ಮಡಿಕೇರಿ, ಏ. ೨೨: ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ವಸ್ತç ಸಂಹಿತೆಯ ನೆಪವೊಡ್ಡಿ ಪವಿತ್ರವಾದ ಜನಿವಾರವನ್ನು ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಯಿತು. ವಸ್ತç ಸಂಹಿತೆಯ ನೆಪವೊಡ್ಡಿ ಪವಿತ್ರವಾದ ಜನಿವಾರವನ್ನು ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಈ ಕೃತ್ಯವೆಸಗಿದವರ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಿಧಿಯ ಅಧ್ಯಕ್ಷ ಸಿ. ರಾಮಮಚಂದ್ರ ಮುಗೂರು ಬ್ರಾಹ್ಮಣರು ಗಾಯತ್ರಿ ಮಂತ್ರವನ್ನು ಪಠಿಸಿ ಜನಿವಾರವನ್ನು ಧರಿಸುತ್ತಾರೆ. ಅಂತಹ ಪವಿತ್ರವಾದ ಜನಿವಾರವನ್ನು ತೆಗೆಸುವುದು ಹಿಂದೂ ಧರ್ಮದ ಬುಡಕ್ಕೆ ಕೊಡಲಿ ಪೆಟ್ಟು ಕೊಟ್ಟಂತೆ. ಜನಿವಾರ

(ಮೊದಲ ಪುಟದಿಂದ) ಉಳಿದರೆ ಮಾತ್ರ ಹಿಂದೂ ಧರ್ಮದ ರಕ್ಷಣೆಯೂ ಸಾಧ್ಯ ಎಂದರಲ್ಲದೆ ಜನಿವಾರದ ಮೇಲೆ ದೌರ್ಜನ್ಯವೆಸಗಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿಧಿಯ ಮಾಜಿ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಸನಾತನ ಭಾರತಕ್ಕೆ ಗಾಯತ್ರಿ ಮಂತ್ರ, ವೇದ ಉಪನಿಷತ್ತು ಹಾಗೂ ಜನಿವಾರವೇ ಅಡಿಪಾಯವಾಗಿದೆ. ಎಲ್ಲಾ ದೇವಾನುದೇವತೆಗಳನ್ನು ಜನಿವಾರದಲ್ಲಿ ಆವಾಹನೆ ಮಾಡಿಕೊಂಡು ಅದನ್ನು ಧರಿಸಲಾಗುತ್ತದೆ. ಇದರ ಬೆಲೆ ತಿಳಿಯದ ಅಧಿಕಾರಿ ಜನಿವಾರವನ್ನು ತೆಗೆಸಿದ್ದು ಖಂಡನೀಯವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಜನಿವಾರವನ್ನು ಅಲುಗಾಡಿಸಿದರೆ ಸನಾತನ ಭಾರತವನ್ನು ಅಲುಗಾಡಿಸಿದಂತೆ ಎಂದು ಅವರು ಎಚ್ಚರಿಕೆ ನೀಡಿದರು.

ನಿಧಿಯ ಕಾರ್ಯದರ್ಶಿ ಬಿ.ಕೆ. ಜಗದೀಶ್ ಮಾತನಾಡಿ, ಬ್ರಾಹ್ಮಣ ಸಮುದಾಯ ಶಾಂತಿ ಸೌಹಾರ್ದತೆಗೆ ಒತ್ತು ನೀಡುವ ಸಮುದಾಯವಾಗಿದೆ. ಆದರೆ ನಮ್ಮ ಶಾಂತಿ ಸಹನೆಯೇ ನಮ್ಮ ದೌರ್ಬಲ್ಯ ಎಂದು ಭಾವಿಸುವುದು ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕೆಂದು ಆಗ್ರಹಿಸಿದರು.

ಬಳಿಕ ಅಪರ ಜಿಲ್ಲಾಧಿಕಾರಿ ಐಶ್ವಯ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯ ವಿವರ :

ವಿದ್ಯಾರ್ಥಿಗಳ ಜನಿವಾರ ತೆಗೆಸಿ ದುರ್ನಡತೆಯನ್ನು ತೋರಿದ ಸಿಬ್ಬಂದಿಗಳನ್ನು ಶಿಕ್ಷೆಗೊಳಪಡಿಸಬೇಕು. ಜನಿವಾರವನ್ನು ಉಪನಯನದ ಕಾರ್ಯಕ್ರಮದಲ್ಲಿ ವಟುವಿನ ತಂದೆಯು ಪವಿತ್ರವಾದ ಗಾಯತ್ರಿ ಮಂತ್ರವನ್ನು ಉಪದೇಶಿಸಿ ನೆರೆದ ಗುರುಹಿರಿಯರ ಆಶೀರ್ವಾದದೊಂದಿಗೆ ವಟುವಿಗೆ ಹಾಕುತ್ತಾನೆ. ಜನಿವಾರದಲ್ಲಿ ಗಾಯತ್ರಿ ದೇವಿ ಹಾಗೂ ಸೂರ್ಯನ ಆವಾಹನೆ ಮಾಡಲಾಗಿರುತ್ತದೆ. ಜನಿವಾರ ಧಾರಣೆಯು ರಾಮಾಯಣ ಕಾಲದಿಂದಲೇ ನಡೆದುಬಂದಿದ್ದು, ಸಂವಿಧಾನದಲ್ಲೂ ಈ ಕುರಿತು ಆಕ್ಷೇಪ ಇಲ್ಲದಿರುವಾಗ ವಿದ್ಯಾರ್ಥಿಗಳ ಮಾನಸಿಕತೆಗೆ ಧಕ್ಕೆ ತರುವಂತಹ ದುರ್ವರ್ತನೆ ತೋರಿರುವ ಸಿಬ್ಬಂದಿ ಕ್ಷಮಾರ್ಹರಲ್ಲ. ಈ ಪ್ರಕರಣದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸೂಕ್ತವಾದ ಪರಿಹಾರೋಪಾಯವನ್ನು ಸರಕಾರವು ಕಂಡುಕೊAಡು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದAತೆ ಸಂಬAಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು ಎಂಬಿತ್ಯಾದಿ ಒತ್ತಾಯಗಳನ್ನು ಮನವಿಯಲ್ಲಿ ಮಾಡಲಾಗಿದೆ.

ಪ್ರತಿಭಟನೆಯಲ್ಲಿ ನಿಧಿಯ ಉಪಾಧ್ಯಕ್ಷ ಕೆ.ಎಸ್. ರಾಜಶೇಖರ, ಖಜಾಂಚಿ ರವಿಶಂಕರ್, ನಿಧಿ ನಿರ್ದೇಶಕರಾದ ಭರತೇಶ್ ಖಂಡಿಗೆ, ಬಿ.ಕೆ. ಅರುಣ್‌ಕುಮಾರ್, ಶಿವಶಂಕರ್, ಪುರುಶೋತ್ತಮ, ಸವಿತಾ ಭಟ್, ಲಲಿತಾ ರಾಘವನ್, ಮಂಜುಳ ರಾಮಕೃಷ್ಣ, ಪ್ರಮುಖರಾದ ಸಂಪತ್ ಕುಮಾರ್, ರಮೇಶ್ ಹೊಳ್ಳ, ಸಂಜೀವ ಜೋಶಿ, ಸುಬ್ರಮಣ್ಯ ಹೊಳ್ಳ, ಮತ್ತಿತರರು ಪಾಲ್ಗೊಂಡಿದ್ದರು.