ವೀರಾಜಪೇಟೆ, ಏ. ೧೭: ಕಾಫಿ ತೋಟ ಒಂದರಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತಿದ್ದ ಸಂದರ್ಭ ಹುಲಿಯೊಂದು ಕಾಣಿಸಿಕೊಂಡು ಕಾರ್ಮಿಕರು ಜೀವ ಭಯದಿಂದ ಓಡಿಹೊಗಲು ಯತ್ನಿಸಿ ಗಾಯಗೊಂಡ ಘಟನೆ ಬಿಟ್ಟಂಗಾಲ ಕಂಡAಗಾಲ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಗ್ರಾಮದ ಮಂದಮಾಡ ಮುನ್ನಾ ಎಂಬುವವರ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಎಂದಿನAತೆ ಸ್ಥಳೀಯ ನಾಲ್ಕು ಮಂದಿ ತೋಟದ ಕೆಲಸಕ್ಕೆ ತೆರಳಿದ್ದಾರೆ. ಕಾರ್ಮಿಕರು ತಮ್ಮ ಕರ್ತವ್ಯ ನಿರತರಾಗಿದ್ದರು. ಮಧ್ಯಾಹ್ನ ೧೨.೩೦ರ ವೇಳೆಗೆ ಹುಲಿ ಕಾಣಿಸಿಕೊಂಡಿದೆ. ಕಾರ್ಮಿಕರು ಚೀರಾಟ ಮಾಡಿಕೊಂಡು ಜೀವ ಭಯದಿಂದ ಹುಲಿ ದಾಳಿಯಿಂದ ಪಾರಾಗಲು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ.
ಈ ವೇಳೆಯಲ್ಲಿ ಕಾರ್ಮಿಕರು ಎಡವಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಮಾಲೀಕರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿರುತ್ತಾರೆ. ಕಂಡAಗಾಲ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹುಲಿಯೊಂದು ಕಾಳು ಮೆಣಸು ಕೊಯ್ಯುವ ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಅಲ್ಲದೆ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು.