ಕುಶಾಲನಗರ, ಏ. ೨೨: ಕುಶಾಲನಗರ ಗಡಿಭಾಗದ ಕೊಪ್ಪ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲಾ ಪೊಲೀಸರು ಅಳವಡಿಸಿರುವ ಹೆದ್ದಾರಿ ಬದಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಾಹನಗಳ ತಪಾಸಣಾ ಕ್ಯಾಮರಾ ಮತ್ತೆ ಕಾರ್ಯಾಚರಣೆ ಆರಂಭಿಸಿದೆ.
ಶಕ್ತಿಯಲ್ಲಿ ಪ್ರಕಟಗೊಂಡ ಕರೆಂಟ್ ಬಿಲ್ ಪೆಂಡಿAಗ್ ಕ್ಯಾಮೆರಾ ಕನೆಕ್ಷನ್ ಕಟ್ ಎಂಬ ವಿಶೇಷ ವರದಿಗೆ ಕೂಡಲೇ ಸ್ಪಂದಿಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸೆಸ್ಕಾಂ ಅಧಿಕಾರಿಗಳು ಕ್ಯಾಮರಾಗೆ ವಿದ್ಯುತ್ ಸಂಪರ್ಕ ನೀಡುವ ಮೂಲಕ ಇದೀಗ ಕ್ಯಾಮರಾ ಮತ್ತೆ ಕುಶಾಲನಗರ ಮೈಸೂರು ಹೆದ್ದಾರಿಯಲ್ಲಿ ತೆರಳುವ ವಾಹನ ಚಾಲಕರ ಮೇಲೆ ನಿಗಾ ಇಡಲು ಪ್ರಾರಂಭಿಸಿದೆ.
-ಸಿಂಚು