ಸೋಮವಾರಪೇಟೆ, ಏ. ೨೨: ಇಲ್ಲಿನ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಒಂದು ತಿಂಗಳುಗಳ ಕಾಲ ನಡೆಯುವ ಬೇಸಿಗೆ ಹಾಕಿ ತರಬೇತಿ ಶಿಬಿರಕ್ಕೆ ಭಾರತ ರಾಷ್ಟಿçÃಯ ಜೂನಿಯರ್ ಹಾಕಿ ತಂಡದ ತರಬೇತುದಾರ ಸಿ.ಬಿ. ಜನಾರ್ಧನ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಾವುದೇ ಕ್ರೀಡೆಯನ್ನು ನಾವು ಆಯ್ಕೆ ಮಾಡಿಕೊಂಡರೂ, ಅದರ ಮೂಲ ಇತಿಹಾಸ, ಸಾಧಕರ ಸಾಧನೆಗಳನ್ನು ಮೊದಲು ತಿಳಿಯಬೇಕು. ಕಲಿಕೆಗೆ ಹಿಂಜರಿಕೆ ಬೇಡ. ಹಿರಿಯರ ಮಾರ್ಗದರ್ಶನ ಪಡೆದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು. ಕ್ಲಬ್ ಅಧ್ಯಕ್ಷರಾದ ಎಂ.ಈ. ಮಹೇಶ್ ಮಾತನಾಡಿ, ವರ್ಷಂ ಪ್ರತಿಯಂತೆ ಈ ಬಾರಿಯೂ ಉಚಿತ ತರಬೇತಿ ಶಿಬಿರವನ್ನು ಆಯೋಜಿಸ ಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಹೆಸರು ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನ ವನ್ನು ಪಡೆದುಕೊಳ್ಳಬೇಕು. ಪ್ರತಿ ದಿನ ಬೆಳಿಗ್ಗೆ ೬.೩೦ರಿಂದ ೮.೩೦ರವರೆಗೆ ಶಿಬಿರ ನಡೆಯಲಿದ್ದು, ಉಚಿತ ಹಾಲು, ಮೊಟ್ಟೆ, ಬಾಳೆಹಣ್ಣು ಮತ್ತು ಬ್ರೆಡ್ ವಿತರಿಸಲಾಗುವುದು. ಶಿಬಿರದಲ್ಲಿ ರಾಷ್ಟಿçÃಯ ಮಾಜಿ ಹಾಕಿ ಆಟಗಾರ ರಾದ ದೇವದಾಸ್, ಮಿಲನ್ ಬಾಬಿ ಸೇರಿದಂತೆ ಹಲವರು ಆಗಮಿಸಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಕ್ಲಬ್ ಗೌರವಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸಹ ಕಾರ್ಯದರ್ಶಿ ಬಿ.ಆರ್. ಮಹೇಶ್, ಖಜಾಂಚಿ ಕೆ.ಜೆ. ಗಿರೀಶ್, ನಿರ್ದೇಶಕರುಗಳಾದ ಮಿಲನ್, ರೈಲ್ವೇಸ್ ಹಾಕಿ ತಂಡದ ಆಟಗಾರ ಸನತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.