ಮಡಿಕೇರಿ, ಏ. ೧೭ : ನಗರದ ಶಕ್ತಿ ಆಸ್ರಮಕ್ಕೆ ದಾನಿ ನೆರವು ಪಡೆದು ಸೋಮವಾರಪೇಟೆ ಜೆ.ಸಿ.ಐ. ಸಂಸ್ಥೆ ಅಧ್ಯಕ್ಷೆ ಎಂ.ಎ. ರುಬೀನಾ ಕುಕ್ಕರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಶಿಕ್ಷಕಿ ಮನೂಬಾಯಿ ಅವರ ಗಮನ ಸೆಳೆದು ಸುಮಾರು ಹದಿನೈದು ಸಾವಿರ ಮೌಲ್ಯದ ಐವತ್ತು ಲೀಟರಿನ ಕುಕ್ಕರನ್ನು ಕೊಡುಗೆಯಾಗಿ ನೀಡಿ ಸ್ಪಂದಿಸಿದ್ದಾರೆ.

ಮಡಿಕೇರಿಯಲ್ಲಿರುವ ಶಕ್ತಿ ಆಶ್ರಮಕ್ಕೆ ಭೇಟಿ ನೀಡಿ ಇದನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚಂದನ್ ನಂದರಬೆಟ್ಟು, ರಿಶಾ ಉಪಸ್ಥಿತರಿದ್ದರು.