ಮಡಿಕೇರಿ, ಏ. ೨೨: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕೌಟುಂಬಿಕ ಹಾಕಿ ಉತ್ಸವ ಈ ಬಾರಿಯ ಮುದ್ದಂಡ ಕಪ್‌ನ ಕ್ವಾರ್ಟರ್ ಫೈನಲ್ ಹಂತಕ್ಕೆ ಮೊದಲ ನಾಲ್ಕು ತಂಡಗಳಾಗಿ ಚೇಂದAಡ, ಚೆಪ್ಪುಡಿರ, ಮಂಡೇಪAಡ ಹಾಗೂ ಕುಪ್ಪಂಡ (ಕೈಕೇರಿ) ತಂಡಗಳು ತಲುಪಿವೆ. ಈ ನಾಲ್ಕು ತಂಡಗಳಲ್ಲಿ ಮೂರು ಕುಟುಂಬಗಳು ಹಿಂದಿನ ಉತ್ಸವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ, ಚೆಪ್ಪುಡಿರ ಕುಟುಂಬ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿರಿಸಿದೆ.

ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜರುಗುತ್ತಿರುವ ಬೆಳ್ಳಿಹಬ್ಬ ಸಂಭ್ರಮದ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಮೊದಲ ಪ್ರಿಕ್ವಾರ್ಟರ್ ಫೈನಲ್ ಪಂದ್ಯ ಇಂದು ಜರುಗಿತು. ಹಾಕಿ ಅಭಿಮಾನಿಗಳು ಈ ಪಂದ್ಯದಲ್ಲಿ ಭಾರೀ ಹೋರಾಟ ನಿರೀಕ್ಷಿಸಿದ್ದರಾದರೂ ಬಹುತೇಕ ನಾಲ್ಕು ಪಂದ್ಯಗಳೂ ಏಕಪಕ್ಷೀಯವಾಗಿ ಮುಕ್ತಾಯ ಕಂಡಿದ್ದು, ಒಂದು ರೀತಿಯಲ್ಲಿ ಕ್ರೀಡಾಸಕ್ತರಿಗೆ ನಿರಾಶೆ ಮೂಡಿಸಿತ್ತು.

ಇಂದಿನ ಪಂದ್ಯಾಟದ ವಿವರ ಇಂತಿದೆ

ಮೇಚಿಯAಡ ಮತ್ತು ಚೇಂದAಡ ೬-೦ ಗೋಲುಗಳ ಅಂತರದಲ್ಲಿ ಚೇಂದAಡ ತಂಡ ಜಯ ಸಾಧಿಸಿತು. ಚೇಂದAಡ ಪರ ಸುಬ್ಬಿ ಸುಬ್ಬಯ್ಯ ೪ ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ ೧ ಗೋಲು ದಾಖಲಿಸಿದರು.

(ಮೊದಲ ಪುಟದಿಂದ) ಮೇಚಿಯಂಡ ವಿನಿತ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಂಜಪರವAಡ ಮತ್ತು ಚೆಪುö್ಪಡಿರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, ನರನ್ ಕಾರ್ಯಪ್ಪ ಹಾಗೂ ಪ್ರಣವ್ ತಿಮ್ಮಯ್ಯ ತಲಾ ೧ ಗೋಲು ದಾಖಲಿಸಿದರು. ಅಂಜಪರವAಡ ಜತನ್ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಸಣ್ಣುವಂಡ ಮತ್ತು ಮಂಡೇಪAಡ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಮಂಡೇಪAಡ ಗೆಲುವು ಸಾಧಿಸಿತು. ಮಂಡೇಪAಡ ಪರ ಕವನ್ ಮುತ್ತಪ್ಪ ೨, ಚಂಗಪ್ಪ ಹಾಗೂ ನಂಜಪ್ಪ ತಲಾ ೧ ಗೋಲು ದಾಖಲಿಸಿದರು. ಸಣ್ಣುವಂಡ ಪರ ಯತಿನ್ ಅಯ್ಯಪ್ಪ ೧ ಗೋಲು ಬಾರಿಸಿದರು. ಸಣ್ಣುವಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಪರದಂಡ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ೫-೨ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ಸಾಧಿಸಿತು. ಕುಪ್ಪಂಡ ಪರ ಜಗತ್ ೨, ಸೋಮಯ್ಯ, ಪ್ರಧಾನ್, ದ್ಯಾನ್ ತಲಾ ೧ ಗೋಲು ದಾಖಲಿಸಿದರು. ಪರದಂಡ ಪರ ಪ್ರಜ್ವಲ್ ಪೂವಣ್ಣ ೨ ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಚೆಪ್ಪುಡಿರ ಕಾರ್ಯಪ್ಪ, ಅಜ್ಜೇಟಿರ ವಿಕ್ರಂ ಉತ್ತಪ್ಪ, ಮೂಡೆರ ಕಾಳಯ್ಯ, ಚೆಯ್ಯಂಡ ಭನಿತ್ ಬೋಜಣ್ಣ ಕಾರ್ಯನಿರ್ವಹಿಸಿದರು.