(ನಿನ್ನೆಯ ಸಂಚಿಕೆಯಿAದ)
ಅಲಭ್ಯವಾದ ನಕ್ಷೆಗಳು
ಕೊಡಗು ಜಿಲ್ಲೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ‘ಸಿ' ರಾಜ್ಯವಾಗಿದ್ದಾಗ ಮೇಲಿನ ಆದೇಶದಂತೆ ಭೂಮಾಪನ ಕೆಲಸ ಆರಂಭಿಸಿ ಗ್ರಾಮದ ಗಡಿ ಗುರುತುಗಳನ್ನು ದುರ್ಬಿಣಿ ಮೋಜಣಿಯಿಂದ ಟ್ರಾವರ್ಸ್ ಮಾಡಿ ಪ್ರತಿ ಗ್ರಾಮಕ್ಕೆ ಅಳತೆಗಳ ಡಾಟವನ್ನು ತಯಾರಿಸಿ ಇಟ್ಟಿರುತ್ತಾರೆ. ಇದರ ಆಧಾರದ ಮೇಲೆ ಉಪ ಟ್ರಾವರ್ಸ್ ಮಾಡಿ ತರಿ ಜಮೀನುಗಳಲ್ಲಿ ಕಟ್ಟೆ ಕಲ್ಲುಗಳನ್ನು ಹಾಕಿದ ಗುರುತುಗಳು ಇರುತ್ತವೆ. ಜಿಲ್ಲೆಯ ನಕ್ಷೆಯನ್ನು ೮” ಇಂಚು ೧ ಮೈಲು ೧೬" ಇಂಚು ೧ ಮೈಲು ಎಂಬ ಅಂತರದಿAದ ತಯಾರಿಸಿರುತ್ತಾರೆ. ಸರಿ ಸುಮಾರು ೧೨೦ ವರ್ಷದ ಹಿಂದೆ ಅಳತೆ ಮಾಡಿದ ನಕ್ಷೆ ಆಧಾರದ ಮೇಲೆ ಪೋಡಿ ವಿಭಜನೆ ದುರಸ್ತಿಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ರೀತಿಯ ಅಳತೆಯಿಂದ ನಕಾಶೆಗೂ, ಹಿಡುವಳಿ ಜಾಗಕ್ಕೂ ವ್ಯತ್ಯಾಸಗಳು ತುಂಬಾ ಇದ್ದು ನಕ್ಷೆ ಪ್ರತಿಗಳು ದೊರಕುತ್ತಿರುವುದಿಲ್ಲ.
ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಯನ್ನು ಆಧುನಿಕ ರೀತಿಯಲ್ಲಿ ಅಂದರೆ ಮೆಟ್ರಿಕ್ ಪದ್ಧತಿಯಲ್ಲಿ ಹೆಕ್ಟರ್ ಮತ್ತು ಏರಗಳಲ್ಲಿ ವಿಸ್ತೀರ್ಣದ ದಾಖಲಾತಿ ಮಾಡಲು ಮರು ಭೂಮಾಪನಾ ಮಾಡುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಆರ್.ಡಿ. /೧೧೯/ಎಸ್.ಸಿ.ಆರ್/೭೭ ದಿನಾಂಕ ೨೭-೦೨-೧೯೭೮ ಮೇರೆ ಆದೇಶ ಮಾಡಿ ಪ್ರಥಮವಾಗಿ ಸೋಮವಾರಪೇಟೆ ತಾಲೂಕನ್ನು ಆಯ್ಕೆ ಮಾಡಿಕೊಂಡು ೨೯೮ ಗ್ರಾಮಗಳ ಪೈಕಿ ೨೭೨ ಗ್ರಾಮಗಳ ಮರು ಭೂಮಾಪನಾ ಕೆಲಸ ಮುಗಿದು ಇನ್ನು ೨೬ ಗ್ರಾಮಗಳು ಬಾಕಿ ಇರುವಾಗಲೇ ಕೆಲವು ತಾಂತ್ರಿಕ ಕಾರಣಗಳಿಂದ ಮರು ಭೂಮಾಪನಾ ಕೆಲಸವನ್ನು ಸ್ಥಗಿತಗೊಳಿಸಲಾಯಿತು. ಕಾರಣ ಕೊಡಗು ಜಿಲ್ಲೆಯಲ್ಲಿನ ವಿಶಿಷ್ಟ ನಿಬಂಧನೆಗಳು ಇದ್ದುದರಿಂದ ಸ್ವಾಧೀನದಂತೆ ಅಳತೆ ಮಾಡಿ ಗುರುತಿಸುವಲ್ಲೂ ಸೂಕ್ತ ನಿರ್ದೇಶನ ನೀಡಿರುವುದಿಲ್ಲ.
ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಕವಾಗಿ ಸರಿ ಸುಮಾರು ೩೭ ವಿಶಿಷ್ಟ ಹಕ್ಕನ್ನು ಹೊಂದಿದ ನಿಬಂಧನೆಗಳು ಇದ್ದು ಜಮೀನಿನ ವಿಭಜನೆ, ಪರಿವರ್ತನೆ ಮತ್ತಿತರ ಕಾರಣಗಳಿಂದ ಸರಿ ಸುಮಾರು ೧೬೦೦ ನಿಬಂಧನೆಗಳು ಆಗಿದ್ದು ಕಂದಾಯ ದರದಲ್ಲಿ ವ್ಯತ್ಯಾಸವಿದ್ದು ಒಟ್ಟು ಹಿಡುವಳಿದಾರನ ಸ್ವಾಧೀನದಲ್ಲಿ ಒಂದೇ ಬೆಳೆ ಇರುವ ಹಲವಾರು ನಿಬಂಧನೆಗಳ ಸರ್ವೆ ನಂಬರಿನ ವಿಸ್ತೀರ್ಣವನ್ನು ಗುರುತಿಸಿ ನಕ್ಷೆ ತಯಾರಿಸಿ ಹೊಸ ಸರ್ವೆ ನಂಬರನ್ನು ನೀಡಬೇಕಾಗಿರುತ್ತದೆ. ಒಂದು ನಿಬಂಧನೆಯನ್ನು ಮತ್ತೊಂದು ನಿಬಂಧನೆಯ ವಿಸ್ತೀರ್ಣದೊಂದಿಗೆ ಸೇರಿಸಬಾರದೆಂಬ ಇಲಾಖೆಯ ಸುತ್ತೋಲೆ ಇದ್ದುದರಿಂದ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯದ ಕಾರಣ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಸಂಖ್ಯೆ ೨೪೯/ಎಫ್ ಎಲ್ ಆರ್/೯೩ ದಿನಾಂಕ ೧೧-೧೧-೧೯೯೪ರ ಆದೇಶದಂತೆ ಎಲ್ಲಾ ರಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿರುತ್ತದೆ.
ಈ ವಿಷಯದ ಬಗ್ಗೆ ಮಡಿಕೇರಿಯ ಭೂಮಾಪನಾ ಸಹಾಯಕ ನಿರ್ದೇಶಕರು ಮಡಿಕೇರಿರವರು ಕೊಡಗು ಜಿಲ್ಲಾಧಿಕಾರಿಯವರಲ್ಲಿ ವಿಷಯ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪತ್ರ ಸಂಖ್ಯೆ ಸಿ/ ಇತರೆ ೭೧/೨೦೦೦-೨೦೦೧ ದಿನಾಂಕ ೨೬-೧೨-೨೦೦೦ರಲ್ಲೂ ಪ್ರಧಾನ ಕಾರ್ಯದರ್ಶಿಯವರು ಕಂದಾಯ ಇಲಾಖೆ ಬೆಂಗಳೂರು ಮತ್ತು ಪ್ರತಿಯನ್ನು ನಿರ್ದೆಶಕರು ಬೆಂಗಳೂರು ಮತ್ತು ಅಂದಿನ ವಿಭಾಗಾಧಿಕಾರಿಗಳು ಮೈಸೂರು ವಿಭಾಗರವರಿಗೆ ಮಾಹಿತಿ ಮತ್ತು ಅಗತ್ಯ ಕ್ರಮಕ್ಕಾಗಿ ಕಳುಹಿಸಿರುತ್ತಾರೆ.
ಈ ರೀತಿ ಅಳತೆ ಇಲ್ಲದ ಹರಿದು ಶಿಥಿಲವಾದ ನಕ್ಷೆಗಳ ಆಧಾರದಿಂದ ಕಂದಾಯ ಇಲಾಖೆಯ ನ್ಯಾಯಾಲಯದ ಬಹಳ ಮುಖವಾದ ಭೂವಿವಾದಗಳ ಬಗ್ಗೆ ತೀರ್ಪು ನೀಡಲು ಭೂಮಾಪನಾ ವರದಿ ನೀಡುವುದು ಕಷ್ಟಸಾಧ್ಯವಾಗಿರುತ್ತದೆ. ಹದ್ದು ಬಸ್ತು ಸರ್ವೆ, ವಿಭಜನೆ, ಭೂಮಂಜೂರಾತಿ ಬಗ್ಗೆ ಅಳತೆ ಮಾಡಲು ಲಭ್ಯವಿರುವ ಶಿಥಿಲವಾದ ನಕ್ಷೆಗಳನ್ನು ತೆಗೆದುಕೊಂಡು ಅಳತೆ ಕಾರ್ಯಕ್ಕೆ ಹೋದಾಗ ನಕಾಶೆಯಲ್ಲಿ ನಮೂದಿಸಿರುವ ವಿಸ್ತೀರ್ಣಗಳ ಸ್ಥಳದಲ್ಲಿ ಸರ್ವೆ ಬಗ್ಗೆ ಕೋರಿರುವ ವಿಸ್ತೀರ್ಣ ವ್ಯತ್ಯಾಸ ಬರುವುದರಿಂದ ನಿಖರವಾಗಿ ಪೋಡಿ ಮಾಡಿ ದುರಸ್ತಿ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲವೆಂದು ಈ ಹಿಂದೆ ಮೂಲ ಭೂಮಾಪನ ಮಾಡಿ ನಕ್ಷೆ ಮುದ್ರಿಸಿದ ಮದ್ರಾಸು ಪ್ರಾಂತ್ಯದ ಮುದ್ರಣದಲ್ಲಿ (ಊಇಐಐಔ ZIಓಅಔ SUಖಗಿಇಙ ಔಈಈIಅಇ ಒಂಆಖAS (೧೯೧೭) ಔಖ Pಊಔಖಿಔ ZIಓಅಔ SUಖಗಿಇಙ ಔಈಈIಅಇ ಒಂಆಖAS (೧೯೧೦) ಔಖ ಗಿಓಆಙಏಇ ZIಓಅಔ SUಖಗಿಇಙ ಔಈಈIಅಇ (೧೯೧೭೦)) ಕೊಡಗು ಜಿಲ್ಲೆಯ ೫೧೫ ಗ್ರಾಮಗಳ ಪ್ರತಿ ಲಭ್ಯವಿದ್ದಲ್ಲಿ ಜವಾಬ್ದಾರಿಯುತ ಅಧಿಕಾರಿಯನ್ನು ಕಳುಹಿಸಿ ಪಡೆದು ಒದಗಿಸಿದಲ್ಲಿ ಅದರಲ್ಲಿ ಇತ್ತೀಚಿಗೆ ದುರಸ್ತಿಯಾದ ಸರ್ವೆ ನಂಬರ್‌ಗಳನ್ನು ಇಂಡೀಕರಿಸಿಕೊAಡು ಮುಂದೆ ಕೊಡಗು ಜಿಲ್ಲೆಯ ಮರು ಭೂಮಾಪನೆ ಮಾಡಿ ಭೂದಾಖಲೆಗಳನ್ನು ಪಡೆಯುವವರೆಗೆ ಕಚೇರಿ ನಿರ್ವಹಣೆ ಮಾಡಬಹುದೆಂದು ಭೂದಾಖಲೆಗಳ ಸಹಾಯಕ ನಿರ್ದೇಶಕರು ಮಡಿಕೇರಿ ಉಪವಿಭಾಗ ಮಡಿಕೇರಿರವರು ದಿನಾಂಕ ೦೪-೦೧-೨೦೦೧ ರಲ್ಲೂ ಭೂದಾಖಲೆಗಳ ಉಪನಿರ್ದೆಶಕರು ಮಂಗಳೂರು ವಿಭಾಗ ಮಂಗಳೂರುರವರಿಗೆ ಮತ್ತು ಅಂದಿನ ಕೊಡಗಿನ ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಎಂ.ಎA. ನಾಣಯ್ಯನವರಿಗೂ ಮತ್ತು ಸಂಬAಧಪಟ್ಟ ಇತರ ಅಧಿಕಾರಿಗಳಿಗೂ ಪತ್ರ ಬರೆದಿರುತ್ತಾರೆ.
ಮರು ಭೂಮಾಪನೆ ಅಗತ್ಯ
ಸುಮಾರು ೧೨೦ ವರ್ಷಗಳ ಹಿಂದೆ ಭೂಮಾಪನೆ ಆಗಿದ್ದು ಅಲ್ಲಿಂದ ಇಲ್ಲಿಯವರೆಗೆ ಆಗಿರತಕ್ಕಂತಹ ಬದಲಾವಣೆ ಅಂದರೆ ರಸ್ತೆ ಭೂವರ್ತನೆ ಸರಕಾರಿ ಕಟ್ಟಡಗಳಿಗೆ ಜಮೀನು ಮಂಜೂರಾತಿಯಾಗಿರುವುದು, ಸರಕಾರಿ ಜಮೀನು ಮಂಜೂರಾತಿ ಮಾಡಿರುವುದು, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಮುಳುಗಡೆ ಸೇರಿರುವ ಸಹಸ್ರಾರು ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡಿರುವುದು ಮತ್ತು ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಯಡವನಾಡು ಅರಣ್ಯದಿಂದ ೯೦೦ ಎಕರೆ ಅತ್ತೂರು ಅರಣ್ಯದಿಂದ ೩೦೦೦ (ಮೂರು ಸಾವಿರ) ಎಕರೆ ಜಮೀನನ್ನು ಕಂದಾಯ ಇಲಾಖೆ ಹಸ್ತಾಂತರಿಸಿಕೊAಡು ಯಡವನಾಡು ಮತ್ತು ಅತ್ತೂರು ಎರಡು ಕಂದಾಯ ಗ್ರಾಮಗಳನ್ನು ಹೆಚ್ಚುವರಿ ಮಾಡಿರುವುದು ಇವುಗಳನ್ನೆಲ್ಲಾ ಮರು ಭೂಮಾಪನೆ ಮಾಡಿಸಿ ಅನವಶ್ಯಕವಾದ ಕೆಲವು ನಿಬಂಧನೆಗಳನ್ನು (ಮೂಲ ನಿಬಂಧನೆಯ ವಿಶಿಷ್ಟ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ) ಕೈ ಬಿಡುವಂತೆ ಸರಕಾರ ದೃಢ ನಿರ್ಧಾರ ತೆಗೆದುಕೊಂಡು ಕೊಡಗು ಜಿಲ್ಲೆಯನ್ನು ಮರು ಭೂಮಾಪನ ಮಾಡುವುದು ಅವಶ್ಯವೆನಿಸುತ್ತದೆ.
(ಮುಂದುವರಿಯುವುದು)
-ಯನ್. ಎಸ್. ಜಯರಾಮ್, ನಿವೃತ್ತ ಉಪತಹಶೀಲ್ದಾರರು
ನೀರುಗಂದ-ಕೊಡ್ಲಿಪೇಟೆ.
ಮೊ: ೯೩೫೩೩೧೯೩೪೯