ಚೆಯ್ಯಂಡಾಣೆ, ಏ. ೨೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಚೆಯ್ಯಂಡಾಣೆ ಲಕ್ಷಿö್ಮ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ನಂಬಿಯಪAಡ ಮಣಿ ಅಯ್ಯಮ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾನು ವಲಯಾಧ್ಯಕ್ಷನಾಗಿದ್ದಾಗ ಎರಡು ಮೂರು ತಿಂಗಳಿಗೊಮ್ಮೆ ಸಭೆ ನಡೆಸ್ತಾ ಬರುತ್ತಿದ್ದೆ. ಈ ವ್ಯಾಪ್ತಿಯಲ್ಲಿ ಇದೀಗ ಕಾಂಗ್ರೆಸ್ ಕಾರ್ಯಕರ್ತರನ್ನೇ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ತಿಂಗಳಿಗೆ ಸಭೆ ಮಾಡಬೇಕು ಎಂದ ಅವರು ತಾನು ಹಲವಾರು ಬಾರಿ ಇದರ ಬಗ್ಗೆ ಸಂಬAಧಪಟ್ಟ ಜಿಲ್ಲಾಧ್ಯಕ್ಷರಿಗೆ ತಿಳಿಸಿದರೂ ಕೂಡ ಬ್ಲಾಕ್ ಅಧ್ಯಕ್ಷರಾಗಲಿ. ವಲಯ ಅಧ್ಯಕ್ಷರಾಗಲಿ ತಿರುಗಿ ನೋಡುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್‌ನ ಕಾರ್ಯಕರ್ತ ಬಿದ್ದಂಡ ತೇಜಕುಮಾರ್, ಮಚ್ಚಂಡ ರಂಜು ಚಂಗಪ್ಪ, ಗಫೂರ್ ಮಾತನಾಡಿ ವಲಯ, ಬ್ಲಾಕ್ ಮಟ್ಟದ ಪದಾಧಿಕಾರಿಗಳ ಬಗ್ಗೆ ಅಸಮಾಧಾನ ಹೊರ ಹಾಕಿ ವಲಯ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿ ಕೂಡಲೇ ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಸಕರ ನೇತೃತ್ವದಲ್ಲಿ ಸಭೆ ಕರೆಯ ಬೇಕು ಈ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ವೈ.ಎಂ.ಮೊಹಮ್ಮದ್ ಎಡಪಾಲ ಹಾಗೂ ಕೋಕೇರಿ ಬ್ಲಾಕ್ ನ ರಾಜ ಉತ್ತಪ್ಪ ಮಾತನಾಡಿ ಯಾರೇ ಕಾಂಗ್ರೆಸ್‌ನಲ್ಲಿ ಅಧಿಕಾರದಲ್ಲಿದ್ದರು ಕೂಡ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಬೆಂಬಲ ನೀಡಬೇಕು, ಏನೇ ಅಸಮಾಧಾನ ಇದ್ದರು ಕೂಡ ಪರಸ್ಪರ ಚರ್ಚಿಸಿ ಬಗ್ಗೆಹರಿಸಿಕೊಳ್ಳಬೇಕು ಎಂದರು. ಇದೆ ಸಂದರ್ಭ ಚೆಯ್ಯಂಡಾಣೆಯ ಮುಂಡಿಯೋಳAಡ ಸಜನ್ ನಂಜುAಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಈ ಸಂದರ್ಭ ಕಾಂಗ್ರೆಸ್ ಹಿರಿಯ ಕಾರ್ಯಕರ್ತರಾದ ಎ.ಕೆ.ಉದಯ, ಕೋಡಿರ ಡಾಲಿ ಸುಬ್ರಮಣಿ, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಯು. ಮೊಹಮ್ಮದ್, ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್,ವಿಠಲ ಉತ್ತಪ್ಪ,ಪಾಲಚಂಡ ವಿನು ಮಾದಪ್ಪ, ರಹೀಮ್ ಮತ್ತಿತರರು ಉಪಸ್ಥಿತರಿದ್ದರು. ಮುಂಡಿಯೋಳAಡ ಮಾಚಮ್ಮ ಪ್ರಾರ್ಥಿಸಿ, ಮೊಹಮ್ಮದ್ ಸ್ವಾಗತಿಸಿ, ರಾಜ ಉತ್ತಪ್ಪ ವಂದಿಸಿದರು.