ಚೆಟ್ಟಳ್ಳಿ, ಏ. ೨೨: ಜನರ ಆರೋಗ್ಯಕ್ಕೆ ಪೂರಕವಾಗವಾಗಿರಬೇಕಾಗಿದ್ದ ಆಸ್ಪತ್ರೆ ಇಲ್ಲಿ ಮಾರಕ ಎಂಬAತಾಗಿದೆ. ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ಸಿಗದೆ ರೋಗಿಗಳು ಪರಿತಪಿಸುತ್ತಿದ್ದು, ವಾತಾವರಣವೂ ಹದಗೆಟ್ಟ ಪರಿಣಾಮ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದುಸ್ಥಿತಿಗೆ ತಲುಪಿದೆ.
ಜಿಲ್ಲಾ ಪಂಚಾಯಿತಿಯಿAದ ನಿರ್ವಹಣೆಕೊಳ್ಳಪಟ್ಟಿರುವ ಚೆಟ್ಟಳ್ಳಿ ಅರೋಗ್ಯ ಕೇಂದ್ರಕ್ಕೆ ಮೇಜರ್ ಸರ್ಜರಿಯ ಅವಶ್ಯಕತೆಯಿದೆ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.
ಚೆಟ್ಟಳ್ಳಿ ‘ಗ್ರೇಡ್ ೧’ ಗ್ರಾಮ ಪಂಚಾಯಿತಿಯಾಗಿದ್ದು, ಸುಮಾರು ಅರು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇದಲ್ಲದೆ ಸುತ್ತಮುತ್ತಲಿನ ಗ್ರಾಮಗಳಾದ ವಾಲ್ನೂರು, ಮತ್ತಿಕಾಡು, ಅಭತ್‌ಮಂಗಲ, ಪಂಚಾಯಿತಿಯ ಅನೇಕರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ಆದರೆ, ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಪರದಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಈ ಆಸ್ಪತ್ರೆಯಲ್ಲಿ ನಿತ್ಯ ೫-೬ ಹೆರಿಗೆಯಾಗುತ್ತಿದ್ದವು. ಇದೀಗ ಉಲ್ಭಣವಾಗಿರುವ ಸಮಸ್ಯೆಯಿಂದ ರೋಗಿಗಳು ಆಸ್ಪತ್ರೆಗೆ ತೆರಳಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ. ರೋಗಿಗಳು ಆಗಮಿಸಿದರೂ ಓರ್ವ ಶುಶ್ರೂಷಕಿ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.
ಇದರೊಂದಿಗೆ ಓರ್ವ ವೈದ್ಯರಿದ್ದಾರೆ. ಸಿಬ್ಬಂದಿ ರಜೆ ಮಾಡಿದರೆ ಆಸ್ಪತ್ರೆಗೆ ಬೀಗ ಜಡಿದು ‘ಕೋಮ’ ಸ್ಥಿತಿಗೆ ಜಾರುತ್ತದೆ. ಚೆಟ್ಟಳ್ಳಿಯ ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಕಳೆದುಕೊಂಡು ಅನಾಥನಾಗಿದ್ದು, ಆತ ಅನಾರೋಗ್ಯದಿಂದ ಇಲ್ಲಿನ ಸಂತೆಮಾಳದಲ್ಲಿ ಮಲಗಿ ಬದುಕನ್ನು ದೂಡುತಿದ್ದ. ನಿನ್ನೆ ದಿನ ಅಸ್ವಸ್ಥಗೊಂಡ ಆತನನ್ನು ಚೆಟ್ಟಳ್ಳಿಯ ಸಾರ್ವಜನಿಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಗೆ ಬೀಗ ಹಾಕಿತ್ತು. ಆತನಿಗೆ ಯಾರು ವಾರಿಸುದಾರರೇ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ದಾಖಲಿಸಲಾಗುವುದಿಲ್ಲ ಎಂದು ಮಡಿಕೇರಿ ಆಸ್ಪತ್ರೆಯಲ್ಲಿ ವಿಚಾರಿಸುವಾಗ ಹೇಳಿದ್ದಾರೆ. ಅನಂತರ ಆತನನ್ನು ಚೆಟ್ಟಳ್ಳಿಯ ಸಂತೆಮಾಳದಲ್ಲಿಯೇ ಮಲಗಿಸಿ ಸಾರ್ವಜನಿಕರು ವೈದ್ಯರ ಕೆಲಸವನ್ನು ಮಾಡಿ ಉಪಚರಿಸಿದ್ದಾರೆ.
ಹದಗೆಟ್ಟಿರುವ ಕಟ್ಟಡ
ಸಿಬ್ಬಂದಿ ಕೊರತೆ, ಸೂಕ್ತ ಚಿಕಿತ್ಸೆ ಇಲ್ಲ ಎಂಬ ಕೊರಗಿನ ನಡುವೆ ಆಸ್ಪತ್ರೆ ಕಟ್ಟಡವೂ ಹದಗೆಟ್ಟಿದೆ. ವಸತಿಗೃಹ, ಶವಾಗಾರ ಪಾಳುಬಿದ್ದು ಭೂತ ಬಂಗಲೆಯAತಿದೆ. ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸೇರಿ ಗಿಡಗಳನ್ನು ನೆಟ್ಟು ಆಸ್ಪತ್ರೆ ಸುತ್ತಮುತ್ತಲನ್ನು ಕಾಡಾಗಿ ಪರಿವರ್ತಿಸಿದೆ.
ಅಸಮರ್ಪಕ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣದಿಂದ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯವನ್ನು ಸಂಬAಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.