸುಂಟಿಕೊಪ್ಪ: ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ೩೬ನೇ ವರ್ಷದ ಧರ್ಮ ದೈವದ ನೇಮೋತ್ಸವವು ತಾ. ೧೪ ಮತ್ತು ೧೫ ರಂದು ೨ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಧರ್ಮ ದೈವಗಳ ನೇಮೋತ್ಸವ ವಿಜೃಂಭಣೆಯಿAದ ಶ್ರದ್ಧಾಭಕ್ತಿಯಿಂದ ಸಂಪನ್ನ ಗೊಂಡಿತು. ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಾಗಳಿಂದ ಸಿಂಗಾರಿಸಲಾಗಿತು.

ತಾ. ೧೪ ರಂದು ರಾತ್ರಿ ೮ ಗಂಟೆಗೆ ಭಂಡಾರ ಮೆರವಣಿಗೆ, ೮.೩೦ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ರಾತ್ರಿ ೯ ಗಂಟೆಗೆ ಅನ್ನದಾನ ೧೦ ಗಂಟೆಗೆ ಆಧಿದೇವತೆ ಕಲ್ಲುರ್ಟಿ (ಪಾಷಣಮೂರ್ತಿ) ದೈವದ ನೇಮೋತ್ಸವವು ನಡೆದು ಭಕ್ತಾದಿಗಳಿಗೆ ದರ್ಶನ ನೀಡಿತು. ನಂತರ ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ ೧ ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ಗಗ್ಗರ ಸೇವೆ ನೇಮವು ನೆರವೇರಿತು.

ತಾ. ೧೫ ರಂದು ಬೆಳಿಗ್ಗೆ ೫ ಗಂಟೆಗೆ ಚಾಮುಂಡೇಶ್ವರಿ ಹಾಗೂ ಬಲ ಬಂಟ ಗುಳಿಗ ರಾಜ ದೈವದ ಜೋಡಿ ಕೋಲವು ಬೆಳಿಗ್ಗೆ ೮ ಗಂಟೆಯವರೆಗೆ ನಡೆಯಿತು. ಧರ್ಮ ದೈವಕ್ಕೆ ಆರ್ಪಣೆಯನ್ನು ನೀಡಲಾಯಿತು. ೯ ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಅರ್ಪಿಸಿದರು. ಒಪ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು.

ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆಯನ್ನು ನೆರೆದಿದ್ದ ಭಕ್ತಾದಿಗಳಿಗೆ ನೀಡಲಾಯಿತು. ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ. ರಾಜು ರೈ ಹಾಗೂ ಶಿವಪ್ರಸಾದ್ ರೈ ಕುಟುಂಬಸ್ಥರು ಇದ್ದರು.

ಸುತ್ತಮುತ್ತಲ ಗ್ರಾಮ ಹಾಗೂ ಊರುಗಳಾದ ವೀರಾಜಪೇಟೆ, ಸಿದ್ದಾಪುರ, ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಸ್ಥಳೀಯ ನರಿಯಂದಡ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ವಾರ್ಷಿಕ ಉತ್ಸವ ತಾ. ೧೭ ರಿಂದ (ಇಂದಿನಿAದ) ತಾ. ೨೧ ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ತಾ. ೧೭ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಮಹಾ ಗಣಪತಿ ಹೋಮ, ಪ್ರಸಾದ ವಿತರಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಬರುವುದು, ಕೊಡಿ ಮರ ನಿಲ್ಲುದು, ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು, ಅಂದಿ ಬೆಳಕು, ನಂತರ ಮಹಾಪೂಜೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಇರು ಬೆಳಕು (ದೇವರು ಹೊರಗೆ ಬರುವುದು,) ೧೦ ಗಂಟೆಗೆ ಚಂಡಿಕಾ ಹೋಮ, ೧೨ಕ್ಕೆ ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನೆರಪು ಬಲಿ, ದೇವರ ನೃತ್ಯ, ಮಹಾಪೂಜೆ ನಡೆಯಲಿದೆ. ತಾ. ೧೯ಕ್ಕೆ ಬೆಳಿಗ್ಗೆ ೧೦.೩೦ ಗಂಟಗೆ ಎತ್ತುಪೋರಾಟ ನಂತರ ಅಲಂಕಾರ ಪೂಜೆ, ಮಧ್ಯಾಹ್ನದ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ಭಗವತಿ ದೇವರ ಅವಭೃತ ಸ್ನಾನ (ಹೊಳೆಗೆ ಹೋಗುವುದು,) ಸಂಜೆ ೬ ಗಂಟೆಗೆ ದೇವರ ನೃತ್ಯ, ವಸಂತ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೨೦ ರಂದು ೧೦ ಗಂಟೆಯ ನಂತರ ವಿಷ್ಣುಮೂರ್ತಿ ಮೇಲೆರಿಗೆ ಸೌದೆ ಕಡಿಯುವುದು, ಭಗವತಿ ದೇವರ ಸನ್ನಿಧಿಯಲ್ಲಿ ಕಲಶ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ಕ್ಕೆ ಕ್ಷೇತ್ರಪಾಲ ಕೋಲವು ಕ್ಷೇತ್ರಪಾಲ ಸನ್ನಿಧಿಯಲ್ಲಿ ನಡೆಯಲಿದೆ. ರಾತ್ರಿ ೯ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲವು ನಡೆಯಲಿದೆ.

ತಾ. ೨೧ ರಂದು ೧೦ ಗಂಟೆಗೆ ವಿಷ್ಣುಮೂರ್ತಿ ಕೋಲವು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೭ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ) ವಿತರಣೆ ನಡೆಯಲಿದೆ. ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.ಸೋಮವಾರಪೇಟೆ: ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ವಾರ್ಷಿಕ ಸುಗ್ಗಿ ಉತ್ಸವ ಮೂರು ದಿನಗಳ ಕಾಲ ಸಂಭ್ರಮ-ಸಡಗರದಿAದ ನಡೆಯಿತು.

ಪೂಜೆಯ ಮೊದಲ ದಿನ ಗ್ರಾಮಸ್ಥರು ಒಂದೆಡೆ ಸೇರಿ ಪರೇವು (ಅನ್ನದಾಸೋಹ) ನಡೆಸಿದರು. ದೇವರಿಗೆ ರುದ್ರಾಭಿಷೇಕ, ಮೆರೆ ಬಸವಣ್ಣ ಮೂರ್ತಿಯನ್ನು ದೇವಾಲಯದ ಹೊರಗೆ ತಂದು ಪ್ರದಕ್ಷಿಣೆಯೊಂದಿಗೆ ದೊಡ್ಡ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು.

ಕೊನೆ ದಿನ ದೇವರಿಗೆ ಗಂಗಾ ಸ್ನಾನ ನಡೆಯಿತು. ಇದೇ ಸಂದರ್ಭ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಲವು ಭಕ್ತರು ಕೆಂಡ ಸ್ನಾನದಲ್ಲಿ ಪಾಲ್ಗೊಂಡರು. ಬಳಿಕ ಕೊಂಡ ಪೂಜೆಯೊಂದಿಗೆ ಕೊಂಡ ಹಾಯುವುದು, ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆಯ ನಂತರ ದೇವರಿಗೆ ಈಡುಗಾಯಿ ಹಾಕಿ ದೇವಾಲಯದ ಒಳಗೆ ಬರಮಾಡಿಕೊಂಡು ಭಕ್ತರಿಂದ ಹಣ್ಣು ಕಾಯಿ ಪೂಜೆ ನಡೆಯಿತು.

ದೇವಾಲಯದ ಅರ್ಚಕ ಸಿದ್ದಲಿಂಗಸ್ವಾಮಿ ಹಾಗೂ ಊರಿನ ಹಿರಿಯ ಜಂಗಮರಾದ ಜಿ.ಇ. ತಮ್ಮಯ್ಯ ಅವರಿಂದ ಪೂಜೆ ನೆರವೇರಿತು. ಈ ಸಂದರ್ಭ ಗ್ರಾಮದ ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ಚಂದ್ರಕುಮಾರ್, ಕಾರ್ಯದರ್ಶಿ ಜಿ.ಎಂ. ಉದಯ, ಖಜಾಂಚಿ ಎಸ್. ದಯಾನಂದ, ಉಪಾಧ್ಯಕ್ಷ ಜಿ.ಟಿ. ಹಿರಣ್ಣಯ್ಯ, ಜಂಟಿ ಕಾರ್ಯದರ್ಶಿ ಶರತ್ ಇತರರಿದ್ದರು. ಪೂಜಾ ಸೇವೆಯನ್ನು ಗ್ರಾಮದ ಜಿ.ಎಂ. ರಾಜಶೇಖರ್ ಕುಟುಂಬಸ್ಥರು ನಡೆಸಿಕೊಟ್ಟರು.ಮಡಿಕೇರಿ: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಆಚರಣೆ ನಡೆಯಿತು. ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ (ಕೊನ್ನ ಪೂ) ಹೊನ್ನೇ ಹೂವನ್ನು ಇದೇ ಸಂದರ್ಭ ವಿತರಿಸಲಾಯಿತು.

ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಮಲಯಾಳಿ ಬಂಧುಗಳು ಹಬ್ಬದ ಸಡಗರವನ್ನು ಹಂಚಿಕೊAಡರು.

ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಮಾತನಾಡಿ, ಹಬ್ಬಗಳ ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳುವ ಮೂಲಕ ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆ ಮುಂದುವರೆಸಿಕೊAಡು ಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ಸುಧೀರ್ ಹೊಸ ವರ್ಷ ಆಚರಣೆಯ ವಿಷು ಹಬ್ಬವು ಮಲಯಾಳಂ ತಿಂಗಳಿನ ಪ್ರಕಾರ ಒಂದನೇ ತಾರೀಕು ಆಗಿದೆ. ನಾವು ನಮ್ಮ ಮಕ್ಕಳಿಗೆ ಹೊಸ ಉಡುಗೆ ತೊಡಗೆಗಳನ್ನು ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕೃತಿಯನ್ನು ಕಲಿಸಬೇಕು. ಕುಟುಂಬದ ಸದಸ್ಯರೆಲ್ಲರೂ ಸೇರಿ ಸಂಭ್ರಮದಿAದ ಹಬ್ಬವನ್ನು ಆಚರಿಸುವುದನ್ನು ಹೇಳಿಕೊಡಬೇಕು ಎಂದರು.

ಸAಘದ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ವಿಷು ಕಣಿ ಇಡುವುದು ನಮ್ಮ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯವಾಗಿದೆ. ಈ ಸಂಪ್ರದಾಯವನ್ನು ಯುವ ಸಮೂಹ ಮುಂದುವರೆಸಿಕೊAಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಸಂಘದ ಸಲಹೆಗಾರ ಹಾಗೂ ಉದ್ಯಮಿ ಪಿ.ಟಿ. ಉಣ್ಣಿಕೃಷ್ಣ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಟಿ.ಆರ್., ಖಜಾಂಚಿ ರವಿ ಎಂ.ಪಿ., ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜನ್ ಹಾಗೂ ಅತಿಥಿ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದಿನೇಶ್ ನಾಯರ್ ಇ.ಬಿ. ಹಾಗೂ ಸಂದೀಪ್ ಅವರು ವಿಷು ಕಣಿಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು.

ಶ್ರಾವ್ಯ ಸುಬ್ರಮಣಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ಅಶೋಕ್, ಸಹ ಖಜಾಂಚಿ ಸುಬ್ರಮಣಿ ಪಿ.ವಿ., ಪ್ರಚಾರ ಸಮಿತಿಯ ಅಧ್ಯಕ್ಷ ರವಿ ಅಪ್ಪುಕುಟ್ಟನ್ ಹಾಗೂ ಸರ್ವ ನಿರ್ದೇಶಕರುಗಳು ಉಪಸ್ಥಿತರಿದ್ದರು. ೨೦೦ಕ್ಕೂ ಅಧಿಕ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಪಾರಾಣೆ ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷಿö್ಮ ದೇವರ ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಪಟ್ಟಣಿಹಬ್ಬ, ಅಯ್ಯಪ್ಪ ದೇವರಕೋಲ, ಎತ್ತುಪೋರಾಟ, ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು.

ದೇವಾಲಯದ ಹಬ್ಬದ ಸಮಯದಲ್ಲಿ ಪ್ರದರ್ಶಿಸಲಾಗುವ ತೇಲಾಟ್, ಕತ್ತಿಯಾಟ್, ಕೊಂಬಾಟ್, ಪೀಲಿಯಾಟ್, ಅಜ್ಜಾಟ್, ಬಿಲ್ಲಾಟ್, ಜೋಡಿಯಾಟ್, ಸೇರಿದಂತೆ ಸುಮಾರು ೧೮ ಬಗೆಯ ವೈಶಿಷ್ಟö್ಯ ನೃತ್ಯಗಳು ಉತ್ಸವದಲ್ಲಿ ನೆರೆದಿದ್ದ ಜನರನ್ನು ರಂಜಿಸಿತು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದು ಸಂಭ್ರಮದಿAದ ಹಬ್ಬವನ್ನು ಆಚರಿಸಿ ಪುನೀತರಾದರು.