ಮಡಿಕೇರಿ, ಏ. ೨೨: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಯುವತಿ ಲೆಫ್ಟಿನೆಂಟ್ ಅಜ್ಜೀನಂಡ ಐಶ್ವರ್ಯ ಶೂಟಿಂಗ್ ಸ್ಪರ್ಧೆಯಲ್ಲಿ ಪದಕಗಳಿಸಿದ್ದಾರೆ. ಮಧ್ಯಪ್ರದೇಶದ ಮೋವ್‌ನಲ್ಲಿ ೨೧ನೇ ಯಂಗ್ ಬ್ಲಡ್ ಚಾಂಪಿಯನ್‌ಶಿಪ್ ಅಂಗವಾಗಿ ನಡೆದ ಸೇನಾ ಶೂಟಿಂಗ್ ಸ್ಪರ್ಧೆಯಲ್ಲಿ ಐಶ್ವರ್ಯ ನೇತೃತ್ವದ ತಂಡ, ತಂಡ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ಇವರು ಬೆಳ್ಳಿ ಪದಕ ಗಳಿಸಿದ್ದಾರೆ. ಐಶ್ವರ್ಯ ಮಡಿಕೇರಿ ನಿವಾಸಿ ಅಜ್ಜೀನಂಡ ಗಣೇಶ್ ಹಾಗೂ ಮೋಂತಿ ದಂಪತಿಯ ಪುತ್ರಿ.