ಮಡಿಕೇರಿ, ಏ. ೨೨: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಸಂಭ್ರಮದಿAದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ, ಅಂಬೇಡ್ಕರ್ ಅವರ ಗುರಿ ಮುಟ್ಟುವ ಇಚ್ಚಾಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಸಂವಿಧಾನದ ಆಶಯ ದಂತೆ ಸಮುದಾಯದ ಬೆಳವಣಿಗೆಗೆ ಮಹಿಳೆಯರೂ ಸೇರಿದಂತೆ ಎಲ್ಲರೂ ಅಭಿವೃದ್ಧಿ ಹೊಂದಬೇಕೆAದರು.

೨ನೇ ಬಿ.ಕಾಂ ವಿದ್ಯಾರ್ಥಿನಿ ಹೆಚ್.ಎನ್. ಶ್ರುತಿ ಮಾತನಾಡಿ, ಭಾರತ ರತ್ನ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಕುರಿತ ತತ್ವಗಳನ್ನು ವಿವರಿಸಿದರು.

ಗಣಿತ ವಿಭಾಗದ ಮುಖ್ಯಸ್ಥ ಡಾ. ಆರ್.ರಾಜೇಂದ್ರ ಮಾತನಾಡಿ, ಅಂಬೇಡ್ಕರ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗಣಕ ಶಾಸ್ತçವಿಭಾಗದ ಮುಖ್ಯಸ್ಥ ಪ್ರೊ. ಎಂ.ಎನ್.ರವಿಶAಕರ್ ಮಾತನಾಡಿ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶಿಕ್ಷಣವೇ ಅಸ್ತç ಎಂಬುದನ್ನು ಅಂಬೇಡ್ಕರ್ ಅವರು ನಿರೂಪಿಸಿದ್ದಾರೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ವಿ. ಮಹೇಂದ್ರ ಮಾತನಾಡಿ, ಸಂವಿಧಾನದ ಮೂಲ ಆಶಯವನ್ನು ಸಾಕಾರಗೊಳಿಸಲು ನಾವು ಬದಲಾಗುವುದರೊಂದಿಗೆ ಎಲ್ಲರನ್ನೂ ಬದಲಾಯಿಸಬೇಕೆಂದು ಅಭಿಪ್ರಾಯಪಟ್ಟರು. ಎನ್‌ಎಸ್‌ಎಸ್ ನಾಯಕ ಮನೋಜ್ ಮಾತನಾಡಿ, ಜೀತ ಪದ್ಧತಿ ಮತ್ತು ಶೋಷಣೆ ಇನ್ನೂ ಸಮಾಜದಲ್ಲಿ ಇದೆ, ಇದನ್ನು ತೊಡೆದು ಹಾಕಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಯಿತು. ಎನ್‌ಸಿಸಿ ನಾಯಕ ಮೋನಿಶ್ ಮತ್ತು ಗುಣಶೇಖರ್, ಹಿಂದಿ ಉಪನ್ಯಾಸಕಿ ಖುರ್ಶಿದ್‌ಬಾನು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಎಸ್.ಎಂ. ನಿಶ್ಮಿತ ಮತ್ತು ಎಸ್.ಪಿ. ಕವನ ಪ್ರಾರ್ಥಿಸಿದರು. ವಿದ್ಯಾರ್ಥಿ ಗಳಾದ ಟಿ.ವಿ. ವರ್ಷಾ ನಿರೂಪಿಸಿದರು, ಎಂ.ಕೆ.ಅಮೃತಾ ಸ್ವಾಗತಿಸಿದರು. ಕೌಶಲ್ಯ ರೈ ವಂದಿಸಿದರು.