ಕೋವರ್‌ಕೊಲ್ಲಿ ಇಂದ್ರೇಶ್

ಮಡಿಕೇರಿ, ಏ. ೨೨: ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳು ಮೆಣಸಿನ ದರ ಏರುಮುಖವಾಗಿರುವ ಬೆನ್ನಲ್ಲೇ ಪುಟ್ಟ ಜಿಲ್ಲೆ ಕೊಡಗಿನಲ್ಲೂ ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡು ಬಂದಿದೆ.

ಗುಡ್ಡಗಾಡು ಪ್ರದೇಶವಾಗಿರುವುದ ರಿಂದ ತೋಟ ಗದ್ದೆ ಕೆಲಸಗಳಿಗೆ ವಾಹನಗಳು ಅನಿವಾರ್ಯ. ಕಾಫಿ ದರ ಹೆಚ್ಚಳದ ಕಾರಣದಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ರೈತರು ವಾಹನಗಳ ಖರೀದಿಯತ್ತ ಆಸಕ್ತರಾಗಿರುವುದು ಮಡಿಕೇರಿ ಪ್ರಾದೇಶಿಕ ಇಲಾಖೆ ನೀಡಿದ ಅಂಕಿ ಅಂಶಗಳು ತಿಳಿಸಿವೆ. ಕೊಡಗಿನ ಪ್ರಾದೇಶಿಕ ಸಾರಿಗೆ ಇಲಾಖೆಯು ಕಳೆದ ಮಾರ್ಚ್ ೩೧ ಕ್ಕೆ ಇಲಾಖೆ ನಿಗದಿ ಪಡಿಸಿದ ಗುರಿ ಮೀರಿ ಶೇಕಡಾ ೧೧೦ ರಷ್ಟು ಸಾಧನೆ ಮಾಡಿದೆ.

ಇದಷ್ಟೇ ಅಲ್ಲದೆ ಜಿಲ್ಲೆಯಲ್ಲಿ ನೋಂದಾ ಯಿತವಾಗುತ್ತಿರುವ ಐಷಾರಾಮಿ ವಾಹನಗಳ ಸಂಖ್ಯೆಗಳಲ್ಲಿಯೂ ಭಾರೀ ಹೆಚ್ಚಳ ಕಂಡು ಬಂದಿದೆ. ಕಳೆದ ಸೆಪ್ಟೆಂಬರ್ ೨೦೨೪ ರಿಂದ ಡಿಸೆಂಬರ್ ೨೦೨೪ ರ ವರೆಗೆ ಜಿಲ್ಲೆಯಲ್ಲಿ ೨೦ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ೫೦ ಐಷಾರಾಮಿ ವಾಹನಗಳು ನೋಂದಾಯಿತವಾಗಿವೆ. ಆದರೆ ಜನವರಿ ಒಂದನೇ ತಾರೀಖಿನಿಂದ ಏಪ್ರಿಲ್ ೧೯ ನೇ ತಾರೀಖಿನ ವರೆಗೆ ಒಟ್ಟು ೧೧೯ ವಾಹನಗಳು ನೋಂದಾವಣೆಯಾಗಿವೆ. ಈ ವರ್ಷದ ಮೊದಲ ೧೨೦ ದಿನಗಳಲ್ಲಿ ೧೧೯ ವಾಹನಗಳು ನೋಂದಾವಣೆ ಆಗಿದ್ದು ಸರಾಸರಿ ದಿನಕ್ಕೊಂದು ಐಷಾರಾಮಿ ಕಾರು ನೋಂದಾವಣೆ ಆದಂತಾಗಿದೆ. ಇದರಲ್ಲಿ ಹೆಚ್ಚಿನ ಶ್ರೀಮಂತರು ಖರೀದಿಸಿರುವುದು ಟೊಯೋಟಾ ಇನ್ನೋವಾ, ಮರ್ಸಿಡಿಸ್ ಬೆಂಜ್ , ಬಿಎಂಡಬ್ಲುö್ಯ, ಮಹೀಂದ್ರಾ ಎಕ್ಸ್ ಯುವಿ, ವಾಹನಗಳಾಗಿವೆ.

ಕಳೆದ ಏಪ್ರಿಲ್ ನಾಲ್ಕರಂದು ಬೆಂಗಳೂರಿನ ಸದಾಶಿವ ನಗರದ ನಿವಾಸಿಯೊಬ್ಬರು ೨.೧೩ ಕೋಟಿ ರೂಪಾಯಿ ಮೌಲ್ಯದ ಟೊಯೋಟ ಲ್ಯಾಂಡ್ ಕ್ರೂಸರ್ ವಾಹನ ಖರೀದಿಸಿದ್ದು ಇದೇ ಅತ್ಯಧಿಕ ಮೌಲ್ಯದ್ದಾಗಿದೆ. ಜನವರಿ ೯ ರಂದು ಬೆಂಗಳೂರಿನ ರಾಜಾಜಿನಗರ ನಿವಾಸಿಯೊಬ್ಬರು ೧.೧೧ ಕೋಟಿ ರೂಪಾಯಿ ಮೌಲ್ಯದ ಬಿಎಂಡ್ಲುö್ಯ ಎಕ್ಸ್ ೧ ಸ್ಪೋರ್ಟ್ಸ್ ವಾಹನ ಖರೀದಿಸಿ ಇಲ್ಲಿ ನೋಂದಾಯಿಸಿದ್ದಾರೆ. ಇದು ಜಿಲ್ಲೆಯಲ್ಲಿ ನೋಂದಾವಣೆಗೊAಡಿರುವ ಎರಡನೇ ಅತ್ಯಧಿಕ ಮೌಲ್ಯದ ವಾಹನ ಆಗಿದೆ.

ಕಳೆದ ಮಾರ್ಚ್ ೩೧ ಕ್ಕೆ ಕೊನೆಗೊಂಡ ೧೨ ತಿಂಗಳಿನಲ್ಲಿ ಕೊಡಗಿನಲ್ಲಿ ಒಟ್ಟು ೪೨೮೨ ಕಾರುಗಳು ( ಲಘು ಮೋಟಾರು ವಾಹನ) ನೋಂದಾವಣೆಗೊAಡಿದ್ದರೆ ಕಳೆದ ಅಕ್ಟೋಬರ್ ಒಂದರಿAದ ಏಪ್ರಿಲ್ ೨೦ ರ ವರೆಗಿನ ಆರುವರೆ ತಿಂಗಳಿನಲ್ಲಿಯೇ ಒಟ್ಟು ೨೮೩೬ ಕಾರುಗಳು ನೋಂದಾವಣೆಗೊAಡಿದ್ದು ಇದು ಜನರು ಕಾರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುವುದನ್ನು ಸೂಚಿಸಿದೆ.

ಕೊಡಗಿನ ಪ್ರಾದೇಶಕ ಸಾರಿಗೆ ಇಲಾಖೆಯೂ ಗುರಿ ಮೀರಿ ಸಾಧನೆ ಮಾಡಿದೆ. ಇಲಾಖೆ ವಾರ್ಷಿಕ ಆದಾಯದ ಗುರಿ ಸುಮಾರು ೧೨೧ ಕೋಟಿ ರೂಪಾಯಿಗಳಷ್ಟು ನಿಗದಿಪಡಿಸಿದ್ದರೆ ಮಾರ್ಚ್ ೩೧ ಕ್ಕೆ ಕೊನೆಗೊಂಡ ವರ್ಷದಲ್ಲಿ ಶೇಕಡಾ ೧೧೦ ರಷ್ಟು ಪ್ರಗತಿ ಸಾಧಿಸಿ ೧೩೪.೮೪ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹವಾಗಿದೆ.

(ಮೊದಲ ಪುಟದಿಂದ) ಸಾಮಾನ್ಯವಾಗಿ ಪ್ರಸಕ್ತ ವರ್ಷದ ತೆರಿಗೆ ಸಂಗ್ರಹದ ಶೇಕಡಾ ೧೦ ರಷ್ಟನ್ನು ಹೆಚ್ಚಿಸಿ ಗುರಿ ನಿಗದಿಪಡಿಸಲಾಗುತ್ತದೆ. ಕೊಡಗು ಸಾರಿಗೆ ಇಲಾಖೆ ಕೆಲ ವರ್ಷಗಳಿಂದ ಗುರಿ ಮೀರಿದ ಸಾಧನೆ ಮಾಡುತ್ತಿದೆ.

ಕಳೆದ ವರ್ಷ ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್ಮೆಂಟ್ ಕಾಫಿ ದರ ೫೦ ಕೆಜಿ ಚೀಲವೊಂದಕ್ಕೆ ಸುಮಾರು ೧೪ ರಿಂದ ೧೮ ಸಾವಿರ ರೂಪಾಯಿಗಳವರೆಗೆ ಧಾರಣೆ ಇದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು ಉತ್ಪಾದನೆ ತೀವ್ರವಾಗಿ ಕುಸಿದ ಪರಿಣಾಮವಾಗಿ ದರವು ಈಗ ೨೨ ಸಾವಿರ ರೂಪಾಯಿಗಳಿಂದ ೨೭ ಸಾವಿರ ರೂಪಾಯಿಗಳ ವರೆಗೂ ಏರಿಕೆ ಆಗಿದೆ. ಅಲ್ಲದೆ ಕ್ವಿಂಟಾಲ್ ಕಾಳು ಮೆಣಸಿನ ದರವೂ ಹೆಚ್ಚಾಗಿದ್ದು ಕಿಲೋಗೆ ಒಂದು ಸಾವಿರ ರೂಪಾಯಿ ತಲುಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ವಾಹನ ಸಾಲ ಮಾಡಲು ಹಿಂಜರಿಯದೆ ಸಾಲದ ಬಡ್ಡಿ ದರವೂ ಕಡಿಮೆ ಇರುವುದರಿಂದ ಖರೀದಿಯತ್ತ ಮುಖ ಮಾಡಿದ್ದಾರೆ.