ಮಡಿಕೇರಿ, ಏ. ೨೨: ಕೊಡಗು ಜಿಲ್ಲಾ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘದ ಅಧ್ಯಕ್ಷರಾಗಿ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜು ಶಿಕ್ಷಕ ಪಡಿಞರಂಡ ಪ್ರಭುಕುಮಾರ್ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿಯಾಗಿ ನಂಜರಾಯಪಟ್ಟಣ ಪ್ರೌಢಶಾಲಾ ಸಹಶಿಕ್ಷಕ ನಾಗರಾಜು, ಸಹಕಾರ್ಯದರ್ಶಿಯಾಗಿ ಭಾಗಮಂಡಲ ಪ.ಪೂ. ಕಾಲೇಜು ಸಹಶಿಕ್ಷಕ ಸಣ್ಣಪಾಲನಾಯಕ್, ಅನುದಾನಿತ ವಿದ್ಯಾಸಂಸ್ಥೆಗಳ ಪಿಂಚಣಿ ವಂಚಿತ ನೌಕರರ ಜಿಲ್ಲಾ ಸಂಚಾಲಕರಾಗಿ ಶನಿವಾರಸಂತೆ ಮಾರುತಿ ಪ್ರೌಢಶಾಲೆಯ ಸಹಶಿಕ್ಷಕ ಜಯಕುಮಾರ್, ಉಪಾಧ್ಯಕ್ಷರುಗಳಾಗಿ ಗೋಣಿಕೊಪ್ಪ ಪ್ರೌಢಶಾಲಾ ಶಿಕ್ಷಕ ಗಿಡ್ಡಯ್ಯ, ಹೆಬ್ಬಾಲೆ ಪ್ರೌಢಶಾಲಾ ಶಿಕ್ಷಕ ವೆಂಕಟನಾಯಕ್, ಮರಗೋಡು ಪ್ರೌಢಶಾಲಾ ಶಿಕ್ಷಕ ಶಿವಪ್ರಸಾದ್ ಆಯ್ಕೆಯಾಗಿದ್ದಾರೆ.