ಗೋಣಿಕೊಪ್ಪಲು, ಏ. ೨೨: ಜೀವನದಲ್ಲಿ ಶಿಸ್ತನ್ನು ಅಳವಡಿಸಿ ಕೊಂಡಲ್ಲಿ ಎಲ್ಲಾ ರಂಗದಲ್ಲೂ ಸಾಧನೆ ಮಾಡಲು ಸಾಧ್ಯವಿದೆ ಎಂದು ನಿವೃತ್ತ ಲೆ. ಕರ್ನಲ್ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ೨೦ ದಿನಗಳ ಹಾಕಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು. ಪ್ರತಿಯೊಬ್ಬರು ಸಮಯಪ್ರಜ್ಞೆ ಪಾಲಿಸಬೇಕು. ಇದರಿಂದ ಆತನ ನಡತೆಯನ್ನು ವಿಶೇಷವಾಗಿ ಗಮನಿಸಬಹುದು ಸಮಯಪ್ರಜ್ಞೆ ಇದ್ದವರೂ ಎಲ್ಲಾ ರಂಗದಲ್ಲೂ ಮುಂಚೂಣಿ ಯಲ್ಲಿರುತ್ತಾರೆ. ಬೇಸಿಗೆ ಶಿಬಿರಕ್ಕೆ ಸಮಯಕ್ಕೆ ಸರಿಯಾಗಿ ಕಿರಿಯ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಸಮಯ ಪ್ರಜ್ಞೆಯನ್ನು ಪಾಲಿಸಿರುವುದು ಹೆಮ್ಮೆ ತಂದಿದೆ ಎಂದರು.
ಯಾವುದೇ ಕ್ರೀಡೆಯಿರಲಿ ಅಭ್ಯಾಸ ಮಾಡುವುದನ್ನು ಅಳವಡಿಸಿ ಕೊಳ್ಳಬೇಕು. ಇದರಿಂದ ದೈಹಿಕವಾಗಿ ಸದೃಢರಾಗಬಹುದು. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಬಾಳೆಯಡ ಕರುಣ್ ಕಾಳಪ್ಪ ಮಾತನಾಡಿ, ಕಠಿಣ ಶ್ರಮದಿಂದ ಹಾಕಿ ಕ್ರೀಡೆಯಲ್ಲಿ ಕೊಡಗಿನ ಪ್ರತಿಭೆಗಳು ರಾಷ್ಟçಮಟ್ಟದಲ್ಲಿ ಕಾಣಿಸಿಕೊಳ್ಳುವಂತಾಗಬೇಕು. ಕ್ರೀಡೆಯ ತವರು ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳನ್ನು ಇಲ್ಲಿನ ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗ ಬೇಕು ಎಂದು ತಿಳಿಸಿದರು.
ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಾಕಿ ಸೇರಿದಂತೆ ಇನ್ನಿತರ ಕ್ರೀಡೆಗಳಿಗೆ ಶಿಬಿರಗಳು ಗ್ರಾಮ ಮಟ್ಟದಲ್ಲಿ ಆಯೋಜನೆಯಾಗಬೇಕು. ಇದರಿಂದ ಸ್ಥಳೀಯ ಗ್ರಾಮೀಣ ಮಕ್ಕಳು ಮೈದಾನಕ್ಕೆ ಆಗಮಿಸಲು ಸಾಧ್ಯವಾಗುತ್ತಿದೆ. ಆ ಮೂಲಕ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂದರು. ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಅಧ್ಯಕ್ಷ ಅರಮಣಮಾಡ ಬೋಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಆಯೋಜಕರಾಗಿ ಆಳಮೇಂಗಡ ರಮೇಶ್ ಕಾರ್ಯನಿರ್ವಹಿಸಿದರು. ಯೋಗಪಟು ಅಳಮೇಂಗಡ ಡಾನ್ ರಾಜಪ್ಪ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಅನುಭವಿ ತರಬೇತುದಾರರಿಂದ ೨೦ ದಿನಗಳ ಹಾಕಿ ತರಬೇತಿ ನೀಡಲಾಯಿತು. ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸ್ಥಳೀಯ ಮಹಾವಿಷ್ಣು ಹಾಗೂ ಲಕ್ಷö್ಮಣತೀರ್ಥ ಕೊಟ್ಟಗೇರಿ ತಂಡದ ನಡುವೆ ಪ್ರದರ್ಶನ ಹಾಕಿ ಪಂದ್ಯಾವಳಿಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಂತರರಾಷ್ಟಿçÃಯ ಹಾಕಿ ತೀರ್ಪುಗಾರರಾದ ಕೈಮುಂಡ ಕಿರಣ್ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪಡಿಂಞರAಡ ಪ್ರಭು ಕುಮಾರ್ ಸ್ವಾಗತಿಸಿ, ಪೋಡಮಾಡ ದಿವ್ಯಗಿರೀಶ್ ವಂದಿಸಿದರು.