ಮಡಿಕೇರಿ, ಏ. ೨೨: ಚಾಲೆಂಜರ್ಸ್ ಯೂತ್ ಕ್ಲಬ್ ವತಿಯಿಂದ ೬ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಹಲವಾರು ಕ್ರೀಡಾಕೂಟಗಳನ್ನು ಗ್ರಾಮದಲ್ಲಿ ಆಯೋಜನೆ ಮಾಡುತ್ತಿವೆ ಎಂದರು. ಸಮಾಜ ಸೇವಕ ಕಳ್ಳಿಚಂಡ ಗೌತಮ್ ಕ್ರಿಕೆಟ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಹಲವಾರು ಕ್ರೀಡಾಕೂಟಗಳನ್ನು ಗ್ರಾಮದಲ್ಲಿ ಆಯೋಜನೆ ಮಾಡುತ್ತಿವೆ ಎಂದರು. ಸಮಾಜ ಸೇವಕ ಕಳ್ಳಿಚಂಡ ಗೌತಮ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶೀಲಾ, ಶಿಲ್ಪ, ವಿಜು, ಸಂಘದ ಅಧ್ಯಕ್ಷ ರವೀಂದ್ರ ಬಾವೆ, ಪ್ರಮುಖರಾದ ಅರುಣ್, ಮೋಹನ್, ಅಬ್ದುಲ್ ಮುಜೀಬ್, ಅಬ್ದುಲ್ ಜಲೀಲ್, ಅಶ್ರಫ್, ಹರಿದಾಸ್, ರದೀಶ್ ಕುಮಾರ್ ಸೇರಿದಂತೆ ಆಟಗಾರರು, ಸ್ಥಳೀಯರು ಹಾಜರಿದ್ದರು.