ಸೋಮವಾರಪೇಟೆ, ಏ. ೨೨: ಕೇವಲ ಹಣ ಮಾಡುವ ಉದ್ದೇಶದಿಂದ ಸರ್ಕಾರ ಸಹಕಾರ ಸಂಘಗಳಲ್ಲಿ ಬಿಗಿ ಕಾನೂನುಗಳನ್ನು ರೂಪಿಸುತ್ತಿದ್ದು, ರೈತರಿಗೆ ಕಿರುಕುಳ ನೀಡುತ್ತಿದೆ. ಹೊಸ ನಿಯಮಗಳಿಂದ ಬಡ, ಸಣ್ಣ ಹಾಗೂ ಅತೀಸಣ್ಣ ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳು ವಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಯಾದ ಸಹಕಾರ ಸಂಘಗಳು ರೈತರಿಂದ ದೂರವಾಗುತ್ತಿವೆ. ಸರ್ಕಾರಗಳು ದಿನಕ್ಕೊಂದು ಕಾನೂನು ತಂದು ರೈತರಿಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದರು.
ರೈತರ ಶೂನ್ಯ ಬಡ್ಡಿ ಸಾಲ ಮತ್ತು ಶೇ.೩ರ ಬಡ್ಡಿಯಂತೆ ಈ ಹಿಂದೆ ಸಾಲ ಪಡೆಯುವಾಗ ಆಸ್ತಿ ದಾಖಲಾತಿ ಯನ್ನು ಸಂಘಕ್ಕೆ ಅಡಮಾನ ಇಟ್ಟಿದ್ದಾರೆ. ಈಗ ಸಾಲವನ್ನು ನವೀಕರಣ ಮಾಡುವ ಸಂದರ್ಭ ಮತ್ತೊಮ್ಮೆ ಮರ‍್ಟ್ಗೇಜ್ ದಾಖಲಾತಿ ಗಳನ್ನು ಕೊಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರು ಒಂದು ಲಕ್ಷ ಸಾಲಕ್ಕೆ ಒಂದು ಸಾವಿರ ಹಣವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕಟ್ಟಬೇಕಾಗಿದೆ.
ಈ ಹಿಂದೆ ಸಹಕಾರ ಸಂಘದಲ್ಲಿ ರೈತರಿಗೆ ಸಾಲ ವಿತರಿಸಲು ದಾಖಲಾತಿ ಪಡೆಯುವಾಗ ಒಂದಷ್ಟು ಸರಳೀಕರಣವಿತ್ತು. ಪೌತಿ ಖಾತೆಯ ಅದಾಲತ್‌ನಲ್ಲಿ ರೈತರಿಗೆ ಉಪಯೋಗ ವಾಗುತ್ತಿತ್ತು. ಈಗ ಸಿಂಗಲ್ ಆರ್‌ಟಿಸಿ ಇದ್ದವರಿಗೆ ಮಾತ್ರ ಸಹಕಾರ ಸಂಘದಲ್ಲಿ ಸಾಲ ಕೊಡುವಂತಹ ಕಾನೂನು ಬಂದಿದೆ.
ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದವರು ಇನ್ನು ಮುಂದೆ ಅವರು ಪಡೆದ ಸಾಲಕ್ಕೆ ಶೇ. ೧೨ ರಷ್ಟು ಬಡ್ಡಿ ಕಟ್ಟಬೇಕಾಗಿದೆ.
ಕಂದಾಯ ಇಲಾಖೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ದುರಸ್ತಿ ಮಾಡಿಕೊಡುತ್ತಿಲ್ಲ. ಪೌತಿ ಖಾತೆ ಅದಾಲತ್ ಇಲ್ಲ. ಆಸ್ತಿ ದಾಖಲಾತಿ ಪಡೆಯಲು ಹತ್ತಾರು ವರ್ಷ ಪರದಾಡಬೇಕು. ಹಣವಿದ್ದವರು ಮಾತ್ರ ಆಸ್ತಿ ದಾಖಲಾತಿ ಪಡೆಯುತ್ತಿದ್ದಾರೆ. ಬಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗಿನ ಶಾಸಕರುಗಳು ಸಹಕಾರ ಮಂತ್ರಿಗೆ ರೈತರ ಸಮಸ್ಯೆಯ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು. ನೆರೆಯ ಸಕಲೇಶಪುರ ತಾಲೂಕಿನಲ್ಲಿ ೨೮ ಮಂದಿ ಸರ್ವೆಯರ್ ಗಳಿದ್ದಾರೆ. ಆದರೆ ಸೋಮವಾರಪೇಟೆ ತಾಲೂಕಿನಲ್ಲಿ ಕೇವಲ ಈರ್ವರು ಮಾತ್ರ ಸರ್ವೆಯರ್ ಇದ್ದಾರೆ. ಹೀಗಾಗಿ ರೈತರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.
ಕಾಡಾನೆಗಳಿಂದ ಕೃಷಿ ಫಸಲನ್ನು ರಕ್ಷಿಸಿಕೊಳ್ಳಲು ಸೋಲಾರ್ ತಂತಿಬೇಲಿ ಯನ್ನು ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಕಾಫಿ ಬೆಳೆಗಾರರಿಗೆ ಅನುಮತಿ ನೀಡಿದೆ. ಆದರೆ ಕಾಡಾನೆಗಳು ಸೋಲಾರ್ ತಂತಿ ರೈತರಿಗೆ ಅನ್ಯಾಯವಾಗುತ್ತಿದೆ. ದುರಸ್ತಿ ಮಾಡಿಕೊಡುತ್ತಿಲ್ಲ. ಪೌತಿ ಖಾತೆ ಅದಾಲತ್ ಇಲ್ಲ. ಆಸ್ತಿ ದಾಖಲಾತಿ ಪಡೆಯಲು ಹತ್ತಾರು ವರ್ಷ ಪರದಾಡಬೇಕು. ಹಣವಿದ್ದವರು ಮಾತ್ರ ಆಸ್ತಿ ದಾಖಲಾತಿ ಪಡೆಯುತ್ತಿದ್ದಾರೆ. ಬಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗಿನ ಶಾಸಕರುಗಳು ಸಹಕಾರ ಮಂತ್ರಿಗೆ ರೈತರ ಸಮಸ್ಯೆಯ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು. ನೆರೆಯ ಸಕಲೇಶಪುರ ತಾಲೂಕಿನಲ್ಲಿ ೨೮ ಮಂದಿ ಸರ್ವೆಯರ್ ಗಳಿದ್ದಾರೆ. ಆದರೆ ಸೋಮವಾರಪೇಟೆ ತಾಲೂಕಿನಲ್ಲಿ ಕೇವಲ ಈರ್ವರು ಮಾತ್ರ ಸರ್ವೆಯರ್ ಇದ್ದಾರೆ. ಹೀಗಾಗಿ ರೈತರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.
ಕಾಡಾನೆಗಳಿಂದ ಕೃಷಿ ಫಸಲನ್ನು ರಕ್ಷಿಸಿಕೊಳ್ಳಲು ಸೋಲಾರ್ ತಂತಿಬೇಲಿ ಯನ್ನು ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಕಾಫಿ ಬೆಳೆಗಾರರಿಗೆ ಅನುಮತಿ ನೀಡಿದೆ. ಆದರೆ ಕಾಡಾನೆಗಳು ಸೋಲಾರ್ ತಂತಿ